ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈ ಕೆಸರಾದರೆ ಬಾಯ್ಮಾಸರು

By Staff
|
Google Oneindia Kannada News

ಕೈ ಕೆಸರಾದರೆ ಬಾಯ್ಮಾಸರು
Ramapriyan
  • ಹಂ. ಕ. ರಾಮಪ್ರಿಯನ್‌, ಕ್ಲಾರ್ಕ್ಸ್‌ವಿಲ್‌, ಮೇರಿಲೆಂಡ್‌
    [email protected]
ಭೂಮಿಯನುತ್ತಿರೆ, ಬೀಜವ ಬಿತ್ತಿರೆ, ಕಳೆಯನು ಕಿತ್ತಿರೆ, ಪೈರುಗಳುಬೆಳೆಯುವುವಷ್ಟೇ; ಅಲ್ಲದೆ ಬೆಳೆಯವು, ಕೈ ಕೆಸರಾದರೆ ಬಾಯ್ಮಾಸರು.

ಮಣ್ಣನು ಕೆತ್ತಿರೆ, ಸಸಿಗಳ ನೆಟ್ಟಿರೆ, ನೀರನು ಬಿಟ್ಟಿರೆ, ಹೂವುಗಳು
ಅರಳುವುವಷ್ಟೇ; ಅಲ್ಲದೆ ಅರಳವು, ಕೈ ಕೆಸರಾದರೆ ಬಾಯ್ಮಾಸರು.

ದನಗಳ ಸಾಕಿರೆ, ಹಾಲನು ಕರೆದಿರೆ, ಹೆಪ್ಪನು ಹಾಕಿರೆ, ಬಲು ಮೊಸರು
ದೊರಕುವುದಷ್ಟೇ; ಅಲ್ಲದೆ ದೊರಕದು, ಕೈ ಕೆಸರಾದರೆ ಬಾಯ್ಮಾಸರು.

ಶಾಲೆಗೆ ಹೋಗಿರೆ, ಪಾಠವ ಕೇಳಿರೆ, ಹಗಲಿರುಳೋದಿರೆ, ವಿದ್ಯೆಗಳು
ತಲೆಗೇರುವುವೆಲೊ; ಅಲ್ಲದೆ ಏರವು, ಕೈ ಕೆಸರಾದರೆ ಬಾಯ್ಮಾಸರು.

ಹಾಡಲು ಕಲಿತಿರೆ, ಬೆಳಗಾಗೆದ್ದಿರೆ, ಸಾಧನೆ ಮಾಡಿರೆ, ರಾಗಗಳು
ಹೊರಹೊಮ್ಮುವುವೆಲೊ, ಅಲ್ಲದೆ ಹೊರಡವು, ಕೈ ಕೆಸರಾದರೆ ಬಾಯ್ಮಾಸರು.

ಕಸುಬನು ಕಲಿತಿರೆ, ಕೆಲಸಕೆ ಹೋಗಿರೆ, ದಿನವಿಡಿ ದುಡಿದಿರೆ, ಸಂಬಳವು
ಕೈಗೂಡುವುದೆಲೊ; ಅಲ್ಲದೆ ಕೂಡದು, ಕೈ ಕೆಸರಾದರೆ ಬಾಯ್ಮಾಸರು.

ಶಿಸ್ತನು ಕಲಿತಿರೆ, ನಿಷ್ಠೆಯ ಪಡೆದಿರೆ, ಶಸ್ತ್ರವ ಪಿಡಿದಿರೆ, ಸೈನಿಕರು
ಜಯವನು ಗಳಿಪರು; ಅಲ್ಲದೆ ಗಳಿಸರು, ಕೈ ಕೆಸರಾದರೆ ಬಾಯ್ಮಾಸರು.

ವೈದ್ಯನ ಕಂಡಿರೆ, ಮಾತ್ರೆಯ ನುಂಗಿರೆ, ಪಥ್ಯದಿ ನಿಂತಿರೆ, ರೋಗಗಳು
ಗುಣವಾಗುಗುವೆಲೊ; ಅಲ್ಲದೆ ಆಗವು, ಕೈ ಕೆಸರಾದರೆ ಬಾಯ್ಮಾಸರು.

ಕೋಪವ ಶಮಿಸಿರೆ, ಕಾಮವ ದಮಿಸಿರೆ, ಭಕ್ತಿಯ ಬೆಳೆಸಿರೆ, ದೇವರೊಳು;
ಮುಕ್ತಿಯ ಗಳಿಪನು; ಅಲ್ಲದೆ ಗಳಿಸನು, ಕೈ ಕೆಸರಾದರೆ ಬಾಯ್ಮಾಸರು.


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X