ಅಲೆನ್ ಸ್ಕೂಲ್ ಮಂಡಳಿಗೆ ಕನ್ನಡಿಗ ವತ್ಸ ಆಯ್ಕೆ

Posted By:
Subscribe to Oneindia Kannada

ಮೈಸೂರಿನ ಮೂಲದವರಾದ ಅಮೆರಿಕನ್ನಡಿಗ ಶ್ರೀವತ್ಸ (ವತ್ಸ) ರಾಮನಾಥನ್ ಅವರು ಟೆಕ್ಸಾಸ್ ನ ಅಲೆನ್ ನಲ್ಲಿರುವ ಅಲೆನ್ ಇಂಡಿಪೆಂಡೆಂಟ್ ಸ್ಕೂಲ್ ಡಿಸ್ಟ್ರಿಕ್ಟ್ ನ ಆಡಳಿತ ಮಂಡಳಿಯ 7ನೇ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಅಲೆನ್ ಇಂಡಿಪೆಂಡೆಂಟ್ ಸ್ಕೂಲ್ ಡಿಸ್ಟ್ರಿಕ್ಟ್ ನ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿರುವ ಪ್ರಪ್ರಥಮ ಭಾರತೀಯ-ಅಮೆರಿಕನ್ ಆಗಿದ್ದಾರೆ. ಅವರ ಅವಧಿ 2018ರ ಮೇವರೆಗೂ ಇರಲಿದೆ. 7ನೇ ಸ್ಥಾನಕ್ಕೆ ಮುಂದಿನ ವರ್ಷದ ಮೇನಲ್ಲಿ ಚುನಾವಣೆ ನಡೆಯಲಿದೆ.

Vatsa Ramanathan elected to Allen Independent School District Board of Trustees

ವತ್ಸ ರಾಮನಾಥನ್ ಅವರು ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 1992ರಲ್ಲಿ ಪದವಿ ಗಳಿಸಿದರು. ಅವರು 1998ರಿಂದ ರಿಚರ್ಡ್ಸನ್ ನಲ್ಲಿರುವ ಫ್ಯುಜಿಟ್ಸು ಕಮ್ಯೂನಿಕೇಷನ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಉತ್ತರ ಟೆಕ್ಸಾಸ್ ನಲ್ಲಿರುವ ಮಲ್ಲಿಗೆ ಕನ್ನಡ ಸಂಘದ ಅಧ್ಯಕ್ಷರೂ ಆಗಿರುವ ಅವರು ಮೈಸೂರಿನಲ್ಲಿರುವ ಶ್ರೀ ಶಾರದಾ ಪಬ್ಲಿಕ್ ಸ್ಕೂಲ್ ನ ಆಡಳಿತ ಮಂಡಳಿಯ ಸದಸ್ಯರಾಗಿದ್ದು, ಅಮೆರಿಕದ ಅಲೆನ್ ಟಿಎಕ್ಸ್ ನಲ್ಲಿ ರಿವರ್ ಕ್ರೆಸ್ಟ್ ಖಾಸಗಿ ಶಾಲೆಯನ್ನೂ ನಡೆಸುತ್ತಿದ್ದಾರೆ.

Vatsa Ramanathan elected to Allen Independent School District Board of Trustees

ಅಲೆನ್, ಮ್ಯಾಕ್ ಕಿನ್ನೋ, ಪ್ಲಾನೋ ಮತ್ತು ಪಾರ್ಕರ್ ನಗರಗಳನ್ನು ಒಳಗೊಂಡಿರುವ ಶೈಕ್ಷಣಿಕ ಜಿಲ್ಲೆಯಲ್ಲಿ 18,700 ವಿದ್ಯಾರ್ಥಿಗಳಿದ್ದಾರೆ. ಶ್ರೀವತ್ಸ ರಾಮನಾಥನ್ ಅವರು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಹಲವಾರು ಮಂಡಳಿಗಳ ಸದಸ್ಯರಾಗಿದ್ದಾರೆ.

1) ಅಲೆನ್ ಇಂಡಿಪೆಂಡೆಂಟ್ ಸ್ಕೂಲ್ ಡಿಸ್ಟ್ರಿಕ್ಟ್ ನ ಸ್ಟ್ರಾಟೆಜಿಕ್ ಯೋಜನಾ ಮಂಡಳಿಯ ಸದಸ್ಯ.
2) ಅಲೆನ್ ಇಂಡಿಪೆಂಡೆಂಟ್ ಸ್ಕೂಲ್ ಡಿಸ್ಟ್ರಿಕ್ಟ್ ನ ಪ್ರಾಜೆಕ್ಟ್ ಕಿಡ್ಸ್ ನ ಸದಸ್ಯ.
3) ಅಲೆನ್ ಪಾರ್ಕ್ಸ್ ಫೌಂಡೇಷನ್ ನ ಉಪಾಧ್ಯಕ್ಷ.
4) ಅಲೆನ್ ನಗರ ಗ್ರಂಥಾಲಯ ಬೋರ್ಡ್ ನ ಸದಸ್ಯ.
5) ಅಲೆನ್ ಸನ್ ರೈಸ್ ರೋಟರಿಯ ಸದಸ್ಯ.
6) ಉತ್ತರ ಟೆಕ್ಸಾಸ್ ನಲ್ಲಿರುವ ಮಲ್ಲಿಗೆ ಕನ್ನಡ ಸಂಘದ ಅಧ್ಯಕ್ಷ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Srivatsa (Vatsa) Ramanathan has been elected to the Allen Independent School District Board of Trustees, Place 7. Vatsa is basically from Mysore and he will be the first Indian-American to hold a post of a Board Member of Allen Independent School District.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