ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಳಿಗೋಸ್ಕರ ಪವನ್‌ನಿಂದ ದೀಪಕ್‌ನ ಕೊಲೆ

By Staff
|
Google Oneindia Kannada News


‘‘ನನಗೆ ದಂಗು ಬಡಿದಂತಾಯಿತು. ಯಾಕೆಂದರೆ, ಒಳಗೆ ಹೋದ ತಕ್ಷಣ ಅವಳು ಬ್ಯಾಗಿನ ಸಮೇತ ಸಿದ್ಧವಾಗಿ ನಿಂತಿರುವುದನ್ನು ದೀಪಕ್‌ ನೋಡುವುದು ಖಚಿತ ಎನ್ನಿಸಿತು. ಕುಡಿದಿದ್ದರೂ ಸಹ, ಅವಳು ತನ್ನನ್ನು ಬಿಟ್ಟು ಹೋಗುತ್ತಿದ್ದಾಳೆ ಎನ್ನುವುದು ಅವನಿಗೆ ಖಂಡಿತವಾಗಿ ಅರ್ಥವಾಗುತ್ತಿತ್ತು. ನಾನು ಹಾಗಾಗಲು ಬಿಡುವ ಹಾಗಿರಲಿಲ್ಲ. ಹಾಗಾಗಿ, ಅವನ ಹಿಂದೆಯೆ ಹೋಗುತ್ತಿದ್ದ ನಾನು ತಕ್ಷಣವೆ ಕಾರನ್ನು ನಿಲ್ಲಿಸಿ, ನನ್ನ ಕಾರಿಗೆ ಏನೋ ತೊಂದರೆ ಆಗಿದೆ ಎಂದು ಅವನು ಭಾವಿಸಿ ನಿಲ್ಲಿಸಲಿ ಎಂದು ನನ್ನ ಹೆಡ್‌ಲೈಟ್ಸ್‌ ಅನ್ನು ನಾಲ್ಕಾರು ಬಾರಿ ಆನ್‌ಆಫ್‌ ಮಾಡಿದೆ.

ಆದರೆ ಅವನು ಬಹಳ ಕುಡಿದಿದ್ದ. ನನ್ನ ಸೂಚನೆಗಳನ್ನು ಗಮನಿಸಲೇ ಇಲ್ಲ. ನಿಲ್ಲಿಸದೆ ಬೆಟ್ಟವನ್ನು ಹತ್ತುತ್ತಿದ್ದ. ಅದನ್ನು ನೋಡಿ ನಾನು ಮತ್ತೆ ವೇಗವಾಗಿ ಅವನನ್ನು ಹಿಂಬಾಲಿಸಿದೆ. ಒಂದು ಕೈಯನ್ನು ಸ್ಟೇಯರಿಂಗ್‌ ಚಕ್ರದ ಮೇಲೆ ಇಟ್ಟುಕೊಂಡು ರೂಪಾಗೆ ಕರೆ ಮಾಡಿದೆ. ಮನೆಯಿಂದ ಹೊರಗೆ ಬಂದು ರಸ್ತೆಯಲ್ಲಿ ಕೆಳಗೆ ನಡೆದುಕೊಂಡು ಬಾ ಎಂದು ತಿಳಿಸಿದೆ. ಅವಳು ದೀಪಕ್‌ಗೆ ಗಲಿಬಿಲಿಯಾಗುವಂತೆ ಮಾಡಿ, ಅವನು ದಾರಿಯಲ್ಲಿಯೆ ನಿಲ್ಲಿಸುವಂತಾಗಲಿ ಎಂದು ನನ್ನ ಆಲೋಚನೆ. ಅದೊಂದನ್ನೆ ನನ್ನ ಕೈಯ್ಯಲ್ಲಿ ಆಗ ಯೋಚಿಸಲು ಸಾಧ್ಯವಾದದ್ದು.

