ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ಯಾನ್‌ ಜೊತೆ ಅನು ಮದುವೆ ನಡೆಯುತ್ತಾ?

By Staff
|
Google Oneindia Kannada News


ಅವನು ಕೆಲಸಕ್ಕೆ ಹೋಗಲು ಸಿದ್ಧನಾಗಿ ಬಟ್ಟೆ ಧರಿಸಿಕೊಂಡು ಒಳಗೆ ಬಂದ. ‘‘ಅನು, ನಾನು ನಿನಗೆ ಸುಳ್ಳು ಹೇಳುವುದಿಲ್ಲ. ನನಗೆ ಬಹಳ ಹೆಂಗಸರು ಮೋಸ ಮಾಡಿದ್ದಾರೆ. ಬಹಳಷ್ಟು ಸಲ ನನಗೆ ಸುಳ್ಳು ಹೇಳಿದ್ದಾರೆ. ಬಹಳ ದಿನಗಳಾದ ಮೇಲೆ ನನಗೆ ಆದ ಒಳ್ಳೆಯದು ಎಂದರೆ ನೀನು ಸಿಕ್ಕಿದ್ದು. ಅವತ್ತು ನಾನು ಕೆಲಸದಿಂದ ಬಂದ ತಕ್ಷಣ ನಿನಗೆ ಕರೆ ಮಾಡಲು ಆರಂಭಿಸಿದೆ. ನೀನು ಫೋನಿಗೆ ಸಿಗಲಿಲ್ಲ. ಹಾಗಾಗಿ ಇಲ್ಲಿಗೆ ಬರಲು ಬಹಳ ಮನಸ್ಸಾಯಿತು. ಆಗ ದೀಪಕ್‌ನ ಬಗ್ಗೆ ಪೋಲಿಸ್‌ ರೇಡಿಯೋದಲ್ಲಿ ಸುದ್ಧಿ ಬಂತು. ಆ ಸಮಯದಲ್ಲಿ ನೀನು ಎಲ್ಲಿದ್ದೀಯ ಎನ್ನುವುದರ ಬಗ್ಗೆ ಇನ್ನೂ ಬಹಳ ಯೋಚನೆಯಾಗಿ ಮತ್ತೆ ಇನ್ನೊಂದಷ್ಟು ಸಲ ನಿನಗೆ ಕರೆ ಮಾಡಿದೆ. ಅದರ ಬಗ್ಗೆ ನನ್ನ ಹತ್ತಿರ ಯಾವುದೆ ಸಾಕ್ಷಿ ಇಲ್ಲ ಎನ್ನುವುದು ನನಗೆ ಗೊತ್ತು. ಅದರೆ ನಾನು ಅದನ್ನು ಕೇರ್‌ ಮಾಡುವುದಿಲ್ಲ. ನಮ್ಮ ಡಿಟೆಕ್ಟಿವ್‌ಗಳು ನನ್ನ ಫೋನ್‌ ಕರೆಗಳ ದಾಖಲೆಗಳನ್ನು ನೋಡುತ್ತಾರೆ ಎಂತಲೂ, ಅದರಲ್ಲಿ ನಾನು ನಿನಗೆ ಕರೆ ಮಾಡಿದ್ದನ್ನು ಗಮನಿಸುತ್ತಾರೆ ಎಂತಲೂ ನನಗೆ ಗೊತ್ತು. ಆದರೆ ಅವೆಲ್ಲ ಆ ಸಮಯದಲ್ಲಿ ನೀನು ಎಲ್ಲಿದ್ದೆ ಎನ್ನುವುದರ ಬಗ್ಗೆ ಇನ್ನೂ ಹೆಚ್ಚಿನ ಸಂದೇಹಗಳನ್ನು ಹುಟ್ಟುಹಾಕುತ್ತವೆ.’’

ಅದರಿಂದ ಒಳ್ಳೆಯದೆ ಆಯಿತು ಎಂದುಕೊಂಡಳು ಅನು. ಹಾಗಾದಲ್ಲಿ ಅವರ ಗಮನವೆಲ್ಲ ನನ್ನ ಮೇಲೆಯೆ ಇರುತ್ತದೆ. ಅವರು ಎಂದೂ ಪವನ್‌ನನ್ನು ಸಂಶಯಿಸುವುದಿಲ್ಲ. ಹಾಗೂ ನನ್ನ ವಿರುದ್ಧ ಅವರು ಯಾವುದನ್ನೂ ನಿರೂಪಿಸಲು ಸಾಧ್ಯವಿಲ್ಲ. ಯಾಕೆಂದರೆ, ನಾನು ಇದರಲ್ಲಿ ಯಾವ ತರಹದಲ್ಲೂ ಭಾಗಿಯಾಗಿಲ್ಲ.

