ಬಹ್ರೇನ್ ನಲ್ಲಿ ಬಿಲ್ಲವ ಸಮಾಜದಿಂದ ರಾಧಾ-ಕೃಷ್ಣ ವೇಷ ಸ್ಪರ್ಧೆ

Posted By:
Subscribe to Oneindia Kannada

ಬಿಲ್ಲವ ಸಮುದಾಯದ ಗುರು ಸೇವಾ ಸಮಿತಿ- ಬಹ್ರೇನ್ ಬಿಲ್ಲವಾಸ್ ಯಿಂದ ಇತ್ತೀಚೆಗೆ ಬಹ್ರೇನ್ ನ ದಿ ಇಂಡಿಯನ್ ಕ್ಲಬ್ ನಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಧಾ-ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಕೃಷ್ಣನಿಂದ ಕಲಿಯಲೇಬೇಕಾದ 10 ಜೀವನ ಪಾಠಗಳು

ಬಹ್ರೇನ್ ದ್ವೀಪ ರಾಷ್ಟ್ರದಲ್ಲಿ ಮೊತ್ತ ಮೊದಲ ಬಾರಿ ಎಲ್ಲ ತುಳುವ - ಕನ್ನಡಿಗರಿಗೆ ಮುಕ್ತವಾಗಿ ಸ್ಪರ್ಧಿಸುವ ಅವಕಾಶವನ್ನು ನೀಡಲಾಯಿತು. ಮೊದಲ ಭಾಗದಲ್ಲಿ ಬಹ್ರೇನ್ ಬಿಲ್ಲವಾಸ್ ನ ಫೇಸ್ ಬುಕ್ ಪುಟದಲ್ಲಿ ಕೇವಲ 10 ದಿನಗಳಲ್ಲಿ 2.37 ಲಕ್ಷಕ್ಕೂ ಮಿಕ್ಕಿದ ವೀಕ್ಷಕರು ನೋಡಿದ್ದರು.

Cine Star Pruthvi Ambar, Pili Vesha rock Bahrain Billawas Radhakrishna Contest

ಸ್ಪರ್ಧೆಯ ಎರಡನೇ ಭಾಗವನ್ನು ದಿ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಪ್ರಥ್ವಿ ಅಂಬರ್, ಡಾ. ನಿಧಿ ಮೆನನ್ ಮತ್ತು ಲೀಲಾಧರ್ ಬೈಕಂಪಾಡಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪಿಲಿ ವೇಷ - ತುಳುನಾಡ ಶೈಲಿಯ ಹುಲಿ ನೃತ್ಯವನ್ನು ಸಾದರಪಡಿಸಿ ನೆರೆದ ಎಲ್ಲಾ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಸಫಲವಾಯಿತು.

ತಂಡದ 9 ಕಲಾವಿದರು ಬಹ್ರೇನ್ ನಲ್ಲಿ ಮೊತ್ತ ಮೊದಲ ಬಾರಿಗೆ ಪಿಲಿ ವೇಷ ಪ್ರದರ್ಶಿಸಿ, ಇತಿಹಾಸಕ್ಕೆ ನಾಂದಿ ಹಾಕಿದರು. ಬಹ್ರೇನ್ ಬಿಲ್ಲವಾಸ್ ಸದಸ್ಯರ, ಇಸ್ಕಾನ್ ಬಹ್ರೇನ್ ಮತ್ತು ರಿದಮ್ ಡ್ಯಾನ್ಸ್ ಗ್ರೂಪ್ ನವರ ಜನಪದೀಯ ಶೈಲಿಯ ಹಾಗೂ ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳು ಗಮನ ಸೆಳೆದವು.

ಈ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾಗಿ ಸ್ವದೇಶಕ್ಕೆ ಮರಳುತ್ತಿರುವ ಬಹ್ರೇನ್ ಬಿಲ್ಲವಾಸ್ ಮಾಜಿ ಅಧ್ಯಕ್ಷ - ಕೃಷ್ಣ ನೈಂಪಳ್ಳಿಯವರನ್ನು ಸನ್ಮಾನಿಸಲಾಯಿತು.

ಸಕಲ ಮಾನಸಿಕ ಸಮಸ್ಯೆಗಳಿಗೆ ಮಹಾಭಾರತದಲ್ಲಿ ಉತ್ತರ: ಐಎಂಎ ಮುಖ್ಯಸ್ಥ

ಬಹ್ರೇನ್ ಬಿಲ್ಲವಾಸ್ ಅಧ್ಯಕ್ಷ ಅಜಿತ್ ಬಂಗೇರ, ದಿ ಇಂಡಿಯನ್ ಕ್ಲಬ್ ಅಧ್ಯಕ್ಷ ಕ್ಯಾಸಿಯಸ್ ಪಿರೇರಾ, ಕನ್ನಡ ಸಂಘದ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಪ್ರಾಯೋಜಕತ್ವ ಪ್ರತಿನಿಧಿಗಳಾದ ಇಸಾಕ್ ಮೊಹಮ್ಮದ್ - ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್, ಗಜಾನನ್ ಖೊಲ್ಗಡೆ - ಅಲ್ ಆದಿಲ್ ಸೂಪರ್ ಮಾರ್ಕೆಟ್ ಗಳು, ಉದ್ಯಮಿಗಳಾದ ಸಾಗರ್ ಪೂಜಾರಿ ಮತ್ತು ವಿಶಾಲ್ ಕರ್ಕೆರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಹ್ರೇನ್ ಬಿಲ್ಲವಾಸ್ ಅಧ್ಯಕ್ಷ ಅಜಿತ್ ಬಂಗೇರ ಸಭೆಯನ್ನು ಸ್ವಾಗತಿಸಿದರು. ಪ್ರತಿಮಾ ರಾಜ್ ಮೂಡಬಿದ್ರಿ ಮತ್ತು ಪೂರ್ಣಿಮಾ ಜಗದೀಶ್ ಅವರು ನಿರೂಪಣೆ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Guru Seva Samiti - Bahrain Billawas, a social cultural Billawa community organization which is celebrating 15th anniversary hosted Radhakrishna Contest on recently at The Indian Club, Kingdom of Bahrain.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X