• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಪ್ತ(ಸುಪ್ತ?) ಭಾಷಾಪ್ರೇಮ

By Staff
|
ಸಪ್ತ(ಸುಪ್ತ?) ಭಾಷಾಪ್ರೇಮ
(ಬೆಂಗಳೂರಿನಲ್ಲಿ ಬೆಳೆಯುವಾಗ ನಾನಾಭಾಷೆಗಳು ಕಿವಿಗೆ ಬೀಳುತ್ತವೆ. ಇಂತಹ ವೈವಿಧ್ಯವೇ ಬೆಂಗಳೂರಿನ ವೈಶಿಷ್ಟ್ಯ. ಈ ಕಾರಣದಿಂದ ನನಗೂ ನಾನಾಕಾರಣಗಳಿಂದ ಕೆಲವು ಭಾಷೆಗಳು ಬರುತ್ತವೆ. ಇವೆಲ್ಲದರಲ್ಲೂ ಪಾಂಡಿತ್ಯವಿಲ್ಲದಿದ್ದರೂ (ಮತ್ತು ಈ ದೇಶದಲ್ಲಿ ನೆಲೆಸಿ 39 ವರ್ಷಗಳಾಗಿ ಆ ಭಾಷೆಗಳನ್ನು ಹೆಚ್ಚಾಗಿ ಮಾತನಾಡುವ ಬಳಕೆಯಿಲ್ಲದಿದ್ದರೂ) ಕೆಲವು ಪದ್ಯಗಳನ್ನು ಬರೆಯುವಷ್ಟು ಮಾತ್ರ ಗೊತ್ತು. ಗೊತ್ತಿರುವದಕ್ಕಿಂತಲೂ ಬರೆಯುವ ಹಂಬಲ ಹೆಚ್ಚು. ಅವುಗಳನ್ನು ಮರೆಯಬಾರದೆಂಬ ಅಭಿಪ್ರಾಯ. ಆದ್ದರಿಂದಲೇ ಏಳು ಭಾಷೆಗಳಲ್ಲಿ ಈ ಕೆಳಗೆ ಪದ್ಯಗಳನ್ನು ಬರೆದಿದ್ದೇನೆ. ಇವೆಲ್ಲಕ್ಕೂ ಸಂಸ್ಕೃತದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಸ್ರಗ್ಧರಾ ಎಂಬ ವೃತ್ತವೇ ಆಧಾರ. (‘ಮ್ರಭ್ನೈರ್ಯಾನಾಂ ತ್ರಯೇಣ ತ್ರಿಮುನಿಯತಿಯುತಾ ಸ್ರಗ್ಧರಾ ಕೀರ್ತಿತೇಯಂ’ ಎಂದು ವೃತ್ತ ಲಕ್ಷಣವನ್ನು ಹೇಳುತ್ತಾರೆ. ಎಂದರೆ, ಮ ರ ಭ ನ ಯ ಯ ಯ ಗಣಗಳಿದ್ದು ಏಳು ಅಕ್ಷರಗಳ ಮೂರು ಗುಂಪುಗಳು ಪ್ರತಿಯಾಂದು ಪಾದದಲ್ಲೂ ಇದ್ದರೆ ಅದಕ್ಕೆ ಸ್ರಗ್ಧರಾ ಎಂದು ಹೆಸರು). ಈ ಕವನದ ಓದುಗರಿಗೂ ಇವುಗಳಲ್ಲಿ ಕೆಲವು ಭಾಷೆಗಳಾದರೂ ಗೊತ್ತಿದ್ದು ಇಲ್ಲಿಲ್ಲದ ಕೆಲವು ಭಾಷೆಗಳ ಪರಿಚಯವೂ ಇರಬಹುದೆಂದುಕೊಂಡಿದ್ದೇನೆ. ಅಂತಹವರು ಆ ಭಾಷೆಗಳಲ್ಲಿ ಇದೇ ಶೈಲಿಯಲ್ಲಿ ಬರೆದರೆ ತಮಾಷಿಯಾಗಿ ಈ ಕವನದೊಡನೆ ಸೇರಿಸಿಕೊಳ್ಳಬಹುದು.