‘‘ಆ ತಂತ್ರ ನಿಜವಾಗಲೂ ಕೆಲಸ ಮಾಡಿತು! ಅವನ ಹಿಂದಿನ ಬ್ರೇಕ್‌ಲೈಟು ಹೊತ್ತಿಕೊಂಡಿದ್ದು ನನಗೆ ಕಾಣಿಸಿತು. ಸಡೆನ್‌ ಬ್ರೇಕ್‌ ಹಾಕಿದ್ದರಿಂದ ಅವನ ಚಕ್ರಗಳು ರಸ್ತೆಗೆ ಉಜ್ಜುವ ಶಬ್ದ ಕೇಳಿಸಿತು. ಅದಾದ ಮೇಲೆ, ಅವನ ಕಾರಿನ ಹೆಡ್‌ಲೈಟ್‌ಗಳ ಪ್ರಖರ ಬೆಳಕಿನಲ್ಲಿ ಶಿಲೆಯಂತೆ ಗರಬಡಿದು ನಿಂತಿದ್ದ ರೂಪ ಕಾಣಿಸಿದಳು. ಅವನು ಅವಳನ್ನು ತಪ್ಪಿಸಲು ಅಡ್ಡಾದಿಡ್ಡಿ ತಿರುಗಿಸಿ ಅವಳನ್ನು ದಾಟಿ ಮುಂದೆ ಹೋಗಿ ನಿಲ್ಲಿಸಿದ. ಅದಾದ ಮೇಲೆ ಕಾರನ್ನು ರಿವರ್ಸ್‌ ಗೇರಿಗೆ ಹಾಕಿ ಹಿಂದಕ್ಕೆ ಬರಲಾರಂಭಿಸಿದ. ಆದರೆ ಕತ್ತಲಲ್ಲಿ ಅವನಿಗೆ ಹಿಂದೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಅವಳನ್ನು ತಪ್ಪಿಸಲು ಪ್ರಯತ್ನಿಸುತ್ತ ಹಿಂದಕ್ಕೆ ಬರುತ್ತಿದ್ದಾಗ ಕಾರು ರಸ್ತೆಯಿಂದ ಜಾರಿ ಅವನಾಗಿ ಅವನು ಮೇಲಿಂದ ಉರುಳಿಬಿದ್ದ.’’

‘‘ಆದರೆ ಆಗ ನೀನು ರೂಪ ಏನು ಮಾಡಿದಿರಿ?’’

‘‘ಏನೂ ಮಾಡಲಿಲ್ಲ. ನಾನು ಅವಳ ಜೊತೆ ಮಾತನಾಡಲು ಕಾರಿನಿಂದ ಇಳಿದಾಗ ಟೈರ್‌ ರಾಡನ್ನು ಎಲ್ಲಿಯಾ ಬೀಳಿಸಿಕೊಂಡಿರಬೇಕು. ಆಮೇಲೆ ನಾನು ಅವಳನ್ನು ಮನೆಗೆ ಬಿಟ್ಟು, ಒಂದು ಗಂಟೆ ಕಾಲ ಕಾದು ಆಮೇಲೆ ತನ್ನ ಗಂಡ ಇನ್ನೂ ಮನೆಗೆ ಬಂದಿಲ್ಲ ಎಂದು ಪೋಲಿಸರಿಗೆ ಕರೆ ಮಾಡು ಎಂದು ಹೇಳಿದೆ. ಆಗ ಪೋಲಿಸರು ಅವಳಿಂದ ವಿವರ ಪಡೆಯಲು ಮನೆಗೆ ಬರುವಾಗ ದಾರಿಯಲ್ಲಿ ಅವರಿಗೆ ಇನ್ನೂ ಲೈಟ್ಸ್‌ ಹೊತ್ತಿಕೊಂಡು ರಸ್ತೆಯಿಂದ ಉರುಳಿಬಿದ್ದಿರುವ ಕಾರು ಕಾಣಿಸುತ್ತದೆ, ಆಗ ಅವರೆ ಆ್ಯಂಬ್ಯುಲೆನ್ಸ್‌ ಕರೆಯುತ್ತಾರೆ, ಎಂದುಕೊಂಡೆ. ಜೊತೆಗೆ ಅವರಿಗೆ ನನ್ನನ್ನು ವಿಚಾರಣೆ ಮಾಡಲು ಸಾಧ್ಯವಾಗುವುದಿಲ್ಲ, ಯಾಕೆಂದರೆ ಅಷ್ಟೊತ್ತಿಗೆ ನಾನು ನವದೆಹಲಿಗೆ ವಿಮಾನದಲ್ಲಿ ಹೋಗುತ್ತಿರುತ್ತೇನೆ ಎಂದುಕೊಂಡೆ. ಅಬ್ಬಬ್ಬಾ ಅಂದರೆ ದೀಪಕ್‌ಗೆ ಕೈಕಾಲು ಮುರಿದಿರುತ್ತದೆ ಇಲ್ಲವೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ ಎಂದು ಭಾವಿಸಿದೆ. ಆದರೆ ನಾನು ಭಾರತಕ್ಕೆ ಹಿಂದಿರುಗಿ ಬಂದು ನಮ್ಮ ಸಿಇಓ ಕಳುಹಿಸಿದ್ದ ಇಮೇಯ್ಲ್‌ ನೋಡುವ ತನಕ ಅವನು ಸತ್ತಿದ್ದಾನೆ ಎಂದು ಅಂದುಕೊಂಡಿರಲಿಲ್ಲ. ಅವನ ಕರ್ಮ!’’

