ಹವ್ಯಾಸಿ ಕಲಾವಿದರ ರಾಯರ ಭಕ್ತಿಗೀತೆಯ ಆಲ್ಬಂ

Posted By:
Subscribe to Oneindia Kannada

ಅನಿವಾಸಿ ಭಾರತೀಯ ಹವ್ಯಾಸಿ ಕಲಾವಿದರು ಶ್ರೀರಾಘವೇಂದ್ರ ಸ್ವಾಮಿಗಳ ಭಕ್ತಿಗೀತೆಯ ಆಲ್ಬಂವೊಂದನ್ನು ಹೊರತರುತ್ತಿದ್ದಾರೆ.

ಗುರು ಬೃಂದಾವನ ಹೆಸರಿನ ಈ ಆಲ್ಬಂಬಲ್ಲಿ ಒಟ್ಟು ಒಂಬತ್ತು ಹಾಡುಗಳಿವೆ. ಎಲ್ಲಾ ಒಂಬತ್ತು ಹಾಡುಗಳಿಗೆ ಆಸ್ಟ್ರೇಲಿಯಾದ ಕೃಷ್ಣಪ್ರಸಾದ್ ಸಾಹಿತ್ಯ ನೀಡಿದ್ದಾರೆ.

 Guru Raghavendra Swamy devotional Kannada songs album by NRI

ಸಂಗೀತ ಅಮೆರಿಕಾದ ರಾಮ್ ಪ್ರಸಾದ್ ಅವರದ್ದು. ಇನ್ನು ಆಲ್ಬಂಗೆ ವಾದ್ಯ ಸಂಯೋಜನೆ ಮಾಡಿದವರು ಡಾ. ಜಯಶ್ರೀ ಅರವಿಂದ್ ಮತ್ತು ನಿರ್ಮಾಪಕರು ಆಸ್ಟ್ರೇಲಿಯಾದ ಗೀತಾ ಕೃಷ್ಣ.

ಅಮೆರಿಕಾದಲ್ಲಿರುವ ಅನಿವಾಸಿ ಕನ್ನಡಿಗರಾದ ಪರಿಮಳ ಮುರಳಿ, ವಾಣಿ ಸತೀಶ್, ವೆಂಕಟೇಶ್ ವಿಠಲಾಚಾರ್, ಸೋಮ ಶೇಖರ್ ಮತ್ತು ರಾಂಪ್ರಸಾದ್ ಆಲ್ಬಂನ ಒಂಬತ್ತು ಕಲೆಕ್ಷನ್ ನಲ್ಲಿ ವಿವಿಧ ಹಾಡುಗಳನ್ನು ಹಾಡಿದ್ದಾರೆ.

ಹವ್ಯಾಸಿ ಕಲಾವಿದರ ಈ ಪ್ರಯತ್ನಕ್ಕೆ ಶಹಬ್ಬಾಸ್ ಹೇಳುತ್ತಾ, ಆಲ್ಬಂನ ಯುಟ್ಯೂಬ್ ಲಿಂಕ್ ಇಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Guru Raghavendra Swamy devotional Kannada songs album by NRI
Please Wait while comments are loading...