ಪಲ್ಲಟ-ಪರಿಷ್ಕರಣ
| ಪಲ್ಲಟ-ಪರಿಷ್ಕರಣ | |
| ವಸ್ತುಗಳು ತಮ್ಮ ನಿರ್ದಿಷ್ಟ ಸ್ಥಾನ ತಪ್ಪಿರುವುದೇ ಕೊಳೆಯ ಮತ್ತು ಗೊಂದಲದ ಮೂಲ. ಇದು ಅಂತಃಕರಣದ ಶಿಸ್ತು ಮತ್ತು ನೈರ್ಮಲ್ಯಕ್ಕೂ ಅನ್ವಯ. ಪಂಚಭೂತಗಳು ಸ್ಥಾನಪಲ್ಲಟದ ಮೂಲಕ ಶುದ್ಧೀಕರಿಸುವ ಸಾಧನಗಳು. ಇವುಗಳಲ್ಲಿ ಪೃಥ್ವಿಯ ಪಾತ್ರ ಅನನ್ಯ. ನೀರು, ಗಾಳಿ, ಬೆಂಕಿ, ಆಕಾಶ ಇವುಗಳೆಲ್ಲ ಕೊಳೆ ತೆಗೆದರೂ, ಭೂಮಿಯ ಆಕರ್ಷಣೆಯಿಂದ ಕೊಳೆ ಬಂದು ಸೇರುವುದು ಮಣ್ಣನ್ನು. ಮಣ್ಣಲ್ಲಿ(ಪಂಚಭೂತಗಳಲ್ಲಿ) ಒಂದಾಗುವುದೇ ಶೋಧನೆಯ ಅಂತಿಮ ಗುರಿ. ಹಾಗಾದರೆ ಗುರುತ್ವಾಕರ್ಷಣೆ ಪರಿಸರದ (ಅಂತಃಕರಣದ) ನೈರ್ಮಲ್ಯಕ್ಕೆಂದೇ ಹುಟ್ಟಿತೆ? ಜೀವಿಗಳೆಲ್ಲ ಕೊನೆಯಲ್ಲಿ ಮಣ್ಣಲ್ಲಿ ಬೆರೆತುಹೋಗುವುದು ಅಂತಿಮ ಸತ್ಯ. ಹಾಗೆಂದು ಅವುಗಳ ಹುಟ್ಟೇ ಮಲದ ಮೂಲವೇ? ಹಾಗೆ ಬೆರೆಯುವುದೇ ನೈರ್ಮಲ್ಯದ ಪರಾಕಾಷ್ಠೆಯೇ? | |
![]() |
ತಾಣ ಬದಲಿಸೆ ಹೇಸು, ಇದೆ ಮಡಿಯ ಸೊಗಸು. ಒಂದೇ ಆಗಿರೆ ಅಮಲ, ಇಲ್ಲದಲಿ ಮಲಿನ; ಒಂದಾಗಿಸಲು ತಾಣ ಪಲ್ಲಟವೆ ಕರಣ; ತಾಣ ವಿನಿಮಯ ಪಂಚಭೂತದುಪಕರಣ. ಜೀವದಲೆ ಸೃಷ್ಟಿ ಹೊಲೆ ಹೊರೆಯ ಕಲ್ಮಷ, ಗಾಳಿ ಕೂಳೆಯ ಕಳೆದು ವ್ಯೋಮ ವ್ಯೂಹಕೆ ಕಳಿಸೆ, ಅನಿಲಾಗ್ನಿ ಗಗನಾಪ ಮಲಿನವೆಸೆ ಭೂದೆಸೆಗೆ, ವಾಕ್ಕಾಯ ಮನಃಶುದ್ಧಿ, ತ್ರಿಕರಣದ ಶುದ್ಧಿ, ಶುಚಿ ಶುದ್ಧಿ ಶಿಸ್ತು ತಿಳಿ ಒಂದೆ ತಿರುಳಿನ ಮೂಲ, |













Click it and Unblock the Notifications