ನ್ಯೂಜೆರ್ಸಿ ಕನ್ನಡಿಗ ರಾಜ್ ಪಾಟೀಲ್ ಕೊರಳಿಗೆ ಅಕ್ಕದ ಚುಕ್ಕಾಣಿ
ಬೆಂಗಳೂರು, ಆಗಸ್ಟ್ 21 : ನ್ಯೂಜೆರ್ಸಿಯ ಉತ್ಸಾಹಿ ಕನ್ನಡಿಗ ರಾಜ್ ಪಾಟೀಲ್ ಅವರು ಉತ್ತರ ಅಮೆರಿಕಾ ಕನ್ನಡ ಕೂಟಗಳ ಆಗರ (ಅಕ್ಕ)ದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರ ಜತೆಗೆ, 2015-16ನೇ ಸಾಲಿನ ಆಡಳಿತ ಮಂಡಳಿಯ ವಿವಿಧ ಹುದ್ದೆಗಳಿಗೆ ಇತರ ಐದು ಮಂದಿ ಪದಾಧಿಕಾರಿಗಳು ಆಯ್ಕೆಗೊಂಡಿದ್ದಾರೆ. ಹೆಸರುಗಳು ಇಂತಿವೆ.

* ರಾಜ್ ಪಾಟೀಲ್ - ಅಧ್ಯಕ್ಷ (ನ್ಯೂಜೆರ್ಸಿ)
* ಡಾ. ನವೀನ್ ಕೃಷ್ಣ - ಉಪಾಧ್ಯಕ್ಷ (ಮಿಸ್ಸೌರಿ)
* ರವಿ ಬೋರೇಗೌಡ - ಉಪಾಧ್ಯಕ್ಷ (ವರ್ಜೀನಿಯ)
* ಶರತ್ ಭಂಡಾರಿ - ಉಪಾಧ್ಯಕ್ಷ (ನ್ಯೂಯಾರ್ಕ್)
* ಧನಂಜಯ ಕೆಂಗಯ್ಯ - ಕಾರ್ಯದರ್ಶಿ (ಕ್ಯಾಲಿಫೋರ್ನಿಯ)
* ಚಂದ್ರು ಆರಾಧ್ಯ - ಖಚಾಂಜಿ (ನ್ಯೂಜೆರ್ಸಿ)
* ರಘು ಶಿವರಾಮ್ - ಜಂಟಿ ಕಾರ್ಯದರ್ಶಿ (ಕ್ಯಾಲಿಫೋರ್ನಿಯ)
* ಯಮುನಾ ನಾಗರಾಜ್ - ಜಂಟಿ ಕಾರ್ಯದರ್ಶಿ (ಉತ್ತರ ಕೆರೋಲಿನ)
* ಜಂಟಿ ಖಚಾಂಜಿಯ ಎರಡು ಹುದ್ದೆಗಳು ತೆರವಾಗಿರುತ್ತವೆ. ಈ ಎರಡೂ ಸ್ಥಾನಗಳನ್ನು ತುಂಬುವುದು ಅಧ್ಯಕ್ಷರ ವಿವೇಚನೆಗೆ ಬಿಟ್ಟಿರುತ್ತದೆ. ನೂತನ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳ ಕಿರು ಪರಿಚಯ ಇಲ್ಲಿದೆ.
ಈ ಚುನಾವಣೆಯ ಫಲಿತಾಂಶವನ್ನು ಚುನಾವಣಾ ಸಮಿತಿ ಗುರುವಾರ ಅಮೆರಿಕಾದಲ್ಲಿ ಪ್ರಕಟಿಸಿತು. ಸಮಿತಿಯಲ್ಲಿ ಅಕ್ಕ ಸಂಸ್ಥೆಯಲ್ಲಿ ಈ ಹಿಂದೆ ನಾನಾ ಹುದ್ದೆಗಳನ್ನು ಅಲಂಕರಿಸಿದ ಮೂವರು ಅನುಭವಿಗಳಿದ್ದರು. ಅವರುಗಳೆಂದರೆ, ಪಂಪ ಕನ್ನಡ ಕೂಟದ ರಮೇಶ್ ಗೌಡ (ಮಿಷಿಗನ್), ಕಾವೇರಿ ಕನ್ನಡ ಸಂಘದ ನಾಗಶಂಕರ್ (ವರ್ಜೀನಿಯ) ಮತ್ತು ವರ್ಜೀನಿಯಾದವರೇ ಆದ ಶಾಂತರಾಜ್ ಕೆಂಪಯ್ಯ.












Click it and Unblock the Notifications