ನಲವತ್ತನೇ ವರ್ಷಕ್ಕೆ ಕಾಲಿಟ್ಟ ಕೆಕೆಎನ್‌ಸಿ, ಕಂಗ್ರಾಟ್ಸ್

ಸಂಧ್ಯಾ ಸುಬ್ಬರಾಮು ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಸಭೆಯಲ್ಲಿ, 2013ರ ಅಧ್ಯಕ್ಷರಾಗಿರುವ ಶಾಂತಲಾ ಭಂಡಿಯವರು ತಮ್ಮ ಕಾರ್ಯಕಾರಿ ಸಮಿತಿಯನ್ನು ಕನ್ನಡ ಕೂಟದ ಸದಸ್ಯರಿಗೆ ಪರಿಚಯಿಸಿದರು.
ಕೆ.ಕೆ.ಎನ್.ಸಿ 2013ರ ಕಾರ್ಯಕಾರಿ ಸಮಿತಿ ಕೆಳಕಂಡಂತಿದೆ:
ಶಾಂತಲಾ ಭಂಡಿ - ಅಧ್ಯಕ್ಷೆ
ಧನಂಜಯ ಕೆಂಗಯ್ಯ - ಉಪಾಧ್ಯಕ್ಷರು
ವಸುಧಾ ಹೆಗಡೆ - ಉಪಾಧ್ಯಕ್ಷರು
ರವಿ ಕೃಷ್ಣಪ್ಪ - ಸದಸ್ಯತ್ವ - ಸದಸ್ಯತ್ವ ಮತ್ತು ಭಾಂದವ್ಯ/ಸದಸ್ಯತ್ವ ಮತ್ತು ಜನ ಸಂಪರ್ಕ ನಿರ್ವಹಣೆ
ಸಂತೋಷ್ ದೀಕ್ಷಿತ್ - ಕಾರ್ಯದರ್ಶಿ
ಸುದತ್ತ ಗೌತಮ್ - ಮನರಂಜನಾ ನಿರ್ವಹಣೆ
ಪ್ರಸಾದ್ ಐಯ್ಯಂಗಾರ್ - ಖಜಾಂಚಿ
ಸುರೇಶ್ ಬಾಬು - ಸಲಹೆಗಾರರು
ರಘು ಹಾಲೂರು - ಸಲಹೆಗಾರರು
ಈ ಸಭೆಯಲ್ಲಿ ರತ್ನ ಮಹೋತ್ಸವದ ಆಚರಣೆಯ ಬಗ್ಗೆ ಅಭಿಪ್ರಾಯಗಳನ್ನು ಸದಸ್ಯರ ಮುಂದಿಡಲಾಯಿತು. ಹೊಸ ಕಾರ್ಯಕಾರಿ ಸಮಿತಿ 2013ರಲ್ಲಿ ಕೆಲವು ಗುರಿಗಳನ್ನು ಇರಿಸಿಕೊಂಡು ಹೆಜ್ಜೆ ಇಡುತ್ತಿದೆ. ಅವುಗಳು:
- ಕನ್ನಡ ಕೂಟದ ಸದಸ್ಯರ ಸಂಖ್ಯೆಯನ್ನು ಹೆಚ್ಚುಗೊಳಿಸುವುದು.
- ಯುವಜನರನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
- ಕೆ.ಕೆ.ಎನ್.ಸಿ ಸಂಸ್ಥೆಯನ್ನು, ಬೇ ಏರಿಯಾದಲ್ಲಿ ಪ್ರಮುಖ Non-Profit Organization ಆಗಿ ಗುರುತಿಸಿಕೊಳ್ಳುವುದು.
ಸಭೆಗೆ ಬಂದಿದ್ದ ಕೂಟದ ಸದಸ್ಯರು, ಸ್ವಪರಿಚಯ ಮಾಡಿಕೊಂಡು ಉತ್ತಮ ಕಾರ್ಯಕ್ರಮಗಳನ್ನು ನೀಡಲು ಸಹಾಯವಾಗುವಂತಹ ಸಲಹೆಗಳನ್ನು ನೀಡಿದರು. ಈ ಸಭೆಯಲ್ಲಿ ಶುಭ ಕುಲಕರ್ಣಿ ಮತ್ತು ಶ್ರೀನಿವಾಸ ಮೂರ್ತಿಯವರು ಜನಪ್ರಿಯ ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡಿ ಸದಸ್ಯರಿಗೆ ಮನರಂಜನೆ ನೀಡಿದರು. ಮಧು ಕೃಷ್ಣಮೂರ್ತಿಯವರ ಹಾಸ್ಯ ಚಟಾಕಿಗಳು ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು.












Click it and Unblock the Notifications