ರೂಪಾ ಮತ್ತು ಪವನ್‌ ತಲೆಗೆ ದೀಪಕ್‌ ಮರ್ಡರ್‌ ಕೇಸ್‌!?


ನೀರವ ಮೌನ ಮಾತ್ರ ಕೇಳಿಬಂತು.

‘‘ಏನು?’’ ಅದಷ್ಟೆ ಸ್ವಲ್ಪ ಹೊತ್ತಿನ ಬಂತರ ಅವರಿಂದ ಬಂದ ಪ್ರತಿಕ್ರಿಯೆ. ನಂತರ ಮತ್ತೆ ನೀರವ ಮೌನ. ಸ್ವಲ್ಪ ಹೊತ್ತಾದ ಮೇಲೆ ಫೋನ್‌ ಕಟ್‌ ಆಯಿತು.

ಈ ಮುಂಚೆಯೆ ಯಾರಾದರು ಅವರಿಗೆ ಕರೆ ಮಾಡಿ ತಿಳಿಸಿದ್ದರೆ? ದೀಪಕ್‌ನ ತಾಯಿ ದಿಗ್ಭ್ರಮೆಯಲ್ಲಿ ಮುಳುಗಿದ್ದರೆ? ‘‘ರೂಪ, ನಾವು ಸ್ವಲ್ಪ ಹೊತ್ತು ಕಾಯೋಣ. ಅವರಿಗೆ ಈಗಾಗಲೆ ತಿಳಿದಿರಬಹುದು, ಆದರೆ ನಾನು ಹಾಗೆಂದುಕೊಳ್ಳುವುದಿಲ್ಲ. ಅವರು ನಿನಗೆ ಮತ್ತೆ ಕರೆ ಮಾಡಬಹುದು.’’

ಇಬ್ಬರೂ ಅಡಿಗೆ ಮನೆಯ ಮೇಜಿನ ಮುಂದೆ ಕುಳಿತರು. ರೂಪ ಅಳುತ್ತಿರಲಿಲ್ಲ. ನಾನು ಅವನಿಂದ ಕಳಚಿಕೊಂಡಾಗ ನನಗೆ ಎಷ್ಟು ನೆಮ್ಮದಿಯಾಗಿತ್ತೊ ಬಹುಶಃ ಇವಳಿಗೂ ಈಗ ಅಷ್ಟೇ ನೆಮ್ಮದಿಯಾಗಿರಬೇಕು. ‘‘ರೂಪ, ನೀನು ದೀಪಕ್‌ನನ್ನು ಹೇಗೆ ಭೇಟಿಯಾಗಿದ್ದು?’’

‘‘ಸ್ನೇಹಿತೆಯಾಬ್ಬಳ ಮದುವೆಯಲ್ಲಿ ಅವರಮ್ಮ ನನ್ನನ್ನು ನೋಡಿದರು. ಆಮೇಲೆ ನಮ್ಮ ಮನೆಯವರನ್ನು ವಿಚಾರಿಸಿದರು. ನನಗೆ ಆರು ಜನ ಅಕ್ಕತಂಗಿಯರಿದ್ದಾರೆ. ನಾನು ಐದನೆಯವಳು. ನಮಗೆ ಮೂವರಿಗೆ ಮದುವೆಯಾಗಿದೆ.’’

’’ನೀನು ಭಾರತಕ್ಕೆ ಹಿಂದಿರುಗಿದರೆ ನಿಮ್ಮ ಮನೆಯವರು ನಿನಗೆ ಆಶ್ರಯ ಕೊಡುತ್ತಾರಾ? ನಿಮ್ಮ ತಂದೆಯವರು ಏನು ಕೆಲಸ ಮಾಡುತ್ತಾರೆ?’’

‘‘ಅವರು ಶಾಲೆಯಾಂದರಲ್ಲಿ ಮೇಷ್ಟ್ರು. ನಾವು ಬಹಳ ಸಂಪ್ರದಾಯಸ್ಥ ಬ್ರಾಹ್ಮಣರು. ನಮ್ಮ ಮನೆಯವರು ವಿಚ್ಚೇದನದ ಕುರಿತು ಕೇಳೇ ಇಲ್ಲ. ನಾನು ಭಾರತವನ್ನು ಬಿಟ್ಟ ಮೇಲೆ ಇಲ್ಲಿಯತನಕ ಅವರ ಜೊತೆ ಮಾತನಾಡೇ ಇಲ್ಲ.’’

