Get Updates
Get notified of breaking news, exclusive insights, and must-see stories!

ಚಳಿಗಾಲದಲ್ಲಿ ಏರ್‌ಟೆಲ್‌ಗೆ ಹಿಡಿದ ವೈರಲ್ ಜ್ವರ (ಭಾಗ 5)

Vijaya Ranga Prasad, Singapore
6ನೇ ದಿನ, ಈ ದಿನ ಏನಾದರೂ ಈ ಸಮಸ್ಯೆಗೆ ಒಂದು ಕೊನೆತರುವ ಸಲುವಾಗಿ ಮತ್ತೆ Airtel ಅಂಗಡಿಗೆ ಹೋಗಿ ಅಲ್ಲಿದ್ದ ಅಧಿಕಾರಿಣಿಯನ್ನು ಭೇಟಿಮಾಡಿದೆ... ಈಗಾಗಲೆ ಆ ಅಧಿಕಾರಿಗೆ ಸಮಸ್ಯೆಯ ಬಗ್ಗೆ ತಿಳಿದಿದ್ದು "ಸಾರ್ ನಮಗೂ ಏನು ಮಾಡಬೇಕೋ ತಿಳಿಯದು. ಈ ಸಮಸ್ಯೆ ಬಗೆಹರಿಸಲು ನಾವೆಲ್ಲ ಪ್ರಯತ್ನಿಸುತ್ತಿದ್ದೇವೆ. ಅಂದುಕೊಂಡದ್ದಕ್ಕಿಂತ ತುಂಬಾ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಕ್ಷಮಿಸಿ" ಎಂದು ಸಂತೈಸಲು ಪ್ರಯತ್ನಿಸಿದಳು. ಅದಕ್ಕೆ ನಾನು "ಈ ಸಿಮ್‍ಕಾರ್ಡ್ ಸರಿಯಾಗಿಲ್ಲವಾದ್ದರಿಂದ. ಬದಲಿಸಿ ಅಥವಾ ನನ್ನ ಹಣ ವಾಪಸ್ ಮಾಡಿ" ಅಂದೆ. "ಇಲ್ಲ ಸಾರ್, ಬದಲಿಸಲು ಸಾಧ್ಯವಿಲ್ಲ. ಬೇರೆ ಸಿಮ್‌ಕಾರ್ಡ್ ಕೊಡಲು ಮತ್ತೆ 2 ರಿಂದ 3 ದಿನವಾಗುತ್ತದೆ, ಆದರೆ ನಿಮ್ಮ ಹಣ ವಾಪಸ್ ಮಾಡಲು ಸಾಧ್ಯವಿಲ್ಲ ಅಥವಾ ಬೇರೆ ಸಿಮ್‌ಕಾರ್ಡ್‌ಗೆ ವರ್ಗಾಯಿಸಲೂ ಸಾಧ್ಯವಿಲ್ಲ.ನಾವು ಈ ಸಮಸ್ಯೆಯನ್ನ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಮತ್ತು ನಾನು ಸ್ವತಃ ಈ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದೇನೆ.. ನಿಮಗೆ ಮಧ್ಯಾಹ್ನ ಇದರ ಬಗ್ಗೆ ತಿಳಿಯಪಡಿಸುವೆ" ಎಂದಳು ಅಧಿಕಾರಿಣಿ. ಹೆಣ್ಣುಮಕ್ಕಳು ಜವಾಬ್ದಾರಿಯಲ್ಲಿ ಎತ್ತಿದ ಕೈ ಎಂಬ ವಿಶ್ವಾಸದಿಂದ ಈ ಒಂದು ಅಧಿಕಾರಿಣಿಯ ಕಾರ್ಯನಿರ್ವಹಣೆಯನ್ನೂ ನೋಡಿಬಿಡೋಣ ಅಂದವನೇ ಅಲ್ಲಿಂದ ಹೊರಟೆ.

