• search

ಓಲ್ಡ್ ಫೇತ್ ಫುಲ್ : ನೆಲಗುದ್ದಿ ನೆಲಚು೦ಬಿಸುವ ಪಾತಾಳ ಕಾರ೦ಜಿ

By ಜಯಶ್ರೀ ದೇಶಪಾಂಡೆ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಒ೦ದೇ ಒ೦ದು ದಿನವೂ ಸಮಯ ತಪ್ಪುವುದಿಲ್ಲ ಅದು, ನಿಗದಿಯಾದ ವೇಳೆಗೆ ಕರಾರುವಾಕ್ಕಾಗಿ, ಠಾಕೋಠೀಕಾಗಿ ನೆಲಗುದ್ದಿ ನೆಗೆದು ಎಪ್ಪತ್ತಡಿಯ ಎತ್ತರಕ್ಕೇರಿ ಧಡಾರನೆ ಉರುಳಿ ನೆಲಚು೦ಬಿಸುವ ಪಾತಾಳಕಾರ೦ಜಿ, ಅದೇ ಓಲ್ಡ್ ಫೇತ್ ಫುಲ್.

  'ಓಲ್ಡ್ ಫೇತ್ಫುಲ್' ಹೆಸರೇ ಸೂಚಿಸುವಂತೆ ಬಹುನಂಬುಗೆಯ ಬಂಟನಂತೆ ತನ್ನ ಕಾಯಕವನ್ನು ಚಾಚೂತಪ್ಪದೆ ಗೈಯುವ ಈ ಬಿಸಿನೀರಿನ ಕಾರಂಜಿ ಇರುವ ಸ್ಥಳ ಅಮೆರಿಕಾದ ವಯೋಮಿಂಗ್ ರಾಜ್ಯದಲ್ಲಿರುವ ಯೆಲ್ಲೋಸ್ಟೋನ್ ನ್ಯಾಷನಲ್ ಪಾರ್ಕ್.

  Yellowstone National Park in US, Travel experiene - Part 1

  ಭೂಗರ್ಭದಾಳದ ವಿದ್ಯಮಾನಗಳು ಇಂದಿಗೂ ಮಾನವನ ಕೈಗೆ ಸಂಪೂರ್ಣವಾಗಿ ತಮ್ಮ ಗುಟ್ಟುಗಳನ್ನು ತೆರೆದಿಲ್ಲ. ಎಷ್ಟೋ ರಹಸ್ಯಗಳನ್ನು ಭೂಮಿ ಇನ್ನೂ ತನ್ನಲ್ಲಿಟ್ಟುಕೊ೦ಡಿದೆ ಅದಕ್ಕೆ ಅತ್ಯುತ್ತಮ ಉದಾಹರಣೆಯೇ 'ಓಲ್ಡ್ ಫೇತ್ ಫುಲ್'.

  ಮೂರರಿ೦ದ ಐದು ನಿಮಿಷಗಳವರೆಗೆ ಸಾವಿರಾರು ಘನ ಅಡಿಗಳಷ್ಟು ನೀರನ್ನು ಉಗ್ಗುವ ಇದರ ತೊ೦ಬತ್ತು ನಿಮಿಷಗಳ ಸಮಯದ ಕರಾರುವಾಕ್ಕತೆಯನ್ನು ಕಳೆದ ನೂರು ವರ್ಷಗಳಿ೦ದ ಅಧ್ಯಯನ ಮಾಡಿ ಇದಕ್ಕಿ೦ತ ಸರಿಯಾಗಿ ಸಮಯ ಪಾಲನೆ ಮಾಡುವ ಬ೦ಟ ಇಲ್ಲವೇ ಇಲ್ಲ ಎ೦ಬ ನಿರ್ಧಾರಕ್ಕೆ ಬ೦ದಿದ್ದಾರ೦ತೆ ಅಮೆರಿಕನ್ನರು.

  ''ಇದು ಎ೦ದೂ ತನ್ನ ನಿಗದಿಯಾದ ಸಮಯವನ್ನು ಮೀರಿ ಚಿಮ್ಮುವುದಿಲ್ಲ'' ಎ೦ದು ನಮಗೆ ವಿವರಿಸಿದ್ದರು ಅಲ್ಲಿನ ಸಿಬ್ಬ೦ದಿ, ನೂರಾರು ಮೈಲುಗಳ ಭವ್ಯ ವಿಸ್ತೀರ್ಣದಲ್ಲಿ ಹರಡಿಕೊ೦ಡಿರುವ ಎಲ್ಲೊ ಸ್ಟೋನ್ ನ್ಯಾಷನಲ್ ಪಾರ್ಕನ್ನು ತು೦ಬಿ ನಿ೦ತಿರುವ ಸಾವಿರಾರು ಬಿಸಿನೀರ ಬುಗ್ಗೆಗಳ ಮೇಲುಸ್ತುವಾರಿ ಮಾಡುತ್ತಾ, ಜನ ಅಲ್ಲಿ ನೀರಿಗೆ ಕೈ ಹಾಕಿ ಅಪಾಯವನ್ನೇನಾದರೂ ತ೦ದುಕೊಳ್ಳದ೦ತೆ ನಿಗಾ ವಹಿಸುವ ಇವರು ಮಾಹಿತಿ ಕೇಳಿ ಬರುವವರಿಗೆ ಅದನ್ನೂ ಧಾರಾಳವಾಗಿ ಒದಗಿಸುತ್ತಾರೆ ಇಲ್ಲಿನ ಸಿಬ್ಬಂದಿ.

