ಕಾವೇರಿ ಕನ್ನಡ ಸಂಘದ ಸಂಕ್ರಾಂತಿ ಹಬ್ಬ 2012

ಸಂಕ್ರಾಂತಿ ಹಬ್ಬದ ವೈಶಿಷ್ಯವನ್ನು ದಾಸ ಸಾಹಿತ್ಯದ ಹರಿಕಾರ ಅರಳುಮಲ್ಲಿಗೆ ಪಾರ್ಥಸಾರಥಿಯವರು ವಿವರಿಸುವುದರೊಂದಿಗೆ ಕಾರ್ಯಕ್ರಮವು ವಿಶಿಷ್ಯವಾಗಿ ಆರಂಭಗೊಂಡಿತು. ನಂತರ ಶುರುವಾದ Kaveri Idol ನಲ್ಲಿ ಚಿಣ್ಣರು ಒಬ್ಬರಿಗಿಂತ ಒಬ್ಬರು ಮೇಲು ಎಂಬಂತೆ ಹಾಡಿದರು. ಅಮೆರಿಕಾದಲ್ಲಿ ಬೆಳೆದ ಪುಟಾಣಿಗಳ ಕನ್ನಡ ಪ್ರೇಮ ನಿಜಕ್ಕೂ ನಿಬ್ಬೆರಗಾಗಿಸಿತ್ತು.
ಶ್ರಾವ್ಯ ನವಿಲೇರವರ ಭರತನಾಟ್ಯ ಸಭಿಕರನ್ನು ರಂಜಿಸಿತು. ತಾನ್ಯ ಮತ್ತು ಮಾನ್ಯ ಪುಟಾಣಿಗಳು ಗಾಳಿಪಟದ 'ಅಹ ಬೆದರು ಬೊಂಬೆ' ನರ್ತನ ಪ್ರೇಕ್ಷಕರೂ ಕುಣಿದು ಕುಪ್ಪಳಿಸುವಂತೆ ಮಾಡಿತು. ರಾಮ್ ರಾವ್ ಹಾಗು ತಂಡದವರ ಹಾಡುಗಳು ಸುಶ್ರಾವ್ಯವಗಿದ್ದವು. ಹಬ್ಬ ಅಂದಮೇಲೆ ಹಬ್ಬದೂಟ ಇರಲೇಬೇಕಲ್ಲ? ಸವಿಸವಿಯಾದ ಕೇಸರಿಭಾತ್, ಚಪಾತಿ, ಮೊಸರನ್ನ ಸಜ್ಜಕಗಳು ಬಂದವರ ಹಸಿವನ್ನು ಇಂಗಿಸಿದವು.
ಕಾವೇರಿ ಐಡಲ್ 2012 ಸ್ಪರ್ಧೆಯ ವಿಜೇತರು
ಜ್ಯೂ. ವಿಭಾಗ : ಮೊದಲನೇ ಸ್ಥಾನ ಮಿಲಮ್ ಮಂಜುನಾಥ್, ಎರಡನೇ ಸ್ಥಾನ ವಿಪ್ರಾ ಭಟ್
ಸೀ. ವಿಭಾಗ : ಮೊದಲನೇ ಸ್ಥಾನ ಅಮೂಲ್ಯ ಪುಟ್ಟರಾಜು, ಎರಡನೇ ಸ್ಥಾನ ಚಿಂತನ್ [ಫೋಟೋಗಳು ಇಲ್ಲಿವೆ]












Click it and Unblock the Notifications