ಎಣ್ಣೆ ಬಂದಾಗ ಕಣ್ಣುಮುಚ್ಚಿಕೊಂಡಂತೆ
| ಎಣ್ಣೆ ಬಂದಾಗ ಕಣ್ಣುಮುಚ್ಚಿಕೊಂಡಂತೆ | |
![]() |
ಎಣ್ಣೆಯು ಬರುತಿರೆ ಕಣ್ಣನು ಮುಚ್ಚುವುದೆಂಥ ಮೂರ್ಖತನ ಹೇಳುವಿರಾ? ಪರೀಕ್ಷೆ ಬರಲಿದೆ ಎನ್ನುವ ಭಯದಿಂ ಹಗಲಿರುಳೋದಿದ ವಿದ್ಯಾರ್ಥಿ TVಯ ಮೊಗದಲಿ ಪತ್ತೇದಾರಿಯ ಚಿತ್ರವ ನೋಡುತ ಕುಳಿತವನು ದಿನವಿಡಿ carಅನ್ನಾರ್ನೂರ್ಮೈಲಿಗಳೋಡಿಸಿ ಬಂದಿಹ ಚಾಲಕನು ಹಠದಿಂ ಕಿಟಕಿಯ ಪಕ್ಕದಾಸನವ ಪಡೆದು ವಿಮಾನದಿ ಕುಳಿತವನು ಹಾಡಲು ಕಲಿಯುತ ವರುಷ ವರುಷಗಳು ಪರಿಣತಿ ಪಡೆದಿಹ ಪಂಡಿತನು ಬೆಂಗಳೂರಿನಲ್ಲಿ ಕರಗವ ನೋಡಲು ಕಾದವ ಕಳೆಯುತ ಗಂಟೆಗಳ ವರುಷ ವರುಷಗಳು ಕಣ್ಗಳ ಮುಚ್ಚಿಯೆ ತಪವನು ಮಾಡಿದ ಋಷಿಯಾಬ್ಬ ವೆಂಕಟರಮಣನ ಸೇವೆಗೆ ತಿರುಪತಿಬೆಟ್ಟವ ಕಷ್ಟದಿ ಹತ್ತಿದವ ನಾನು ಬರೆಯುವ ಕವನಗಳ ಬಗ್ಗೆ ಕೆಲವರು ಹಳೆಗನ್ನಡದಲ್ಲಿ (ಅಥವಾ ಹಳೆಗನ್ನಡವನ್ನು ಕೂಡಿಸಿ) ಬರೆಯುವುದರಿಂದ ಸ್ವಲ್ಪ ಅರ್ಥವಾಗುವುದು ಕಷ್ಟ ಎಂದು ಟೀಕಿಸಿದ್ದರು. ಅಂಥವರಿಗೋಸ್ಕರ, ಮಾತಾಡೋ modern ಕನ್ನಡದಲ್ಲಿ, ಮೇಲೆ ಬರೆದಿರೋ ಕವನ ಹೀಗಾಗಬಹುದು. ಇದನ್ನು ಅಮೆರಿಕನ್ನಡಿಗರಿಗೆ ಬಹಳ ಪರಿಚಿತವಾದ Yankee Doodle Dandy ಎಂಬ ಹಾಡಿನ ಶೈಲಿಯಲ್ಲಿ ಕೆಳಕಂಡಂತೆ ಓದಬಹುದು : ಗಾಣಕ್ಕ ಡ್ಲೇಕಾಯನ್ ಹಾಕ್ತಾ ತಿರ್ಗಿಸ್ತಿದ್ದೋನೊಬ್ಬ Examಹತ್ರಾ ಆಯ್ತೂಂತ್ ಭಯಪಟ್ಟ್ ಓದ್ಕೊಂಡಿದ್ದೋನೊಬ್ಬ TVಲ್ mystery movieನ್ ನೋಡ್ತಾ ಕೂತ್ಕೊಂಡಿದ್ದೋನೊಬ್ಬ ದಿವ್ಸಾ ಪೂರ್ತೀ ಆರ್ನೂರ್ ಮೈಲಿ car drive ಮಾಡ್ದೋನೊಬ್ಬ Plane window seat ಬೇಕೂಂತ್ insist ಮಾಡ್ದೋನೊಬ್ಬ ಭಾಳಾ ವರ್ಷ ಹಾಡೋಕ್ಕಲ್ತ್ಬಿಟ್ಟ್ ವಿದ್ವಾಂಸ್ನಾದೋನೊಬ್ಬ ಬೆಂಗ್ಳೂರ್ ಕರಗಾನ್ ನೋಡೋಕ್ ಭಾಳಾ ಗಂಟೆ ನಿಂತೋನೊಬ್ಬ ಭಾಳಾ ವರ್ಷ ಕಣ್ಮುಚ್ಕೊಂಡಿದ್ ತಪಸ್ ಮಾಡ್ದೋನೊಬ್ಬ ತಿರ್ಪತಿ ವೆಂಕಟ್ರಮಣನ್ ಸೇವೇಗ್ ಬೆಟ್ಟ ಹತ್ದೋನೊಬ್ಬ (ಈ ಕವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಸಲಹೆಕೊಟ್ಟ ನನ್ನ ತಮ್ಮ ಕೃಷ್ಣಪ್ರಿಯ(ಕಪ್ಪಿನಿಯ)ನಿಗೆ ಹೃತ್ಪೂರ್ವಕ ಧನ್ಯವಾದಗಳು.) |













Click it and Unblock the Notifications