‘‘ಯಾಕೆ?’’

‘‘ದೀಪಕ್‌ ಬಿಡುತ್ತಿರಲಿಲ್ಲ.’’

ಫೋನ್‌ ರಿಂಗುಣಿಸಿತು.

‘‘ಅದು ಅವರ ಅಪ್ಪ ಆಗಿರುತ್ತಾರೆ,’’ ಅನು ಹೇಳಿದಳು. ‘‘ನಿನಗೆ ಏನು ಗೊತ್ತೊ ಅದನ್ನು ಹೇಳು.’’

ರೂಪ ಸ್ಪೀಕರ್‌ ಫೋನಿನ ಗುಂಡಿ ಒತ್ತಿದಳು.

‘‘ರೂಪ, ಏನಾಯಿತು?’’ ಅತ್ತಲಿಂದ ಅವಳ ಮಾವ ಕೇಳಿದರು.

‘‘ಮಾವ, ಕಾರು ಬೆಟ್ಟದ ಕಮರಿಯಲ್ಲಿ ಸಿಕ್ಕಿತು, ಇದು ಅವರು ಮನೆಗೆ ಬರುತ್ತಿದ್ದಾಗ ಆದ ಅಪಘಾತ ಎಂದು ಪೋಲಿಸರು ಹೇಳಿದರು. ಮನೆ ಯಿಂದ ಅರ್ಧ ಮೈಲಿ ದೂರದಲ್ಲಿ.’’

‘‘ಯಾವಾಗ ಆಯಿತು?’’

‘‘ನೆನ್ನೆ ರಾತ್ರಿ, ಸುಮಾರು 10 ಗಂಟೆ ಸಮಯದಲ್ಲಿ. ಅವರು ಒಂದು ಕಾನ್ಫರೆನ್ಸ್‌ಗೆ ಹೋಗಿ, ಅದನ್ನು ಮುಗಿಸಿಕೊಂಡು ಹೋಟೆಲ್‌ಗೆ ಊಟಕ್ಕೆ ಹೋಗಿದ್ದರು. ಅಲ್ಲಿ ಸಹೋದ್ಯೋಗಿಗಳ ಜೊತೆ ಸ್ವಲ್ಪ ಕುಡಿದಿದ್ದಾರೆ.’’

‘‘ಅಸಂಬದ್ಧ! ಅವನು ಕುಡಿಯುವುದಿಲ್ಲ.’’

‘‘ಇತ್ತೀಚೆಗೆ ಅವರು ಬಹಳ ಕುಡಿಯುತ್ತಿದ್ದರು.’’

ಭಾರತದಲ್ಲಿನ ಎಲ್ಲ ತಂದೆತಾಯಿಯರು ತಮ್ಮ ಮಕ್ಕಳು ಕುಡಿಯುವುದಿಲ್ಲ ಅಂತಲೆ ಅಂದುಕೊಂಡಿರುತ್ತಾರೆ. ಅವರಿಗೆ ತಮ್ಮ ಮಕ್ಕಳ ಬಗ್ಗೆ ಎಷ್ಟು ಕಮ್ಮಿ ಗೊತ್ತಿರುತ್ತದೆ!

ಅವಳ ಮಾತನ್ನು ಕೇಳಿಸಿಕೊಳ್ಳುತ್ತ ಯೋಚಿಸುತ್ತಿದ್ದಾಗ, ರೂಪಾ ಕೊಲೆಯಾಂದನ್ನು ಪ್ಲಾನ್‌ ಮಾಡುವ ಹೆಂಗಸಿನ ತರಹ ಅನೂಗೆ ಕಾಣಿಸಲಿಲ್ಲ. ಅವಳು ಸಂಪ್ರದಾಯಸ್ಥರ, ಬಹುಶಃ ಹಾಗೆಯೆ ಬಡವರ ಮನೆಯ, ಮೃದುಮಾತಿನ ಹಳೇಕಾಲದ ಬೆಂಗಳೂರಿನ ಹುಡುಗಿ ಎಂದುಕೊಂಡಳು.

