ಮೂರು ಹುದ್ದೆಗಳಿಗೆ ಕೆಕೆಎಸ್‌ಸಿಯಲ್ಲಿ ಹಣಾಹಣಿ

ಕೆಕೆಎನ್ ಸಿ ಅಧ್ಯಕ್ಷ 2014, ಆಡಳಿತ ಮಂಡಳಿ (ಬೋರ್ಡ್ ಆಫ್ ಟ್ರಸ್ಟಿ) ಉಪಾಧ್ಯಕ್ಷ 2014-15 ಮತ್ತು ಆಡಳಿತ ಮಂಡಳಿ ಸದಸ್ಯ 2014-15 ಹುದ್ದೆಗಳಿಗೆ ಚುನಾವಣೆ ನಡೆಯಲಿದೆ. ಅತ್ಯಂತ ಪ್ರತಿಷ್ಠೆಯ ಕಣವಾಗಿರುವ ಈ ಚುನಾವಣೆಯಲ್ಲಿ ಸ್ಪರ್ಧಿಸುವವರಿಗೆ ಕೆಲ ನಿಬಂಧನೆಗಳನ್ನು ಕೂಡ ಹಾಕಲಾಗಿದೆ.
ನಿಬಂಧನೆಗಳು ಕೆಳಗಿನಂತಿವೆ
ಹುದ್ದೆ : ಕೆಕೆಎನ್ ಸಿ ಅಧ್ಯಕ್ಷ 2014, ಕಾರ್ಯನಿರ್ವಾಹಕ ಸಮಿತಿ ಮುಖ್ಯಸ್ಥ
* ಕನಿಷ್ಠ 2 ವರ್ಷಗಳ ಕಾಲ ಕೆಕೆಎನ್ ಸಿ ಸದಸ್ಯನಾಗಿರಬೇಕು ಮತ್ತು ಕ್ರಿಯಾಶೀಲನಾಗಿರಬೇಕು.
* ಕೆಕೆಎನ್ ಸಿಯ ಇಬ್ಬರು ಸದಸ್ಯರು ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಬೇಕು.
ಹುದ್ದೆ : ಆಡಳಿತ ಮಂಡಳಿ ಉಪಾಧ್ಯಕ್ಷ (2014-15)
* ಕೆಕೆಎನ್ ಸಿ ಮಾಜಿ ಅಧ್ಯಕ್ಷನಾಗಿರಬೇಕು ಅಥವಾ ಎಕ್ಸಿಕ್ಯೂಟಿವ್ ಸದಸ್ಯನಾಗಿರಬೇಕು ಅಥವಾ ಆಜೀವ ಸದಸ್ಯನಾಗಿರಬೇಕು.
* ಕನಿಷ್ಠ 5 ವರ್ಷಗಳ ಕಾಲ ಕೆಕೆಎನ್ ಸಿ ಸದಸ್ಯನಾಗಿರಬೇಕು ಮತ್ತು ಕ್ರಿಯಾಶೀಲನಾಗಿರಬೇಕು.
* ಕೆಕೆಎನ್ ಸಿಯ ಇಬ್ಬರು ಸದಸ್ಯರು ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಬೇಕು.
ಹುದ್ದೆ : ಆಡಳಿತ ಮಂಡಳಿ ಸದಸ್ಯ (2014-15)
* ಕನಿಷ್ಠ 5 ವರ್ಷಗಳ ಕಾಲ ಕೆಕೆಎನ್ ಸಿ ಸದಸ್ಯನಾಗಿರಬೇಕು.
* ಕೆಕೆಎನ್ ಸಿಯ ಇಬ್ಬರು ಸದಸ್ಯರು ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಬೇಕು.
ಚುನಾವಣಾ ಕಮಿಷನರ್ ಆಗಿ ನೇಮಕವಾಗಿರುವ ಆಡಳಿತ ಮಂಡಳಿಯ ಉಪಾಧ್ಯಕ್ಷ ನಂದ ಕಿಶೋರ್ ಅವರಿಗೆ ನಾಮಪತ್ರವನ್ನು ಅಕ್ಟೋಬರ್ 31ರ ರಾತ್ರಿ 11:59ರೊಳಗೆ ಸಲ್ಲಿಸಬೇಕೆಂದು ಕೋರಲಾಗಿದೆ. ಹಾಗೆಯೆ, ಸ್ಪರ್ಧಿಸಲಿಚ್ಛಿಸುವವರು ಕೆಕೆಎನ್ ಸಿಯ ಸಂವಿಧಾನ ಮತ್ತು ಬೈಲಾಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದೂ ತಿಳಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ನಂದ ಕಿಶೋರ್
ಫೋನ್ : 408 656 1289
ಈಮೇಲ್ : [email protected]












Click it and Unblock the Notifications