ಕಾವೇರಿ ಕನ್ನಡದ ಅಧ್ಯಕ್ಷರಾಗಿ ಹರಿದಾಸ್ ಲಹರಿ
ನೂತನ ಕಾರ್ಯಕಾರಿ ಸಮಿತಿಯ ಅಧಿಕಾರ ಸ್ವೀಕಾರ ಸಮಾರಂಭ ಮತ್ತು AGB ಮೇರಿಲ್ಯಾಂಡಿನ ಶ್ರೀ ಶಿವ ವಿಷ್ಣು ದೇವಾಲಯದ ಸಭಾಮಂದಿರದಲ್ಲಿ ನಡೆಯಿತು. ಕಾವೇರಿ ಕನ್ನಡ ಸಂಘದ ಇತರ ಪದಾಧಿಕಾರಿಗಳ ಹೆಸರುಗಳು ಇಂತಿವೆ :
* ಅಧ್ಯಕ್ಷ : ಹರಿದಾಸ್ ಟಿ. ಲಹರಿ
* ಉಪಾಧ್ಯಕ್ಷ : ಶರ್ಮಿಳಾ ಮೂರ್ತಿ
* ಕಾರ್ಯದರ್ಶಿ : ಗಿರೀಶ್ ವಾಸುದೇವ್
* ಜಂಟಿ ಕಾರ್ಯದರ್ಶಿ : ನಿಜಗುಣ ಪ್ರಸಾದ್
* ಕೋಶಾಧಿಕಾರಿ : ಶೈಲಜ ಅರ್ಕಾಚಾರ್ಯ
* ಜಂಟಿ ಕೋಶಾಧಿಕಾರಿ : ರಾಮಕೃಷ್ಣ ಭಟ್
ಕಾವೇರಿ ಯುವಸಮಿತಿಯನ್ನು ಮುನ್ನಡೆಸುವುದಕ್ಕೆ ಸವಿತಾ ರಾವ್ ಮುಂದೆ ಬಂದಿದ್ದಾರೆ. ಕಾವೇರಿಯ ಯುವಜನತೆಯನ್ನು ಒಂದುಗೂಡಿಸಲು ಕಾವೇರಿಯ ಯುವಕ ಭರತ್ ಜೋಯಿಸ್ ಯುವಸಮಿತಿಯ ಪ್ರೇರಕಶಕ್ತಿಯಾಗಿ ಸೇವೆಸಲ್ಲಿಸಲು ಮುಂದಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಇತರ ಸದಸ್ಯರು :
* ಕುಮಾರ್ ಜಿ. ಎನ್.
* ಮೈತ್ರಿ ಜಯದೇವ್
* ನೂತನ್ ದೊಡ್‍ಬೆಳೆ
* ಶೋಭಾ ರಾವ್
* ಸ್ಮಿತ ಆರ್. ವಸಿಷ್ಟ್
* ರವಿಶಂಕರ್ ಮಹಾದೇವಪ್ಪ
ಈ ಸಂದರ್ಭದಲ್ಲಿ ಅನೇಕಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರಮುಖ ಆಕರ್ಷಣೆ ಡಾ. ಕೆ.ಪಿ. ಪುತ್ತೂರಾಯರ ನಗೆಚಟಾಕಿ. ಕಾವೇರಿಯು 2012ರಲ್ಲಿ ತನ್ನ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಿದೆ. ವಿಶಿಷ್ಟ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಒಂದು ವಿಶೇಷ ಕಾರ್ಯಕ್ರಮ ಏರ್ಪಡಿಸುವ ಯೋಜನೆಯನ್ನು ಸಮಿತಿಯು ಹಾಕಿಕೊಂಡಿದೆ. ಮೇರಿಲ್ಯಾಂಡ್ ಮತ್ತು ವರ್ಜೀನಿಯಾದ ಕನ್ನಡಿಗರ ತುಂಬು ಹೃದಯದ ಪ್ರೊತ್ಸಾಹ ಮತ್ತು ಸಹಕಾರವನ್ನು ಕಾವೇರಿ ಕೋರುತ್ತದೆ.













Click it and Unblock the Notifications