ಸರ್ಜಿಕಲ್ ಸ್ಟ್ರೈಕ್ ಅಂದ್ರೆ... ಹಿಂಗಿರಬೇಕು! ಸೂಪರ್!

By: ನಾಗರಾಜ್ ಎಂ, ಕನೆಕ್ಟಿಕಟ್
Subscribe to Oneindia Kannada

ಬಾಯ್ OR ಗರ್ಲ್ ಅಂತಾ ಅಮೆರಿಕಾ ಮಂದಿ ಓಟು ಹಾಕುತ್ತಾ ಕುತೂಹಲದಿಂದ ರಿಸಲ್ಟ್ಸ್ ಬಗ್ಗೆ ಯೋಚಿಸೋವಾಗ, ಅವರಿಗಿಂತ ಹೆಚ್ಚಾಗಿ ನಮ್ಮ ಭಾರತದಲ್ಲೇ "ಟ್ರಂಪ್ or ಹಿಲರಿ " ಅಂತಾ ಬೆಟ್ ಕಟ್ಟಿ ಚರ್ಚೆ ಮಾಡ್ತಾ, ಕೆಲವೊಂದು ಕಡೆ ಭಾವಿ ಅಮೇರಿಕಾ ಅಧ್ಯಕ್ಷರಿಗೋಸ್ಕರ ಹೋಮ, ಪೂಜೆ ಮಾಡ್ತಾ ಇರುವಾಗ...

ಇಂದು ನಮ್ಮ ಭಾರತದಲ್ಲಿ ಚಲಾವಣೆಯಲ್ಲಿರುವ 13,56,360 ಕೋಟಿ ರುಪಾಯಿ ಹಣವನ್ನು ಕೇವಲ ಐವತ್ತೇ ಐವತ್ತು ನಿಮಿಷಗಳಲ್ಲಿ ಅನಧಿಕೃತ ಮಾಡಿ ಜನರಿಗೆಲ್ಲರಿಗೂ ಒಂದೇ ಸಮನೆ ಶಾಕ್ ಕೊಟ್ಟು, ಭ್ರಷ್ಟರಿಗೆ ತಾವು "ಚೆಕ್‌ಮೇಟ್" ಎಂಬಂಥ ಭಾವನೆಯನ್ನು ಮೂಡುವಂತೆ ಮಾಡಿ, ಸಾವಿರಾರು ಮಂದಿಗೆ ಪರ್ಮನೆಂಟ್ ಆಗಿ ನಿದ್ದೆ ಬರದಂತೆ ಮಾಡಿದ ನರೇಂದ್ರ ಮೋದಿಯ "₹500, 1000 ನೋಟು ರದ್ದು.... ಕಪ್ಪು ಹಣ - ಭ್ರಷ್ಟ ಹಣ, ಖೋಟಾ ನೋಟು, ಭಯೋತ್ಪಾದನೆ" ತಡೆಯ ನಡೆ ....ನಿಜವಾಗ್ಲೂ ಸೂಪರ್ ಸರ್ಜಿಕಲ್ ಸ್ಟ್ರೈಕ್! [ಹಳೇ 500, 1,000 ರುಪಾಯಿ ನೋಟು ಏನು ಮಾಡೋದು: ಪ್ರಶ್ನೋತ್ತರಗಳು..]

What a super surgical strike by Narendra Modi

ಅದರಲ್ಲೂ ಹೀಗಿನ 500, 1000 ನೋಟುಗಳನ್ನು ಬಳಸ ಬೇಕಂದ್ರೆ ಮುಂದಿನ 72 ಗಂಟೆಗಳೊಳಗೆ ರೈಲ್ವೆ, ವಿಮಾನ ಟಿಕೆಟ್ ಖರೀದಿ, ಪೆಟ್ರೋಲ್ ಬಂಕ್... ಬಿಟ್ರೆ ಸರ್ಕಾರಿ ಆಸ್ಪತ್ರೆ, ಶವಾಗಾರದಲ್ಲಿ ಮಾತ್ರ ಬಳಸಬಹುದು ಅಂತ ವಿನಾಯ್ತೋ ಕೊಟ್ಟಿರೋದು ನೋಡಿದ್ರೆ... "ಕಪ್ಪು ಹಣ - ಭ್ರಷ್ಟ ಹಣ, ಖೋಟಾ ನೋಟು" ಮಡುಗಿರೋರು ... ಇಲ್ಲ ಅಂದ್ರೆ ರೈಲ್, ವಿಮಾನದಲ್ಲಿ ಓಡಿ ಹೋಗ್ಬೇಕು.. ತಪ್ಪಿದರೆ ಹಾರ್ಟ್ ಅಟ್ಯಾಕ್ ನಿಂದ ಆಸ್ಪತ್ರೆ... ಇಲ್ಲ ಶವಾಗಾರದ ಕಡೆ" ಮುನ್ಸೂಚನೆಗಳು ಬಹಳ ಹೆಚ್ಚಾಗಿ ಗೋಚರಿಸುತ್ತಿವೆ ಅಲ್ವಾ?

ನಿಜಕ್ಕೂ ಇಂತಹ ಒಂದು ದಿಟ್ಟ - ಧೈರ್ಯದ ನಡೆ ಬೇಕಾಗಿತ್ತು ನಮ್ಮ ಭಾರತದಲ್ಲಿ ... ಸ್ವಚ್ಛ ಭಾರತ ನಿರ್ಮಿಸುವ ಹಾದಿಯಲ್ಲಿ ... [ನೋಟಿಗೆ ಕಡಿವಾಣ : ಎಲ್ಲರೂ ತಿಳಿಯಬೇಕಾಗಿರುವುದೇನು?]

ಪ್ರಧಾನ ಮಂತ್ರಿ ಮೋದಿಜಿ ಮತ್ತು ಕೇಂದ್ರ ಸರ್ಕಾರಕ್ಕೆ ಒಂದು ನಮನ... ಇನ್ನು ಮುಂದೆಯೂ ಈ ರೀತಿಯ ಸ್ಟ್ರೈಕ್ಸ್ ಬರ್ತಾ ಇರ್ಲಿ ...ವ್ಯವಸ್ಥೆಯ ಸ್ವಚ್ಛ ಮಾಡ್ತಾ ಇರ್ಲಿ ಅಂಬುದೇ ಜನ ಸಾಮಾನ್ಯರ ಬಯಕೆ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
What a super surgical strike by Narendra Modi! He has hit the black money owners where it hurts them the most. A write up by Nagaraja Maheswarappa, Connecticut, USA.
Please Wait while comments are loading...