‘‘ರೂಪ ಪೋಲಿಸರಿಗೆ ಕರೆ ಮಾಡಿದಳು ಎಂದು ನಾನಂದುಕೊಂಡಿಲ್ಲ... ಬೇರೆ ಯಾರೊ ಅವಳಿಗಿಂತ ಮುಂಚೆಯೆ ಕರೆಮಾಡಿರಬೇಕು... ಆಗ ಅವರಿಗೆ ದೀಪಕ್‌ ಕಾಣಿಸಿರಬೇಕು... ಏಕೆಂದರೆ, ಡ್ಯಾನ್‌ ಹೇಳಿದ ಪ್ರಕಾರ, ಪೋಲಿಸರು ಹೋಗಿ ರೂಪಾಳಿಗೆ ವಿಷಯ ತಿಳಿಸಿದಾಗ ಅವಳಿಗೆ ಬಹಳ ಆಶ್ಚರ್ಯವಾದ ಹಾಗೆ ಕಾಣಿಸಿತಂತೆ... ಅವಳೂ ಸಹ ಅವನು ಸತ್ತಿರುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ ಎನ್ನಿಸುತ್ತದೆ.’’

‘‘ನನಗೆ ಗೊತ್ತಿಲ್ಲ... ಅದಾದ ಮೇಲೆ ನಾನು ಅವಳ ಜೊತೆ ಮಾತನಾಡಿಲ್ಲ.’’

‘‘ಈಗ ರೂಪ ಎಲ್ಲಿದ್ದಾಳೆ?’’

‘‘ಇನ್ನೂ ಅಲ್ಲಿಯೆ, ಅವನ ಮನೆಯಲ್ಲಿಯೆ ಇದ್ದಾಳೆ. ಇದೆಲ್ಲ ತಣ್ಣಗಾಗಲಿ ಎಂದು ಕಾಯುತ್ತಿದ್ದೇವೆ. ನೀನು ಅವಳನ್ನು ನೋಡಿದರೆ ನಾನು ಅವಳಿಗಾಗಿ ಕಾಯುತ್ತಾ ಇದ್ದೇನೆ ಎಂದು ತಿಳಿಸುತ್ತೀಯ, ಅನು?’’

‘‘ಅವಳಿಗೆ ಕಾಯುತ್ತಾ ಇದ್ದೀಯ? ಅವಳಿಗೆ ಇಷ್ಟರಲ್ಲೆ ಅವನ ಮಗು ಹುಟ್ಟಲಿದೆ.’’

‘‘ನನಗೆ ಗೊತ್ತು... ನಾನು ಅವಳನ್ನು ಪ್ರೀತಿಸುತ್ತೇನೆ ಎಂದು ದಯವಿಟ್ಟು ಅವಳಿಗೆ ಹೇಳು.’’

‘‘ಏನು?!’’

‘‘ಹೌದು. ಇದಷ್ಟೆ ಈಗ ನಾನು ಅವಳಿಗೆ ಮಾಡಬಹುದಾದದ್ದು. ನನಗೆ ಗೊತ್ತು ಅವಳಿಗೂ ನನ್ನ ಹಾಗೆಯೆ ಅನಿಸುತ್ತದೆ ಎಂದು. ಅವಳಿಗೆ ದೀಪಕ್‌ನನ್ನು ಕಂಡರೆ ಭಯವಾಗುತ್ತಿತ್ತು. ನಾನು ಅವಳಿಗೆ ಕರೆ ಮಾಡಿದಾಗಲೆಲ್ಲ-ಅದೆ ಅವನು ಇಲ್ಲದಿದ್ದಾಗ-ನಾವು ಬಹಳ ಸುದೀರ್ಘವಾಗಿ ಮಾತನಾಡುತ್ತಿದ್ದೆವು.’’

