ಅಮರ ಮಧುರ ಪ್ರೇಮ
- ಶ್ರುತಿ ಸತೀಶ್, , ನ್ಯೂಜೆ-ರ್ಸಿ
ಸೂರ್ಯ ರಶ್ಮಿಯ ಸ್ಪರ್ಶಕೆ ಅರಳುವ ಕಮಲದಂತೆಹೃದಯದಲ್ಲಿ ಅರಳುವುದು ಪ್ರೇಮ,
ಅಮರ ಮಧುರ ಪ್ರೇಮ.
ಹೂವಿನಂತ ಹೃದಯಕ್ಕೆ ಸಿಹಿ ಜೇನ ಸುಧೆ ಪ್ರೇಮ
ಕೋಗಿಲೆಯ ಇಂಚರದಂತೆ ಮಾಧುರ್ಯ ಪ್ರೇಮ.
ಪ್ರೇಮದ ಪರಿಯ ಬಣ್ಣಿಸಲು ಪದಗಳೆಲ್ಲಿ?
ಪ್ರೇಮಿಗಳಿಗೆ ಕಾಲದ ಪರಿವೆ ಎಲ್ಲಿ?
ಪ್ರೇಮಭರಿತ ಹೃದಯ ನಿತ್ಯ ಸುಂದರ
ಬದುಕು ಬೆಳದಿಂಗಳ ಆಗರ.
ಅರಿತು ಬೆರೆತು ಜೀವಿಸಲು
ಜೊತೆಯಾಗಲಿ ಪ್ರೇಮ
ನೀಲಾಕಾಶದ ಅನಂತತೆಯಂತೆ
ಇರಲಿ ಅನುದಿನ ಪ್ರೇಮ
ಸದಾನುರಾಗದಿಂದ ಬದುಕಾಗಲಿ
ಸುಮಧುರ ಸಮಾಗಮ.












Click it and Unblock the Notifications