ಇಲ್ಲಿ ಓದುಗರ ಮತ್ತು ಮುದ್ರಕರ ಅನುಕೂಲಕ್ಕಾಗಿ ಕನ್ನಡ ಅಥವಾ English ಲಿಪಿಗಳಲ್ಲೇ ಎಲ್ಲಾ ಭಾಷೆಗಳನ್ನೂ ಬರೆಯಲಾಗಿದೆ. ಹಿಂದಿಯ ಪದಗಳಲ್ಲಿ ಕೊನೆಯಲ್ಲಿ ಬರುವ ಅನುಸ್ವಾರವನ್ನು ಮೂಗಿನಲ್ಲಿ ಉಚ್ಚರಿಸಬೇಕು (ಅಂದರೆ ಮೇಂ ಎಂಬುದನ್ನು ಮೇಮ್‌ ಎಂದು ಉಚ್ಚರಿಸಬಾರದು). ಅಲ್ಲದೆ, ‘>’ ಎಂಬ ಅಂಕಿತವು ಸ್ವಲ್ಪ ಎಳೆದ (English) ಅರ್ಧಾಕ್ಷರವನ್ನು ನಮೂದಿಸುತ್ತದೆ. ಮತ್ತು ‘-’ ಎಂಬ ಚಿಹ್ನೆಯು ಪುಟ್ಟ ನಿಲುಗಡೆಯನ್ನು (pauseಅನ್ನು) ಸೂಚಿಸುತ್ತದೆ.

ತೆಲುಗು ಪದ್ಯವನ್ನು ಶುದ್ಧೀಕರಿಸಲು ಸಹಾಯಮಾಡಿದ ನನ್ನ ಮಿತ್ರ ಡಾ।। ಮನೋಹರ್‌ ಮಾರೆಬೋಯನರಿಗೂ ಮತ್ತು ಹಿಂದಿಯ ಪದ್ಯವನ್ನು ಓದಿ ಸಲಹೆ ಕೊಟ್ಟ ಶ್ರೀಮತಿ ಅನುರಾಧಾ ಶ್ರೀರಂಗರಾಜನ್‌ ಅವರಿಗೂ ನನ್ನ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.

ಈ ಕವನವನ್ನು ಕಾವೇರಿಯ ಭಾವನದಿ ವಾರ್ಷಿಕ ಸಂಚಿಕೆಯಲ್ಲಿ ನವೆಂಬರ್‌ 2003ರಲ್ಲಿ ಮೊದಲ ಬಾರಿಗೆ ಪ್ರಕಟಿಸಲಾಗಿತ್ತು. ಇತ್ತೀಚೆಗೆ ಬೆಂಗಳೂರು ಮತ್ತು ಕನ್ನಡದ ಬಗ್ಗೆ ಕೆಲವು ಪತ್ರ-ಪ್ರಬಂಧ-ವಾದ-ಪ್ರತಿವಾದಗಳನ್ನು ಓದಿದಾಗ ನನಗೆ ಇದರ ನೆನಪು ಮತ್ತೆ ಬಂದಿತು. ದಟ್ಸ್‌ಕನ್ನಡ.ಕಾಂನ ಓದುಗರಿಗೂ ಇದು ರುಚಿಸಬಹುದು ...)

H.K.Ramapriyan
 • ಹಂ. ಕ. ರಾಮಪ್ರಿಯನ್‌, ಕ್ಲಾರ್ಕ್ಸ್‌ವಿಲ್‌, ಮೇರಿಲೆಂಡ್‌
 • ಮುದ್ಮುದ್ವಾಚೊನ್ನ ಭಾಷೆ- ತೊದಲಿ ತೊದಲಿನಾಲಮ್ಮ ತಿದ್ದಿಂದ ಭಾಷೆ

