ಚಳಿಗಾಲದಲ್ಲಿ ಏರ್‌ಟೆಲ್‌ಗೆ ಹಿಡಿದ ವೈರಲ್ ಜ್ವರ (ಭಾಗ 2)

15 ನಿಮಿಷ ಆಯಿತು. ಅಷ್ಟಾವಧಾನಿ ನನ್ನ ಕಡೆ ನೋಡುತ್ತಾನೆ, ಯಾರಿಗೋ ಕರೆಮಾಡುತ್ತಾನೆ, "ಎಲ್ಲಾ ಡಾಕ್ಯುಮೆಂಟ್ ಕಳಿಸಿದ್ದೀನಿ ಕಸ್ಟಮರ್ ಕಾಯುತ್ತಿದ್ದಾರೆ ಬೇಗ ಆಕ್ಟಿವೇಟ್ ಮಾಡಿ" ಅಂತಾನೆ, ಮತ್ತೆ ಅಲ್ಲಿದ್ದ ಗ್ರಾಹಕರನ್ನ ತೊಡಕನ್ನು ನಿವಾರಿಸಲು ಸಂವಾದ ಮುಂದುವರೆಸುತ್ತಾನೆ. ಹೀಗೆ 30 ನಿಮಿಷಗಳಾದನಂತರ "ಸಾರ್ ಎಲ್ಲಾ ರೆಡಿಯಾಗಿದೆ. ನೀವು ಮನೆಗೆ ಹೋಗಿ 10 ನಿಮಿಷದಲ್ಲಿ ಆಕ್ಟಿವೇಟ್ ಆಗುತ್ತೆ" ಅಂದ. ನನಗೋ ನನ್ನ ಕಣ್ಮುಂದೆ 30 ನಿಮಿಷಗಳಿಂದ ಆಗದ ಕೆಲಸ 10 ನಿಮಿಷದಲ್ಲಿ ನಾನು ಮನೆಗೆ ಹೋದಮೇಲೆ ಹೇಗಾದೀತು ಎಂಬ ಅನುಮಾನವಾದರೂ ಆಗಬಹುದೇನೋ ಅಂತ ಮನೆಕಡೆ ನಡೆದೆ.
ಮನೆಗೆ ಬಂದಾಗ ನೋಡಿದರೆ ನನ್ನ ಮಗನಿಗೆ ಚಳಿ, ಜ್ವರ ಬಂದಿತ್ತು. ಈ viral ನಮ್ಮಂತಹ NRIಗಳಿಗಾಗಿ ಕಾಯುತ್ತಿರುತ್ತದೆ ಅನ್ನಿಸುತ್ತದೆ, ಯಾಕೆ ಹೇಳಿ? ದೇಸೀಯರನ್ನು ಆಕ್ರಮಣ ಮಾಡಿದರೆ ಅದಕ್ಕೆ ನಿರಾಸೆಯೇ ಸರಿ. ಅದಕ್ಕೆ ಗೊತ್ತು ನಮ್ಮಂಥವರ ಮೇಲೆ ಅದರ ಪರಿಣಾಮ ಅತಿ ಶೀಘ್ರ ಅಂತ. ಸರಿ ಮನೆಯಲ್ಲೇ ಇದ್ದ ವೈದ್ಯರಾದ ನನ್ನ ಭಾವನವರು "ಈಗತಾನೆ ಜ್ವರ ಬಂದಿದ್ದರಿಂದ ಕ್ರೋಸಿನ್ ಸಾಕು ಕಣೋ” ಅಂದರು. ಮಾಗಿ ಚಳಿಯ ಜೊತೆಗೆ, ಈ ವೈರಲ್ ಚಳಿ, ಜ್ವರವೂ ಸೇರಿ ಕೆಂಡದ ಮೇಲೆ ತುಪ್ಪ ಹಾಕಿದಂತಾಯಿತು.
ಮಾರನೇ ದಿನ ಭಾನುವಾರ, ಸರಿ ಸಿಮ್‌ಕಾರ್ಡ್ activate ಆಗಿರುತ್ತೆ, ಮಗನ ಜ್ವರದಿಂದ ಹೇಗೂ ಮನೆಯಿಂದ ಹೊರಕ್ಕೆ ಹೋಗಲು ಆಗದು, ಸ್ನೇಹಿತರಿಗಾದರೂ ಕರೆ ಮಾಡೋಣ ಅಂತ ಡಯಲ್ ಮಾಡಿದರೆ "Currently all calls from this number are barred" ಅಂತ ರಾಗವಾಗಿ ಉಲಿದ pre-recorded ಧ್ವನಿ ಕೇಳುವಷ್ಟರಲ್ಲಿ ನನಗೆ ತಿಳಿಯಿತು ನನ್ನ ಸಿಮ್ ಕಾರ್ಡ್ ಇನ್ನೂ ಚಾಲನೆಯಲ್ಲಿಲ್ಲ ಅಂತ. ಭಾನುವಾರ ಬೇರೆ ಎಲ್ಲಾ ಏರ್ ಟೆಲ್ ಅಂಗಡಿಗಳು ಮುಚ್ಚಿರುತ್ತೆ. ಸರಿ ಕಾಲ್‌ಸೆಂಟರ್ ನಮ್ಮ ರಾಜಧಾನಿಯಲ್ಲಿ ಇದ್ದಿದ್ದರಿಂದ Airtel customer careಗೆ ಫೋನಾಯಿಸಿದೆ. "ರಿಂಬ ರಿಂಬ ರೊ ರೊ " ಅಂತ ಆಫ್ರಿಕನ್ ಶೈಲಿಯ ರಿಂಗ್ ಟೋನ್... ನಂತರ "press 1 for English…" ಕನ್ನಡಕ್ಕಾಗಿ 2ನ್ನು ಒತ್ತಿ"... ಅಬ್ಬಾ ಅಂತೂ ಕನ್ನಡದಲ್ಲೂ ಆಯ್ಕೆ ಇದೆಯಲ್ಲಾ, ಇಲ್ಲದ್ದಿದರೆ "ಕರವೇ"ನವರು ಬಿಡ್ತಾರಾ ಅನಿಸಿತು!
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ












Click it and Unblock the Notifications