ಹನಿಗವನಗಳು


ಹನಿಗವನಗಳು
Chandrashekhar Madabhavi, Zurich
ಭಾರ

ವಧುವಿಗೆ ಭಾರವಾಗಿತ್ತು
ತಲೆಯ ಮೇಲಿನ
ಹೂವಿನ ಹೆಡಿಗೆ
ವಧುವಿನ ತಂದೆಗೆ
ಭಾರವಾಗಿತ್ತು
ಛತ್ರದ ಬಾಡಿಗೆ

*

ವ್ಯತ್ಯಾಸ

ಮದುವೆ ಎಂಬುದು
ಮೂರಕ್ಷರದ
ಬಂಧನ
ವಯಾಗ್ರ ಎಂಬುದು
ಮೂರುವರೆ ಅಕ್ಷರದ
ಇಂಧನ

*

ಬೇಂದ್ರೆ - ನಾನು

ಬೇಂದ್ರೆ ಹೇಳಿದರು
ನಲ್ಲೆಯ ನೋಡಿ
ನನಗೂ ನಿನಗೂ
ಅಂಟಿದ ನಂಟಿನ
ಕೊನೆ ಬಲ್ಲವರಾರು
ಕಾಮಾಕ್ಷಿಯೇ?

ನಾನು ಹೇಳಿದೆ
ಐಶ್ವರ್ಯಳನ್ನು ನೋಡಿ
ನನಗೂ ನಿನಗೂ
ಅಂಟೂ ಇಲ್ಲ
ನಂಟೂ ಇಲ್ಲ
ಕೊನೆಗೂ ನೀನು
ಹುಳಿ ದ್ರಾಕ್ಷಿಯೇ?

*

ಮೂರು-ನೂರೆಂಟು

ವಧುವಿಗೆ ಹಾಕಲು
ಮೂರೆ ಮೂರು ಗಂಟು
ವರನ ಬೇಡಿಕೆಗಳು
ನೂರಾ ಎಂಟು!

*

ಉಡುಗೊರೆ

ಒಲವಿನ ್ಫಉಡುಗೊರೆ
ಕೊಡಲೇನು?
ರಕುತದಿ ಬರೆದೆನು
ಇದ ನಾನು
ಯಾರ ರಕುತ
ಯಾವ ಗುಂಪೆಂದು
ಕೇಳಬೇಡ ನೀನು!

*

ಪರಿಣಾಮ

ಪ್ರಥಮ
ನೋಟದಲ್ಲಿ
ಪ್ರಣಯ
ತೃತೀಯ
ಮಾಹೆಯಲ್ಲಿ
ಪರಿಣಾಮ

*

ತ್ಯಾಗ

ಪ್ರೀತಿ
ಕೇಳುವುದೆಲ್ಲಾ
ಒಂದೇ - ತ್ಯಾಗ
ಅದಕ್ಕೇ ಮಾಡಿದೆ
ಹೆಂಡತಿಯ ತ್ಯಾಗ

*

ದಿಲ್‌

ದಿಲ್‌ ಚೀಜ್‌
ಕ್ಯಾ ಹೈ...
ದಿಲ್‌ ಕೊಡೋರು
ಯಾರಿಗೆ ಬೇಕು
ಬಿಲ್‌ ಕೊಡೋರು
ಸಿಕ್ಕರೆ ಸಾಕು


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+