ಈ ಹೋಟೆಲ್‌ನಲ್ಲಿ ತಿಂಡಿ ಮಾಡಲು 5 ಗಂಟೆ ಚಾರಣ ಮಾಡಲೇಬೇಕು... ಇಲ್ಲಿ ರಸ್ತೆ, ವಾಹನ ಸೌಕರ್ಯ ಇಲ್ಲವೇ ಇಲ್ಲ

ಮನೆಯಲ್ಲಿ ತಿಂಡಿ ತಿಂದು ಬೇಸರವಾದಾಗ ಸಾಮಾನ್ಯವಾಗಿ ಜನರು ಹೊಟೇಲ್‌ಗಳತ್ತ ಮುಖ ಮಾಡುವುದು ಸಾಮಾನ್ಯ. ಹೊಟೇಲ್‌ಗಳಲ್ಲಿ ತಮ್ಮ ಇಷ್ಟದ ತಿಂಡಿಯನ್ನು ತಿಂದು ಬರುತ್ತಾರೆ. ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೂಗಳತೆಯ ದೂರದಲ್ಲೇ ಹೊಟೇಲ್‌ಗಳಲ್ಲಿ ಕಾಣಿಸುಕೊಳ್ಳುತ್ತವೇ. ಆದರೆ ಜನರು ತಮ್ಮ ಇಷ್ಟದ ಹೊಟೇಲ್‌ಗೆ ಹೋಗಿ ಆಹಾರದ ಸವಿಯನ್ನು ಸವಿದು ಬೀಗುತ್ತಾರೆ. ಆದರೆ ನಾವು ಇಂದು ಹೇಳುತ್ತಿರುವ ಹೊಟೇಲ್‌ಗೆ ನೀವು ಏನಾದ್ರೂ ಹೋಗಲು ಬಯಸಿದರೆ, ನೀವು 5 ಗಂಟೆಗಳ ಅವಧಿ ಕಷ್ಟಪಡಲೇ ಬೇಕು. ಈ ಹೊಟೇಲ್‌ ಯಾವುದು? ಇದು ಇರುವುದು ಎಲ್ಲಿ? ಇದಕ್ಕೆ ಹೋಗಲು ದಾರಿ ಯಾವುದು ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಭೂಮಿಯ ಮೇಲೆ ಅನೇಕ ರೀತಿಯ ಭೌಗೋಳಿಕ ಪ್ರದೇಶಗಳಿವೆ. ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವೈಶಿಷ್ಟ್ಯತೆ ಮತ್ತು ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಕೆಲವೆಡೆ ಹಸಿರು ಕಾಡುಗಳು, ಬೆಟ್ಟಗಳು, ನದಿಗಳು ಮತ್ತು ಸಮೃದ್ಧ ಕೃಷಿಭೂಮಿಗಳು ಪ್ರಕೃತಿಯ ಸೊಬಗನ್ನು ಹೆಚ್ಚಿಸುತ್ತವೆ. ಪರ್ವತ ಶ್ರೇಣಿಗಳು, ವಿಶಾಲ ಸಮತಟ್ಟು ಪ್ರದೇಶಗಳು ಮತ್ತು ದಟ್ಟವಾದ ಕಾಡುಗಳು ಭೂಮಿಯ ಸೌಂದರ್ಯವನ್ನು ಇನ್ನಷ್ಟು ಮನಮೋಹಕಗೊಳಿಸುತ್ತವೆ. ಇಂತಹ ಅದ್ಭುತ ಪ್ರಕೃತಿ ನಡುವೆ ಈಗ ವಿಶ್ವದ ಅತ್ಯಂತ ದೂರದ ಹೋಟೆಲ್‌ಗಳಲ್ಲಿ ಒಂದಾದ "ಮಾರ್ಗರಿಟಾ ಹಟ್" (Margherita Hut) ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

Margherita Hut Italy

ಮಾರ್ಗರಿಟಾ ಹಟ್ ಇಟಲಿಯ ಎತ್ತರದ ಪರ್ವತ ಪ್ರದೇಶದಲ್ಲಿ, ಸಮುದ್ರಮಟ್ಟದಿಂದ ಸುಮಾರು 15,000 ಅಡಿ ಎತ್ತರದಲ್ಲಿ ನಿರ್ಮಾಣಗೊಂಡಿದೆ. ವಿಶ್ವದ ಅತ್ಯಂತ ದೂರದ ಮತ್ತು ಪ್ರತ್ಯೇಕವಾಗಿರುವ ಹೋಟೆಲ್‌ಗಳಲ್ಲಿ ಇದೂ ಒಂದಾಗಿದೆ. ಈ ಹೋಟೆಲ್‌ಗೆ ತಲುಪಲು ಪ್ರವಾಸಿಗರು ಸುಮಾರು ಐದು ಗಂಟೆಗಳ ಕಾಲ ಕಠಿಣವಾದ ಚಾರಣ ಮಾಡಬೇಕಾಗುತ್ತದೆ.

ಕೊಡಗನ್ನು
ಕೊಡಗನ್ನು"ಭಾರತದ ಸ್ಕಾಟ್‌ಲ್ಯಾಂಡ್" ಎಂದು ಕರೆಯೋದು ಯಾಕೆ ಗೊತ್ತಾ?

