ನಾನು ರಾಮ, ನೀನು ಸೀತೆ ಆಗೊಣವೇ?

ಪಾನಕ ಸಮಾರಾಧನೆ, ನಮಗೆ ನಿಂಬೆ, ಬೇಲ, ಸಿಹಿ, ಹುಳಿ ಮಿಳಿತ ಹಣ್ಣುಗಳು
ನೆನಪಿದೆಯೇ ನೀಲಾಂಬರಿ! ಕೋಸಂಬರಿ ಸೇವೆ, ಹೆಸರು ಬೇಳೆ, ಕಡಲೆ ಉಸಲಿ
ಘಮ, ಘಮ ಒಗ್ಗರಣೆ; ಕೊತ್ತಂಬರಿ, ಕರಿಬೆವು ಸುವಾಸನೆ; ತೆಂಗಿನ ತುರಿ ಬಾಯಲ್ಲಿ
ತುಂಬಿದೆದೆಯಾ ತಾರಿಣಿ! ನಿನಗೆ ಹುಳಿಯವಲಕ್ಕಿ ನೈವೇದ್ಯ; ಗುಗ್ಗರಿ ಕಾಳು ಜಗಿಯಲು
ಜೊತೆಗೆ ನೆಲಗಡಲೆ ಬೆರೆಸಿದರೆ, ನನಗೂ, ನಿನಗೂ ಮಧುಚಂದ್ರದಾ ಸಗ್ಗ ಎಟುಕುತಿರಲು
ಸವೆಯದಾ ಸಾವಿತ್ರಿ ನೀನು; ಘಾಧ ಒಲವಿನ ಗಾಯಿತ್ರಿ; ನೀ ಅನುಸೂಯ, ನಾ ಅತ್ರಿ ಅಲ್ಲವೇ?
ನೀನಲ್ಲಿ, ನಾನಿಲ್ಲಿ ಏಕಾದೆವೋ! ಒಂದಾದರೂ ಸಾರಿ ನಾನು ರಾಮ, ನೀನು ಸೀತೆ ಆಗೊಣವೇ?












Click it and Unblock the Notifications