‘‘ಪವನ್‌, ನೀನು ಮತ್ತೆ ನಿರಾಶನಾಗಿ ನೋವು ಅನುಭವಿಸುವುದನ್ನು ನನ್ನಿಂದ ನೋಡಲಾಗುವುದಿಲ್ಲ. ನಾವಿಬ್ಬರು ಒಬ್ಬರಿಗೊಬ್ಬರು ವರ್ಷಾನುಗಟ್ಟಲೆ ಪತ್ರ ಬರೆದೆವು. ನೀನು ಅದನ್ನೆ ಪ್ರೀತಿ ಎಂದು ಭಾವಿಸಿದೆ.’’

‘‘ಇಲ್ಲ, ಇದು ಆ ತರಹ ಅಲ್ಲ... ನಾವಿಬ್ಬರೂ ಭವಿಷ್ಯದ ಬಗ್ಗೆ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ದೀಪಕ್‌ನಿಂದ ಹೇಗೆ ದೂರವಾಗುವುದು ಎಂದು ಅವಳಿಗೆ ತಿಳಿದಿರಲಿಲ್ಲ ಅಷ್ಟೆ. ನಮ್ಮಪ್ಪ ನಮ್ಮಮ್ಮನನ್ನು ಬೆದರಿಸುತ್ತಿದ್ದ ಹಾಗೆ ತನ್ನನ್ನು ಬಿಟ್ಟು ಹೋದರೆ ಕೊಲ್ಲುವುದಾಗಿ ಅವನು ಅವಳಿಗೆ ಹೆದರಿಸುತ್ತಿದ್ದ.’’

ಅವನು ಬಹಳ ಹೊತ್ತು ಅಳುತ್ತ ದುಃಖಿಸುತ್ತಿದ್ದಾಗ ಅನು ಅವನ ಅಂಗೈಗಳನ್ನು ತನ್ನ ಕೈಯ್ಯಲ್ಲಿಟ್ಟುಕೊಂಡು ನೇವರಿಸುತ್ತಿದ್ದಳು.

‘‘ನೀನು ಬಹಳ ಒಳ್ಳೆಯ ವ್ಯಕ್ತಿ, ಪವನ್‌... ಸರಿ, ನಾನು ಅವಳಿಗೆ ಹೇಳುತ್ತೇನೆ. ಹಾಗೆಂದು ನಿನಗೆ ಮಾತು ಕೊಡುತ್ತೇನೆ. ಆದರೆ ನನ್ನದೊಂದು ಮಾತು. ಅವಳಿಗೆ ಮಗು ಆಗುವ ಸಮಯದಲ್ಲಿಯೆ ಆಗಲಿ ಬೇರೆ ಸಮಯದಲ್ಲಿಯೆ ಆಗಲಿ ನೀನು ಅವಳನ್ನು ನೋಡಲು ಬರುವುದಿಲ್ಲ ಎಂದು ನನಗೀಗ ಮಾತು ಕೊಡು. ಯಾಕೆಂದರೆ, ಡ್ಯಾನ್‌ ಒಬ್ಬ ಪೋಲಿಸ್‌; ಅಸಹಜವಾಗಿರುವುದನ್ನು ದೂರದಿಂದಲೆ ಅವನು ಗಮನಿಸಬಲ್ಲ. ಅವನಿಗೆ ವಿನಾಕಾರಣ ಸಂದೇಹ ಬರಬಾರದು. ರೂಪಾಳ ಹತ್ತಿರ ನಾನೆ ಇದ್ದು, ಎಲ್ಲವನ್ನೂ ನಾನೆ ನೋಡಿಕೊಳ್ಳುತ್ತೇನೆ.’’

‘‘ರೂಪ ಅವತ್ತು ರಾತ್ರಿಯೆ ನಿನಗೆ ಕರೆ ಮಾಡಿದಳು. ಏನೇ ಇರಲಿ ನಿನ್ನನ್ನು ಯಾವಾಗಲೂ ನಂಬಬಹುದು, ನಿನ್ನನ್ನು ಅವಲಂಬಿಸಬಹುದು ಎಂದು ನಾನು ಅವಳಿಗೆ ಹೇಳಿದ್ದೇನೆ. ನಾವಿಬ್ಬರು ಬೆಸ್ಟ್‌ಫ್ರೆಂಡ್ಸ್‌, ಜೀವಮಾನದ ಸ್ನೇಹಿತರು ಎಂದು ಅವಳಿಗೆ ಗೊತ್ತು.’’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X