'ದಿ ಸನ್' ವರದಿ ಪ್ರಕಾರ, ಮಾರ್ಗರಿಟಾ ಹಟ್ ಇಟಲಿ-ಸ್ವಿಟ್ಜರ್‌ಲ್ಯಾಂಡ್ ಗಡಿಭಾಗದ ಎತ್ತರದ ಪ್ರದೇಶದಲ್ಲಿದೆ. ಆದರೆ ಅಧಿಕೃತವಾಗಿ ಇದು ಇಟಲಿಯಲ್ಲಿಯೇ ಬರುತ್ತದೆ. 1893ರಲ್ಲಿ ಇಟಲಿಯ ರಾಣಿ ಮಾರ್ಗರಿಟಾ ಆಫ್ ಸಾವೊಯ್ ಈ ಪ್ರದೇಶಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಹೋಟೆಲ್‌ಗೆ ಅವರ ಹೆಸರನ್ನು ಇರಿಸಲಾಗಿದೆ. ಇಟಾಲಿಯನ್ ಆಲ್ಪ್ಸ್ ಪರ್ವತ ಶ್ರೇಣಿಯ ಸುಂದರ ಪ್ರಕೃತಿ ಮಧ್ಯೆ ನಿರ್ಮಾಣವಾಗಿರುವ ಈ ಐತಿಹಾಸಿಕ ಕಟ್ಟಡ ಸಾಹಸ ಪ್ರಿಯರಿಗೆ ಅಪರೂಪದ ಅನುಭವವನ್ನು ನೀಡುತ್ತದೆ.

ಮಾರ್ಗರಿಟಾ ಹಟ್‌ಗೆ ತಲುಪುವುದು ಅಷ್ಟು ಸುಲಭದ ಮಾತಲ್ಲ. ಹೆಚ್ಚಿನ ಪ್ರವಾಸಿಗರು ಅಲಾಗ್ನಾ ವಲ್ಸೇಸಿಯಾ ಅಥವಾ ಗ್ರೆಸ್ಸೋನಿ ಪ್ರದೇಶಗಳಿಂದ ತಮ್ಮ ಪ್ರಯಾಣ ಆರಂಭಿಸುತ್ತಾರೆ. ಎತ್ತರದ ಪ್ರದೇಶಕ್ಕೆ ದೇಹ ಹೊಂದಿಕೊಳ್ಳಲು ಚಾರಣ ಮಾಡುವವರು ಮೊದಲು ಕಡಿಮೆ ಎತ್ತರದ ಪ್ರದೇಶದಲ್ಲಿರುವ ಆಶ್ರಯ ಕೇಂದ್ರಗಳಲ್ಲಿ ಒಂದು ರಾತ್ರಿ ತಂಗಿದ್ದು ಮುಂದಿನ ದಿನ ತಮ್ಮ ಚಾರಣವನ್ನು ಪ್ರಾರಂಭಿಸುತ್ತಾರೆ.

ಭಾರತೀಯರಿಗೆ ವೀಸಾ ಫ್ರೀ ಟಾಪ್ 7 ದೇಶಗಳು - ಕಡಿಮೆ ಖರ್ಚಿನಲ್ಲಿ ವಿದೇಶ ಪ್ರವಾಸ
ಭಾರತೀಯರಿಗೆ ವೀಸಾ ಫ್ರೀ ಟಾಪ್ 7 ದೇಶಗಳು - ಕಡಿಮೆ ಖರ್ಚಿನಲ್ಲಿ ವಿದೇಶ ಪ್ರವಾಸ

ಈ ಹೋಟೆಲ್‌ಗೆ ತಲುಪಲು ಗ್ನಿಫೆಟ್ಟಿ ಗ್ಲೇಶಿಯರ್ ಮತ್ತು ಲಿಸ್ ಗ್ಲೇಶಿಯರ್ ಮಾರ್ಗಗಳನ್ನು ಬಳಸಲಾಗುತ್ತದೆ. ಈ ಎರಡೂ ಮಾರ್ಗಗಳು ಅತ್ಯಂತ ಕಠಿಣ ಮತ್ತು ತಾಂತ್ರಿಕ ಚಾರಣಕ್ಕೆ ಪ್ರಸಿದ್ಧವಾಗಿವೆ. ಹಿಮದಿಂದ ಆವರಿಸಿದ ಜಾರು ಪ್ರದೇಶಗಳಲ್ಲಿ ಸಾಗಬೇಕಾಗುವುದರಿಂದ ಕ್ರಾಂಪಾನ್‌, ಕಬ್ಬಿಣದ ಕಡ್ಡಿ, ಐಸ್ ಆಕ್ಸ್‌ ಮತ್ತು ರೋಪ್‌ಗಳಂತಹ ಉಪಕರಣಗಳನ್ನು ಬಳಸಬೇಕಾಗುತ್ತದೆ. ಈ ಚಾರಣ ಮಾಡಲು ಹೆಚ್ಚಿನ ಕೌಶಲ್ಯ, ದೈಹಿಕ ಸಾಮರ್ಥ್ಯ ಮತ್ತು ಸಹನೆಯ ಮುಖ್ಯವಾಗಿದೆ.

ಪ್ರಕೃತಿ ಮತ್ತು ಸಾಹಸವನ್ನು ಒಂದೇ ಸಮಯದಲ್ಲಿ ಅನುಭವಿಸಲು ಬಯಸುವ ಪ್ರವಾಸಿಗರಿಗೆ ಮಾರ್ಗರಿಟಾ ಹಟ್ ಒಂದು ವಿಶೇಷ ಆಕರ್ಷಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+