  ವ್ಯಾಕರ್ಣೋನ್ನಾಕ ಎನ್ನಾನ್‌ ತೆರಿಯರ ಮೊದಲೇ ಅಪ್ಡಿಯೇ ವಂದ ಭಾಷೆ ।

  ಹೆಬ್ಬಾರೈಂಗಾರ್‌ ಜನಂಗೆ ಪ್ರತಿಯಾರ್‌ ।ದಿನಮೂ ಹಾತ್ಲೆ ವಾಚೊಲ್ರ ಭಾಷೆ

  ಪಶ್ಲಾಯ್‌ ಕಲ್ತಿಂದ ಭಾಷೆ- ಮರಕೃದ್‌ ।ಸರಿಯಾ? ಚೊಲ್ಲ್‌।ಡಾ! ಮಾತೃಭಾಷೆ ।।(ಹೆಬ್ಬಾರ್‌)।।

  ಮುದ್ಮಾತಾಡಿದ್ದ ಭಾಷೆ- ತೊದಲಿ ನುಡಿದುದಂ ತಾಯಿ ತಿದ್ದಿದ್ದ ಭಾಷೆ

  ಪಂಪನ್‌ ರನ್ನನ್‌ ಮೊದಲ್ಗೊಂಡಿಹ ಕವಿವರರಿಂ ವೃದ್ಧಿಪೊಂದಿದ್ದ ಭಾಷೆ ।

  ನಮ್ಮೂರೊಳ್‌ ಸುತ್ತಮುತ್ತಲ್‌ ಜನನುಡಿಯುತಿರಲ್‌ ಕೇಳಲಿಂಪಾದ ಭಾಷೆ

  ನಮ್ಮೀ ಚೆಂದೊಳ್ಳೆ ಭಾಷೆ- ಮರೆಯದಿರದ ನೀ ನಮ್ಮ ತಾಯ್ನಾಡ ಭಾಷೆ ।।(ಕನ್ನಡ)।।

  ತಾತ್ತಾ ಕೈಯೈಪ್ಪಿಡಿತ್ತಾಯ್‌ ಕಡವುಳ ಕತೈಯೈಕ್ಕೇಳ್ಕ ನೀ ಶೆನು• ವಂದಾಯ್‌

  ಆಚಾರ್ಯರ್‌ ಶೊನ್ನ ಪೇಚ್ಚೈ ಅಫಗಿಯ ಮೊಫ।ಯಿಲ್‌ ಕೇಟ್ಟು ನೀ ಕಟು•ಕೊಂಡಾಯ್‌ ।

  ಆಫ್ವೌಾರ್ಗಳ್‌ ಪಾಶುರಂಗಳ್‌ ಎಫುದಿಯ ಶಿಲವೈ ವಾಯಿನಾಲ್‌ ಪಾಡಿರುಂದಾಯ್‌

  ಪೇರನ್ಯಾಯಂ ಇದನ್ರೋ ತಮಿಫ।ಶೈ ಅಮುದಂ ಕಟ•ದೈ ನೀ ಮರಂದಾಲ್‌ ।।(ತಮಿಳು)।।

  ಬಾಲ್ಯೇ ತೇ ಶಿಕ್ಷಿತಾ ಯಾ ಜನಯಿತೃ-ಗುರುಭಿಃ ಸುಷ್ಠು ಶುದ್ಧೀಕೃತಾ ಯಾ

  ವಾಲ್ಮೀಕಿ-ವ್ಯಾಸ-ಮುಖ್ಯ-ಪ್ರಥಿತ-ಕೃತಿ-ವರೈಃ ದೀಪಿತಾ ಶೋಭಿತಾ ಯಾ ।

  ಬಾಣಾದ್ಯೈಃ ಕಾಲಿದಾಸ-ಪ್ರಮುಖ-ಕವಿ-ವರೈಃ ಲೋಕ-ಸಂಸ್ಥಾಪಿತಾ ಯಾ

  ಗೀರ್ವಾಣೀಂ ತಾಂ ತು ಭಾಷಾಂ ಸ್ಮರಸಿ ಯದಿ ನ ಚೇತ್‌ ಜೀವನಂ ವ್ಯರ್ಥಮೇವ ।।(ಸಂಸ್ಕೃತ)।।

  ವಿನ್ನಾವೀ ಭಾಷ ನಿತ್ಯಂ ಪ್ರಿಯಸುಹೃದುಲತೋ ಬಾಲಕಾವಸ್ಥಲೋನೇ

  ಶ್ರೀಮಾನ್ವೇಮನ್ನಗಾರು ಪ್ರಮುಖಕವಿತಲೀ ಭಾಷಲೋ ರಾಶಿನಾರು ।

  ಭಕ್ತತ್ಯಾಗಯ್ಯಗಾರು- ವಿವಿಧಕೃತುಲನೀ ಭಾಷಲೋ ಪಾಡಿನಾರು

  ಚಾಲಾ ಸುಶ್ರಾವ್ಯ ಭಾಷ- ತೆಲಿಸಿ ಮರಚಿತೇ ನ್ಯಾಯಮೇಮಯ್ಯ ಚೆಪ್ಪು ।।(ತೆಲುಗು)।।

  You learned this as a young child - with a little bitta help - startin with A B C Ds;

  Chaucer, Shakespeare n Milton - many many such others - led the growth of the language;

  Almost all over this world, you can really get along, if you know how to use this;

  If you do forget this one, you will be pitiable, for its then hard to manage! (English)

  ಶಾಲಾ ಮೇಂ ತೋ ಗುರೂ ನೇ ಪಠನ್‌।ಲಿಖನ್‌।ಭೀ ಬಾಲ್ಯ ಮೇಂ ಹೀ ಸಿಖಾಯೇಂ

  ತುಲಸೀದಾಸ್‌ಜೀ ತೋ ಜಿಸ್‌ ಮೇಂ ಲಲಿತ್‌।ಪದ್‌।ಭರೀ ರಾಮ್‌ ಕಹಾನೀ ಲಿಖೇ ಹೈಂ ।

  ಮೀರಾಬಾಯೀ ತೋ ಜಿಸ್‌ ಮೇಂ ಪ್ರಿಯ್‌।ಗಿರಿಧರ್‌।ಕೋ ಪ್ರೇಮ್‌ಭಜನ್‌ ಸೇ ಪುಕಾರೀ

  ಇಸ್‌ ಭಾಷಾ ಕೋ ತೋ ಭೂಲ್‌ನಾ ಉಚಿತ್‌।ನಹಿ ತುಝೇ ಬೋಲ್‌ ಸಕೇ ಯಾ ನಹೀ ಭೀ ।।(ಹಿಂದಿ)।।

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more