40ರ ನ್ಯೂಯಾರ್ಕ್ ಕನ್ನಡ ಕೂಟದ ರತ್ನ ಮಹೋತ್ಸವ

ಅಮೆರಿಕದ ಹಳೆಯ ಕನ್ನಡ ಕೂಟಗಳಲ್ಲಿ ಒಂದಾಗಿರುವ ನ್ಯೂಯಾರ್ಕ್ ಕನ್ನಡ ಕೂಡ ಅಸ್ತಿತ್ವಕ್ಕೆ ಬಂದು 40 ವರ್ಷ ಪೂರೈಸಿರುವ ಸಂದರ್ಭವನ್ನು ಭರ್ಜರಿಯಾಗಿ ಆಚರಿಸಿಕೊಳ್ಳಲು ಎಲ್ಲ ತಯಾರಿ ನಡೆಸಿದೆ. ಜುಲೈ 13ರಂದು ಮಡಿಸನ್ ಥಿಯೇಟರ್, ಮೊಲ್ಲೊಯ್ ಕಾಲೇಜು, ಲಾಂಗ್ ಐಲ್ಯಾಂಡ್, ನ್ಯೂಯಾರ್ಕ್‌ನಲ್ಲಿ ರತ್ನ ಮಹೋತ್ಸವ ಸಮಾರಂಭ ನಡೆಯಲಿದೆ.

ಬೆಳಿಗ್ಗೆ 9ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಿಂದ ಚಿತ್ರ ಸಂಗೀತ ನಿರ್ದೇಶಕ ಹಂಸಲೇಖ, ಸಂಗೀತಗಾರ ರಘು ದೀಕ್ಷಿತ್, ಚಿತ್ರನಟಿ ಮಾನ್ಯ ಮುಂತಾದವರು ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ 'ಜೋಜೋ ಲಾಲಿ' ಮತ್ತು ಮದನ್ ಮಲ್ಲು ಅವರ ಇತ್ತೀಚಿನ ಚಿತ್ರ 'ಯಾರಿವನು?' (ಸಿನೆಮಾ ನೋಡಲಿಚ್ಛಿಸುವವರು ಚಿತ್ರವಿಮರ್ಶೆ ಓದಿರಿ, ನಂತರ ನಿರ್ಧರಿಸಿ) ಪ್ರದರ್ಶನಗೊಳ್ಳಲಿವೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ನ್ಯೂಯಾರ್ಕ್ ಕನ್ನಡ ಕೂಟದ ವೆಬ್ ಸೈಟಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು. ಮೊದಲು ಬಂದವರಿಗೆ ಭರ್ಜರಿ ರಿಯಾಯಿತಿಯನ್ನೂ ನೀಡಲಾಗಿದೆ. ಹೆಚ್ಚಿನ ವಿವರಗಳಿಗೆ ಕೂಟದ ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.

New York Kannada Koota’s 40th anniversary celebrations

ಕೂಟದ ಬಗ್ಗೆ : ನ್ಯೂಯಾರ್ಕ್ ಕನ್ನಡ ಕೂಟ, ಕನ್ನಡ ಹಾಗು ಕರ್ನಾಟಕ ರಾಜ್ಯದ ಜನರ ಬಾಷೆ, ಕಲೆ, ಪರಂಪರೆ ಹಾಗು ಸಂಸ್ಕೃತಿಯನ್ನು ಬೆಳೆಸಲು ಉದ್ದೇಶವಿರುವ ಒಂದು ಸಂಸ್ಥೆಯಾಗಿದೆ. ಕರ್ನಾಟಕದಿಂದ ಬಂದಂತಹ ಹಾಗು ಇಲ್ಲಿ ವಾಸವಾಗಿರುವ ಕನ್ನಡಿಗರ ಸಂಬಂಧವನ್ನು ಕನ್ನಡ ಕೂಟ ನ್ಯೂಯಾರ್ಕ್ ಬೆಸೆಯುವ ಕಾಯಕದಲ್ಲಿ ತೊಡಗಿದೆ.

ಕೂಟದ ಸಂದೇಶ ಅತಿ ಸರಳ ಹಾಗು ಸ್ಪಷ್ಟ "ಕನ್ನಡ ನಾಡು ನುಡಿ ನಡೆ ಹಾಗು ಸಂಸ್ಕೃತಿಯನ್ನು ಅನುಸರಿಸುವುದು ಮತ್ತು ಕನ್ನಡತನವನ್ನು ಬೆಳೆಸುವುದು". ನ್ಯೂಯಾರ್ಕ್ ಕನ್ನಡ ಕೂಟ ಕಳೆದ 40 ವರ್ಷಗಳಿಂದ ಮಹತ್ತರವಾಗಿ ಬೆಳೆದು, ಕನ್ನಡಿಗರ ಮಹತ್ವಾಕಾಂಕ್ಷೆಯಾಗಿ ನಿಂತಿದೆ.

ಈ ವರ್ಷ 2013ರಲ್ಲಿ ಮುಂಬರುವ ಜುಲೈ 13ನೇ ದಿನಾಂಕದಂದು ಕೂಟದ ರತ್ನ ಮಹೋತ್ಸವ ಅಂದರೆ 40ನೇ ವಾರ್ಷಿಕೋತ್ಸವವನ್ನು ವಿಶೇಷವಾಗಿ, ವಿಜೃಂಭಣೆಯಿಂದ ಆಚರಿಸಲು ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಅಂದು ಅನೇಕಾನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

"ನಮ್ಮ ಕಾರ್ಯಕಾರಿ ಸಮಿತಿ ಹಾಗು ಸಮಸ್ತ ಕನ್ನಡಕೂಟದ ಸದಸ್ಯರ ಪರವಾಗಿ ನಿಮಗೆ ಆದರದ ಆಮಂತ್ರಣವನ್ನು ನೀಡುತ್ತಿದ್ದೇನೆ. ತಾವು ಈ ಸದರಿ ಕಾರ್ಯಕ್ರಮಕ್ಕೆ ಬಂದು, ನಮ್ಮ ಕನ್ನಡಿಗರ ಹೃದಯದಲ್ಲಿ ಸಂತೋಷವನ್ನು ತುಂಬಬೇಕು" ಎಂದು ನ್ಯೂಯಾರ್ಕ್ ಕನ್ನಡ ಕೂಟ ಅಮೆರಿಕದ ಕನ್ನಡಿಗರಲ್ಲಿ ವಿನಂತಿ ಮಾಡಿಕೊಂಡಿದೆ. ಕೂಟದ ಕಾರ್ಯಕ್ರಮ ಯಶಸ್ವಿಯಾಗಲೆಂದು 'ಅಕ್ಕ' ಶುಭ ಕೋರಿದೆ.

40ನೇ ವರ್ಷಾಚರಣೆಯ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ
ಭಾಗವಹಿಸಲು ಇಲ್ಲಿ ನೋಂದಾಯಿಸಿಕೊಳ್ಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+