‘‘ನಾವಿಬ್ಬರೂ ಮದುವೆಯಾಗಬೇಕು, ಅಗ ನಾವು ಒಬ್ಬರ ಮೇಲೆ ಒಬ್ಬರು ಸಾಕ್ಷಿ ಹೇಳಲು ಆಗುವುದಿಲ್ಲವೆಂದು ನೀನು ಯಾಕೆ ಹೇಳಿದ್ದು, ಡ್ಯಾನ್‌?’’

ಡ್ಯಾನ್‌ ಮುಗುಳ್ನಕ್ಕ. ‘‘ಹಾಗೆ ಹೇಳಿದರೆ ನೀನು ನನ್ನನ್ನು ಆಗಲಾದರೂ ಮದುವೆಯಾಗುತ್ತೀಯ ಎಂದು ಹಾಗೆ ಹೇಳಿದೆ. ಈ ಮಾತಿನಲ್ಲಿ ಉದ್ದೇಶವಿದೆ!’’

‘‘ಈಗ ತಮಾಷೆಗೆ ಸಮಯ ಅಲ್ಲ, ಡ್ಯಾನ್‌. ನಾವು ಶವಸಂಸ್ಕಾರದ ಏರ್ಪಾಟುಗಳನ್ನು ಮಾಡಲು ರೂಪಾಳಿಗೆ ಸಹಾಯ ಮಾಡಬೇಕು.’’

‘‘ನಾವು?’’

‘‘ಡ್ಯಾನ್‌, ನಾನು ಈಗ ಭಾರತಕ್ಕೆ ಹೋಗಬಹುದೆ? ನಮ್ಮವರನ್ನು ಭೇಟಿಯಾಗಲು?’’

ಅವನು ಬಾಗಿಲ ಕಡೆ ಇಡುತ್ತಿದ್ದ ಹೆಜ್ಜೆಗಳು ಆ ಮಾತಿನಿಂದ ಮಧ್ಯದಲ್ಲಿಯೆ ನಿಂತುಬಿಟ್ಟವು. ‘‘ಈಗಲೆ ಯಾಕೆ ಹೋಗಬೇಕು?’’

‘‘ನಾನು ಹೋಗಬೇಕಿದೆ ಎಂದು ಇಟ್ಟುಕೊ. ಪೋಲಿಸರು ನನ್ನನ್ನು ತಡೆಯಲು ಸಾಧ್ಯವೆ?’’

‘‘ಇಲ್ಲ, ಅವರು ನಿನ್ನ ಮೇಲೆ ಯಾವುದೆ ಆಪಾದನೆಯನ್ನು ಹೊರಿಸಿಲ್ಲ. ನೀನು ಹೋಗಬಹುದು - ಆದರೆ ಅದನ್ನು ಅವರಿಗೆ ತಿಳಿಸಬೇಡ. ತಿಳಿಸಿದರೆ ಅದು ಸ್ವಲ್ಪ ವಿಚಿತ್ರವಾಗಿ ಕಾಣಿಸುತ್ತದೆ. ನಾನೂ ನಿನ್ನ ಜೊತೆ ಬಂದರೆ ಹೇಗೆ?’’

‘‘ಬೇಡ, ಭಾರತದಲ್ಲಿ ಹುಡುಗಿಯರಿಗೆ ಬಾಯ್‌ಫ್ರೆಂಡ್ಸ್‌ ಇರುವುದಿಲ್ಲ. ನಾವು ಮದುವೆಯಾಗಿಲ್ಲದೆ ನಿನ್ನನ್ನು ಜೊತೆಗೆ ಕರೆದುಕೊಂಡು ಹೋಗಲು ಆಗುವುದಿಲ್ಲ.’’

‘‘ಹಾಗಿದ್ದರೆ ನಾವು ಹೋಗಿ ಮದುವೆಯಾಗೋಣ! ಅದು ಎಲ್ಲಾ ರೀತಿಯಿಂದಲೂ ಎಷ್ಟೊಂದು ಅನುಕೂಲ ನೋಡು?’’

‘‘ಮತ್ತೆ ತಮಾಷೆ ಬೇಡ, ಡ್ಯಾನ್‌.’’ ಅವನು ಬಾಗಿಲಿಂದ ಹೊರಗೆ ಹೋಗುತ್ತಿರುವಾಗ ಅನು ಅವನಿಗೆ ಮುತ್ತಿಟ್ಟು ಗುಡ್‌ಬೈ ಹೇಳಿದಳು. ದೀಪಕ್‌ನನ್ನು ಪವನನೆ ಕೊಲೆ ಮಾಡಿದ್ದರೂ ಡ್ಯಾನ್‌ಗೆ ಅದರ ಬಗ್ಗೆ ಯೋಚನೆ ಇಲ್ಲ. ಆದರೆ ಅವನಿಗೆ ಅದನ್ನು ನಾನು ಮಾಡಿರಬಾರದು, ಅಷ್ಟೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X