ಮಧ್ಯಾಹ್ನ ಅಧಿಕಾರಿಣಿಯಿಂದ ಕರೆ "ಸಾರ್ ಸಮಸ್ಯೆ ಇನ್ನು ಸರಿಯಾಗಿಲ್ಲ ನಾನು technical team ಜೊತೆ ಮಾತನಾಡುತ್ತಿದ್ದೇನೆ ಮತ್ತೆ ತಿಳಿಯಪಡಿಸುತ್ತೇನೆ".. ಸದ್ಯ ಅಂತೂ ಜವಾಬ್ದಾರಿಯಿಂದ ಕರೆಮಾಡಿದಳಲ್ಲ ಅಂತ ಸಂತೈಸಿಕೊಂಡ ನಾನು "ಸಂಜೆಯೊಳಗೆ ಸರಿಹೋಗಿಲ್ಲವಾದಲ್ಲಿ ಏನು?" ಎಂದೆ... "ಸಾರ್ ಒಂದು ವೇಳೆ ಸರಿಯಾಗದಿದ್ದಲ್ಲಿ, ನಿಮ್ಮ SIM ಬದಲಿಸಿ, ನಿಮ್ಮ ಹಣವನ್ನು ವರ್ಗಾಯಿಸಿಕೊಡುತ್ತೇನೆ" ಎಂಬುತ್ತರ ಬಂತು. ಇದೇ ಅಧಿಕಾರಿಣಿ ಬೆಳಗ್ಗೆ ಇದು ಸಾಧ್ಯವಿಲ್ಲವೆಂದು ಹೇಳಿದ್ದಳು. ಯಾವುದು ಸರಿಯೋ ಯಾವುದು ತಪ್ಪೋ ನನಗಂತೂ ತಿಳಿಯದು. 7ನೇ ದಿನ ಬೆಳಗ್ಗೆ Antibiotic ಕೃಪೆಯಿಂದ ನನ್ನ ಮಗನಿಗೆ ಜ್ವರ ಸಂಪೂರ್ಣ ವಾಸಿಯಾಗಿತ್ತು. ಸಿಮ್‌ಕಾರ್ಡ್ ಸರಿಯಾಗದಿದ್ದರೂ ಪರವಾಗಿಲ್ಲ ಸದ್ಯ ಇವನಿಗೆ ಜ್ವರ ಬಿಟ್ಟಿತ್ತಲ್ಲ ಅಂತ ಸಮಾಧಾನ.

3 ದಿನದ ಹಿಂದೆ ಕಳುಹಿಸಿದ ಇ-ಮೈಲ್‌ಗೆ ಉತ್ತರವಾಗಿ Nodel officer team ದೆಹಲಿಯಿಂದ ಕರೆ... "Sir we understand that you still have the problem reported, we are working on it and will fix it soon” ಅಂದರು. ಅವರ ಕರೆ ಬಂದ 15 ನಿಮಷಕ್ಕೆ ನನ್ನ ನಂಬರ್ ಸರಿಯಾಯಿತು. ಎಲ್ಲರಿಂದಲೂ ಕರೆ ಬರಲು ಶುರುವಾಯಿತು. ಸಿಮ್-ಸಮಸ್ಯೆ ಸರಿಯಾದನಂತರ ಪ್ರತಿ 10 ನಿಮಿಷಕ್ಕೆಕೊಮ್ಮೆ ಏರ್ ಟೆಲ್ ನಿಂದ ಕಾಲ್, "ಸಾರ್ ನಾವು ಏರ್ ಟೆಲ್ ನಿಂದ ಕರೆ ಮಾಡುತ್ತಿದ್ದೇವೆ, ನಿಮ್ಮ ಸಿಮ್‌ಕಾರ್ಡ್ ಈಗ ಸರಿ ಇದೆಯೇ?” "ಧನ್ಯವಾದಗಳು ಸರಿಯಾಗಿದೆಯಪ್ಪ".

ಅಂತೂ ಏರ್ ಟೆಲ್ ಸಿಮ್‌ಕಾರ್ಡ್ ಸಮಸ್ಯೆ ಚಳಿ, ಜ್ವರದಂತೆ ನಮ್ಮನ್ನು ಒಂದುವಾರ ಬಿಜಿಯಾಗಿ ಇಟ್ಟಿತ್ತು... ಆಗ ಗೊತ್ತಾಯ್ತು. ಸಾಮಾನ್ಯವಾದ ಮಾತ್ರೆ ಅಥವಾ ಮಾತ್ರೆಯಿಂದ ವೈರಲ್ ಸರಿಹೋಗೊಲ್ಲ antibioticಕೇ ಬೇಕು ಅಂತ...ಆದರೆ ನಾನು ಏರ್ ಟೆಲ್‌ಗೆ ಯಾವಾಗ, ಯಾವ antibiotic ಕೊಟ್ಟೆ, ಯಾವುದು ಕೆಲಸ ಮಾಡಿತು ಅಂತ ನನಗೆ ಇನ್ನೂ ಅರ್ಥವಾಗಿಲ್ಲ. ನಾನು ಚಿಕ್ಕವನಾಗಿದ್ದಾಗ ನಮ್ಮಮ್ಮ ಹೇಳುತ್ತಿದ್ದರು – ಚಳಿ, ಜ್ವರ ಬಂದಾಗ ಮನೆ ಮದ್ದು ಕೊಟ್ಟರೆ ಏಳು ದಿನದಲ್ಲಿ ವಾಸಿಯಾಗುತ್ತದೆ, ವೈದ್ಯರ ಹತ್ತಿರ ಹೋದರೆ ಗುಣವಾಗಲು ಒಂದು ವಾರ ಬೇಕು ಅಂತ. ಎಷ್ಟು ನಿಜ ಅಲ್ಲವೇ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+