ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತಾರ್ ಕರ್ನಾಟಕ ಸಂಘದಿಂದ ಇಂಜಿನಿಯರ್ ದಿನಾಚರಣೆ

By Prasad
|
Google Oneindia Kannada News

ಕತಾರ್ ಕರ್ನಾಟಕ ಸಂಘದ ವತಿಯಿಂದ 2017ರ ಅಭಿಯಂತರರ ದಿನಾಚರಣೆಯನ್ನು ಇತ್ತೀಚೆಗೆ ಅದ್ಧೂರಿಯಿಂದ ಆಚರಿಸಲಾಯಿತು.

ಅದ್ದೂರಿ ಗಣೇಶೋತ್ಸವ ಮತ್ತು ಸಾಹಿತ್ಯ ಬೃಂದಾವನಅದ್ದೂರಿ ಗಣೇಶೋತ್ಸವ ಮತ್ತು ಸಾಹಿತ್ಯ ಬೃಂದಾವನ

ಭಾರತೀಯ ಸಾಂಸ್ಕೃತಿಕ ಕೇಂದ್ರವಿರುವ ಕಟ್ಟಡದ ಆವರಣದಲ್ಲಿನ ಮುಂಬೈ ಸಭಾಂಗಣದಲ್ಲಿ ಸಂಜೆ ಸುಮಾರು 7.30 ಘಂಟೆಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಾರದ ಮಧ್ಯದ ಕೆಲಸವಿರುವ ದಿನವಾದ್ದರಿಂದ, ಸಂಜೆಯ ಸಮಯವನ್ನು ಆಯ್ಕೆ ಮಾಡಲಾಗಿತ್ತು. ಮುಖ್ಯ ಅತಿಥಿಗಳಾದ ಮಿಲನ್ ಅರುಣ್, ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರು ಹಾಗು ಇತರ ಗಣ್ಯರು, ಆಹ್ವಾನಿತರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಪ್ರಾರಂಭಿಸಿದರು.

Engineers Day observed by Karnataka Sangha Qatar

ಪುಷ್ಪ ಗಿರೀಶ್ ರವರು ಹುಮ್ಮಸ್ಸಿನಿಂದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಥಮವಾಗಿ ವಸುಧಾರವರು ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಸಭಿಕರ ಮನಮುಟ್ಟುವಂತೆ ಸ್ಪಷ್ಟವಾಗಿ ಮತ್ತು ಅತ್ಯಂತ ಸರಳವಾಗಿ ಹೇಳಿದರು. ಸರ್.ಎಂ.ವಿ. ಅವರ ಜೀವನದ ಪುಸ್ತಕವನ್ನು 10 ನಿಮುಷದಲ್ಲಿ ಓದಿದಂತೆ ಭಾಸವಾಯಿತು.

ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾದ ಎಚ್.ಕೆ. ಮಧು ರವರು ಸಭೆಯನ್ನುದ್ದೇಶಿಸಿ, ಗುರುರಾಜ್ ಕರಜಗಿಯವರ "ಕರುಣಾಳು ಬಾ ಬೆಳಕೆ" ಪುಸ್ತಕದಿಂದ ಒಂದು ಕಥೆಯನ್ನು ಉದಾಹರಣೆಯಾಗಿರಿಸಿಕೊಂಡು, ಪೂರ್ವಜರು ಹಾಗು ಇತಿಹಾಸ ರಚನಕಾರರ ನಡುವಿರುವ ವ್ಯತ್ಯಾಸವನ್ನು ತಿಳಿಹೇಳಿದರು. ಕಿಶೋರ್ ರವರು "ಸಮುದ್ರದಲ್ಲಿ ಶಕ್ತಿ" ವಿಷಯದ ಪ್ರಾಮುಖ್ಯತೆಯ ಬಗ್ಗೆ ಒಂದು ಕಿರು ಪರಿಚಯ ನೀಡಿದರು.

Engineers Day observed by Karnataka Sangha Qatar

ಕಾರ್ಯಕ್ರಮದ ಮುಖ್ಯ ಭಾಗವಾದ ಪ್ರಶಸ್ತಿ ಪ್ರದಾನ ಸಮಾರಂಭ ಎಲ್ಲ ಕಾತುರತೆಗೆ ತೆರೆ ಎಳೆಯಿತು. 2017ನೇ ಸಾಲಿನ "ಅಭಿಯಂತರಶ್ರೀ" ಪ್ರಶಸ್ತಿಯನ್ನು ಕೆಳಗಿನ ಇಬ್ಬರು ಗಣ್ಯರಿಗೆ ನೀಡಿ ಗೌರವಿಸಲಾಯಿತು.

1. ನೀಲಾಂಶು ಡೇ, ಕತಾರ್ ಪೆಟ್ರೋಲಿಯಮ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗು ಭಾರತೀಯ ಕ್ರೀಡಾ ಕೇಂದ್ರದ ಪ್ರಸ್ತುತ ಅಧ್ಯಕ್ಷ.
2. ರಾಜೇಂದ್ರ ಶಿವಬಸಪ್ಪ ಜ್ಯೋತಿ, ಕತಾರ್ ಅನಿಲ ಸಂಸ್ಥೆಯ ಹಿರಿಯ ಅಧಿಕಾರಿ.

ಇವರುಗಳು ತಮ್ಮ ಅಭಿಪ್ರಾಯ, ಅನುಭವ, ಮನದ ಮಾತುಗಳನ್ನು ಹಂಚಿಕೊಂಡು ಕೇಳುಗರ ಮನತಣಿಸಿದರು.

ಕತಾರ್ ಕರ್ನಾಟಕ ಸಂಘದ ಹಿರಿಯ ಉಪಾಧ್ಯಕ್ಷರಾದ ವೆಂಕಟರಾಯರು ಸಕಲರಿಗೂ ಧನ್ಯವಾದಗಳನ್ನು ತಿಳಿಸಿ, ವಂದನಾರ್ಪಣೆಗಳನ್ನು ಸಲ್ಲಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ನಂತರ ಭಾವಚಿತ್ರಗಳನ್ನು ಸೆರೆಹಿಡಿದು ನೆನಪಿನಂಗಳದಲ್ಲಿಳಿಸಿಕೊಂಡು, ಲಘು ಉಪಹಾರ ಹಂಚಿ, ಅಂದಿನ ಸಂಜೆಯ ಆಚರಣೆಯನ್ನು ಪೂರ್ಣಗೊಳಿಸಲಾಯಿತು.

English summary
Engineers Day observed by Karnataka Sangha Qatar. Sir M Visweswaraya was remembered by the Kannadigas and Abhiyantarsri award was given two engineer achievers in the name of Sir MV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X