‘‘ನಾವು ಪ್ರಯಾಣದ ಏರ್ಪಾಟು ಮಾಡಿಕೊಂಡ ತಕ್ಷಣ ನಿನಗೆ ವಾಪಸು ಕರೆ ಮಾಡುತ್ತೇವೆ.’’ ಅತ್ತ ಫೋನ್‌ ಇಟ್ಟರು. ಡ್ಯಾನ್‌ ಹಾಗು ಪೋಲಿಸರ ಜೊತೆ ಕಾಲ ಕಳೆದಿದ್ದುದರಿಂದ ಪ್ರಶ್ನೆ ಕೇಳುವುದು ಅನೂಗೆ ಅಭ್ಯಾಸವಾಗಿಬಿಟ್ಟಿತ್ತು. ‘‘ನಿಮ್ಮ ತಂದೆ ಏನು ಪಾಠ ಮಾಡುತ್ತಾರೆ, ರೂಪ?’’

‘‘ಅವರು ಬೆಂಗಳೂರು ಪ್ರೌಢಶಾಲೆಯಲ್ಲಿ ಗಣಿತ ಹೇಳಿಕೊಡುತ್ತಾರೆ.’’

‘’ದೀಪಕ್‌ನನ್ನು ಭೇಟಿಯಾದಾಗ ನೀನು ಏನು ಮಾಡುತ್ತಿದ್ದೆ?’’

‘‘ನಾನಾಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಪಿಎಚ್‌ಡಿಯ ಮೂರನೆ ವರ್ಷದಲ್ಲಿದ್ದೆ.’’

‘‘ನನಗೆ ಆಶ್ಚರ್ಯವಾಗುತ್ತಿದೆ, ರೂಪ. ನೀನು ಒಳ್ಳೆಯ ಶಿಕ್ಷಣ ಪಡೆದುಕೊಂಡಿರುವ ಹುಡುಗಿ! ಯಾಕೆ ನೀನು ಪ್ರತಿಸಲವೂ ಅಸಹಾಯಕಳ ತರಹ ನನಗೆ ಕರೆ ಮಾಡುತ್ತಿದ್ದೆ? ಯಾಕೆ ನೀನು ಅವನನ್ನು ಬಿಟ್ಟುಬಿಡಲಿಲ್ಲ?’’ ಅನೂಳ ಸ್ವರ ಮೃದುವಾಗಿ, ಕರುಣೆಯಿಂದ ಕೂಡಿತ್ತು.

‘‘ನಿನಗೆ ಇದು ಯಾವತ್ತಾದರೂ ಅರ್ಥವಾಗುತ್ತೆ ಅಂತ ನನಗನ್ನಿಸುವುದಿಲ್ಲ. ಭಾರತದಲ್ಲಿ ನಾನು ಬಹಳ ಸ್ವತಂತ್ರ ಮನೋಭಾವದವಳಾಗಿದ್ದೆ. ಈ ದೇಶಕ್ಕೆ ಕರೆದುಕೊಂಡು ಬಂದು, ಈ ಮನೆಯಲ್ಲಿ ಎಸೆದು, ಯಾವತ್ತೂ ಮನೆುಂದ ಆಚೆಗೆ ಹೋಗಲು ಬಿಡದೆ ಇದ್ದಿದ್ದರೆ ನೀನು ಏನು ಮಾಡುತ್ತಿದ್ದೆ? ಅವನು ಫೋನನ್ನು ಸಹ ತನ್ನ ಜೊತೆಯೆ ತೆಗೆದುಕೊಂಡು ಹೋಗುತ್ತಿದ್ದ. ಹಾಗಾಗಿ ನಾನು ಯಾರಿಗೂ ಕರೆ ಮಾಡಲು ಆಗುತ್ತಿರಲಿಲ್ಲ. ಹೀಗೆ ಆದರೆ ನಿನ್ನ ಆತ್ಮವಿಶ್ವಾಸಕ್ಕೆ ಎಂತಹ ಪೆಟ್ಟು ಬೀಳುತ್ತದೆ ಗೊತ್ತಾ?’’

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+