  ಒ೦ದು ಸರೋವರದ ಸುತ್ತ ಭದ್ರವಾದ ಬೇಲಿ ಹಾಕಿದ್ದಾರೆ. ಇದಕ್ಕೆ ಕಾರಣವೇನು ಎ೦ದು ಕೇಳಿದರೆ ಅಲ್ಲಿರುವ ಆ ಎಮರಾಲ್ಡ್ ಸರೋವರದ ನೀರು ಸದಾ ಕುದಿಯುತ್ತಲೇ ಇರುತ್ತದೆಯ೦ತೆ!

  ಎಲ್ಲಿ ನೋಡಿದರೂ ಅಲ್ಲೊ೦ದರ೦ತೆ ಕಾಣಿಸಿಕೊಳ್ಳುವ ನಾಲ್ಕುನೂರಕ್ಕೂ ಹೆಚ್ಚಿನ ಸ೦ಖ್ಯೆಯ ಇಲ್ಲಿನ ಬಿಸಿಕಾರ೦ಜಿಗಳನ್ನು ನೋಡಲು ಹೋದಾಗ ನಡೆಯುವ ತಮಾಷೆಯೆ೦ದರೆ ಇತ್ತ ಒ೦ದು ಕಾರ೦ಜಿ ಚಿಮ್ಮುವುದನ್ನು ನೋಡುತ್ತಿರುವಾಗಲೇ ''ಅಗೋ ..ಅಲ್ಲಿ ಇನ್ನೊಂದು ಜಿಗಿಯಿತು...ಆ ಕಡೆ ಮತ್ತೊ೦ದು...ಓ..ಓ..ಓ ಹೀಗೆನ್ನುತ್ತಾ.. ನಗುತ್ತ ಜನ ಎಲ್ಲೆಡೆಗೂ ನಗುತ್ತಲೇ ಗಡಿಬಿಡಿಯಿ೦ದ ಓಡಿದ್ದೇ ಓಡಿದ್ದು ..ನಾವೂ ಹೀಗೆಯೇ ಓಡಾಡಿದ್ದು!!

  Yellowstone National Park in US, Travel experiene - Part 1

  ಒಳ್ಳೆಯ ಬಿಸಿಲಿದ್ದ ಸಮಯವನ್ನು ನೋಡಿ ಯೆಲ್ಲೋಸ್ಟೋನ್ ಪ್ರದೇಶವನ್ನು ಪ್ರವೇಶಿಸಿದ ನಮಗೆ ಸ್ವಾಗತ ಹೇಳಿದ್ದು ಆರ್ಟಿಸ್ಟ್ ಪೈ೦ಟ್, ಇಲ್ಲಿ೦ದ ಕಣ್ಣುಗಳೆದುರು ಚಾಚಿಕೊಳ್ಳುವ ದೃಶ್ಯದ ರಮಣೀಯತೆಯನ್ನು ಶಬ್ದಗಳಲ್ಲಿ ಹಿಡಿದಿಡುವುದೇ ದುಸ್ತರ.

  ಇಲ್ಲೊ೦ದು ವಿಶಾಲವಾದ ಮಹಾ ಬಿಲವಿದೆ. 45 ಮೈಲು ಉದ್ದ, 30 ಮೈಲು ಅಗಲ,12000 ಅಡಿಯಷ್ಟು ಆಳದ ಈ ಬೃಹತ್ ಕಣಿವೆ ಹುಟ್ಟಲು ಕಾರಣ ಲಕ್ಷಾವಧಿ ವರ್ಷಗಳ ಹಿ೦ದೆ ಸಿಡಿದು ಉಕ್ಕಿದ ಜ್ವಾಲಾಮುಖಿ ಉಗುಳಿದ ಲಾವಾರಸ ಪೂರ್ವ ಪಶ್ಚಿಮಮವಾಗಿ ಹರಿದು ಮಹಾಬ೦ಡೆಗಳನ್ನು ಕೊರೆಯುತ್ತ ಅಸ೦ಖ್ಯಾತ ಪೃಕೃತಿ ವೈಶಿಷ್ಟ್ಯ ಗಳಿಗೆ ಮೂಲವಾಯಿತು.

  ನೀರ್ಗಲ್ಲುಗಳು ತು೦ಬಿ ಜಲಾಶಯಗಳಾಗಿ, ನದಿಯಾಗಿ ಮತ್ತೆ ಕಣಿವೆಯೊಳಗಿನ ಆಕಾರಗಳು ಚಿತ್ರ ವಿಚಿತ್ರಾಕೃತಿಗಳಾಗಿ ಕಳೆದ ಹತ್ತು ಸಾವಿರ ವರ್ಷಗಳಲ್ಲಿ ಈ ಪ್ರದೇಶವಿಡೀ ಕೌತುಕಮಯ ತಾಣಗಳ ಒಡಲಾಗಿ ನಿ೦ತಿದೆ. ಮುಂದಿನ ಪುಟ ಕ್ಲಿಕ್ಕಿಸಿ..

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Yellowstone National Park in United States, Travel experiene of Jayashree Deshpande- Part 1

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more