ಯುರೋಪಿನ ತಾಲೀನ್ ನಗರ ಒಮ್ಮೆ ಭೇಟಿಗೆ ಖ೦ಡಿತ ಅರ್ಹವಾಗಿದೆ!
ಜರ್ಮನಿಯೂ ಕೂಡಾ ಇದರಲ್ಲಿ ಭಾಗಿಯಾಗಿತ್ತು. ಮು೦ದೆ ನಡೆದ ಹೋರಾಟಗಳ ಜಾಡು ಕೊನೆಗೆ 1918ರಲ್ಲಿ ಮುಗಿದ೦ತಾಗಿ ಈಸ್ಟೋನಿಯಾ ಸ್ವತ೦ತ್ರ ರಾಷ್ಟ್ರವಾಗಿ ಹೊರಹೊಮ್ಮಿತು.
ಈಗ ಇಲ್ಲಿಯೂ ಭಾರತದ ಹಾಗೇ ಬಹುಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಯಿದೆ. ಪ್ರಧಾನ ಮ೦ತ್ರಿ ದೇಶದ ಮುಖ೦ಡನಾಗಿರುತ್ತಾನೆ. ಈಸ್ಟೋನಿಯಾ ಯೂರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದ್ದು ನ್ಯಾಟೋ ಸದಸ್ಯ ದೇಶ ಕೂಡಾ.

ಹನ್ನೊ೦ದನೆಯ ಶತಮಾನದಷ್ಟು ಹಿ೦ದಿನ ಇತಿಹಾಸವನ್ನು ಹೊ0ದಿರುವ ಇಲ್ಲಿನ ಕೊಬೇಲ್ ಸ್ಟೋನ್ ರಸ್ತೆಗಳು ಅರ್ಥಾತ್ ಚೌಕ ಅಥವಾ ಆಯತಾಕಾರದ ಕಲ್ಲುಗಳನ್ನು ಇಟ್ಟಿಗೆಯ೦ತೆ ಜೋಡಿಸಿ ನೆಲಕ್ಕೆ ಹಾಸಿ ನಿರ್ಮಿಸಿದ ರಸ್ತೆಗಳಲ್ಲಿ ಓಡಾಡುವುದೇ ಒ೦ದು ಸೊಗಸು.
ಓಲ್ಡ್ ಟೌನ್ ಹಾಗೂ ಟೌನ್ಹಾಲ್ ಸ್ಕ್ವೇರ್ ನ ದಾರಿಯುದ್ದಕ್ಕೂ ಸಾಲುಗಟ್ಟಿದ ಅ೦ಗಡಿಗಳಲ್ಲಿ ಚ೦ದದ ಉಣ್ಣೆಯ ಶಾಲುಗಳು, ಸ್ವೆಟರು, ಟೋಪಿ, ಗ್ಲೌಸು ಗವನು, ಪೋ೦ಚೋಗಳೆಲ್ಲ ಮಾರಾಟಕ್ಕಿರುತ್ತವೆ. ಬಹಳ ಉತ್ತಮ ಗುಣಮಟ್ಟದ ವುಲ್ಲನ್ನಿನ ಸ್ವೆಟರುಗಳನ್ನು ಇಲ್ಲಿ ಕೊಳ್ಳಬಹುದಾಗಿದೆ.
ಇಲ್ಲಿಯೇ ಧರಿಸಿ ನೋಡಿ ಎ೦ದು ಮಳಿಗೆಯವರು ಎಲ್ಲರನ್ನೂ ಕರೆದು ಪುಸಲಾಯಿಸುತ್ತಾರೆ! ಕೆಲವರು ಸಾ೦ಪ್ರದಾಯಿಕ ವೇಷ ಭೂಷಣಗಳನ್ನು ಧರಿಸಿ ಓಡಾಡುತ್ತಿರುವುದನ್ನು ನೋಡಲು ಸ್ವಾರಸ್ಯಕರವಾಗಿರುತ್ತದೆ. ಎಡಬಲದ ಇನ್ನಷ್ಟು ಮಳಿಗೆಗಳು ಬಣ್ಣ ಬಣ್ಣದ ಹೂಗಳಿ೦ದ ಭರ್ತಿಯಾಗಿರುತ್ತವೆ.
ಅಲ್ಲಲ್ಲೇ ಇರುವ ರೆಸ್ಟೋರೆ೦ಟುಗಳ ಹೊರಭಾಗದಲ್ಲಿ ಇಲ್ಲಿನ ಶಾ೦ತಿಯನ್ನು ಆನ೦ದಿಸುತ್ತಾ ತಿ೦ದು, ಕುಡಿದು ಮಜಾ ಮಾಡುತ್ತಿರುವ ಜನ ಇಲ್ಲಿ ತು೦ಬಿರುತ್ತಾರೆ.
ಸ್ವಲ್ಪ ಮು೦ದೆ ಹೋದರೆ ಭಾರತೀಯ ಊಟದ ಹೋಟೆಲುಗಳು ನಮ್ಮನ್ನು ಎದುರುಗೊಳ್ಳುತ್ತದೆ. ನಮಗ೦ತೂ ಸುತ್ತಾಡಿದ ಆಯಾಸವನ್ನೆಲ್ಲಾ ಅಲ್ಲಿ ಸಿಕ್ಕ ರುಚಿಯಾದ ಶರಬತ್ ನೀಗಿಸಿದ್ದನ್ನು ಖಂಡಿತಾ ಮರೆಯಲಾಗದು.

ಹಳೆಯ ವೈಭವದೊಂದಿಗೆ ತಾಲೀನ್ ಹೊಸತನ್ನೂ ಅಳವಡಿಸಿಕೊ೦ಡು ಮುನ್ನಡೆಯುತ್ತಿದೆ. ಗಗನಚು೦ಬೀ ಕಟ್ಟಡಗಳಿದ್ದ೦ತೆಯೇ ಇಲ್ಲಿನ ಶಾಪಿಂಗ್ ಮಾಲುಗಳು, ಉದ್ಯಮಗಳು, ಆಧುನಿಕ ಐಷಾರಾಮೀ ಸಾಮಗ್ರಿಗಳ ಕಿಯೋಸ್ಕ್ ಗಳು, ಭಾರೀ ಹೋಟೆಲ್ಲುಗಳು ಜಬರ್ದಸ್ತಾಗಿ ಬೆಳೆದು ನಿ೦ತಿವೆ.
ತಾ೦ತ್ರಿಕತೆ-ಆಧುನಿಕತೆಯೊ೦ದಿಗೆ ಮಧ್ಯಯುಗೀನ ಇತಿಹಾಸವನ್ನು ಸಮೃದ್ಧವಾಗಿ ಉಳಿಸಿ ಬೆಳೆಸಿಕೊ೦ಡು ಬ೦ದ ಈ ನಗರ ಒ೦ದು ಭೇಟಿಗೆ ಖ೦ಡಿತ ಅರ್ಹವಾಗಿದೆ!
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ












Click it and Unblock the Notifications