ಕಳಚಿರಿ ಮನುಜರೆ ಬಣ್ಣದ ವೇಷವ, ನಿಲ್ಲಿಸಿರಿ ನಾಟಕವ

Shruthi Sateesh in NJಬಣ್ಣ ಕಳೆದುಕೊಂಡಿವೆ ಭಾವನೆಗಳಿಲ್ಲಿ
ಮನುಷ್ಯನ ಸ್ವಾರ್ಥದಲ್ಲಿ,ಬಿರುನುಡಿಗಳಲ್ಲಿ
ಹಸಿರಾಗಿದ್ದ ಎದೆ ಬರಡಾಗಿದೆಯಿಲ್ಲಿ
ನಿಂದನೆಯೆಂಬ ಬಾಣದ ಇರಿತದಲ್ಲಿ
ಮೃದುವಾಗಿದ್ದ ಮನ ಭಾರವಾಗಿದೆಯಿಲ್ಲಿ
ಮೌನದ ಸಂಕೋಲೆಯಲ್ಲಿ

ಬಣ್ಣ ಕಳೆದುಕೊಂಡ ಭಾವನೆಗಳಿಗೆ ರಂಗು ಬೇಕಿದೆ
ಬತ್ತಿದೆಗೆ ಪ್ರೀತಿಯೆಂಬ ಅನುಭೂತಿ ಬೇಕಿದೆ
ಭಾರವಾಗಿರುವ ಮನಕ್ಕೆ ನಗೆಬುಗ್ಗೆಯ ಚಿಲುಮೆ ಬೇಕಿದೆ
ಬರಡಾಗಿರುವ ಜೀವನಕ್ಕೆ ಭರವಸೆ ಬೇಕಿದೆ.

ಕಳಚಿರಿ ಮನುಜರೆ,
ನಿಮ್ಮ ಬಣ್ಣದ ವೇಷವ,
ನಿಲ್ಲಿಸಿರಿ ನಾಟಕವ
ಸಹನೆ,ಸ್ನೇಹ ಒಲುಮೆಯಾಡನೆ ಬೆರೆಯಿರಿ.
ಜೀವನವೆಂಬ ನಾಟಕಕ್ಕೆ ಬಣ್ಣತನ್ನಿ,
ಸಮರಸವೆಂಬ ಜೇನು ತುಂಬಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+