ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಶಾಲೆಯಲ್ಲಿ ಮಿತಿಮೀರಿದ ಲೈಂಗಿಕ ಕಿರುಕುಳ

By Prasad
|
Google Oneindia Kannada News

Sexual harassment in US schools
ನ್ಯೂಯಾರ್ಕ್, ನ. 7 : ಲೈಂಗಿಕ ಕಿರುಕುಳ ಎಂಬುದು ಜಾಗತಿಕ ವಿದ್ಯಮಾನ. ಅದಕ್ಕೆ ಜಾತಿ, ಮತ, ಗಡಿ, ಲಿಂಗ ಭೇದಗಳಿಲ್ಲ. ಲೈಂಗಿಕ ಕಿರುಕುಳ ಒಂದು ಸಾಂಕ್ರಾಮಿಕ ರೋಗವಿದ್ದಂತೆ. ಎಲ್ಲ ರಾಜ್ಯ, ದೇಶ, ಖಂಡಗಳಲ್ಲಿ ಆವರಿಸಿಕೊಂಡಿರುವ ಸರ್ವಾಂತರರ್ಯಾಮಿ. ಅಮೆರಿಕ ಕೂಡ ಇದಕ್ಕೆ ಹೊರತಲ್ಲ.

ಅಮೆರಿಕನ್ ಅಸೋಸಿಯೇಶನ್ ಆಫ್ ಯುನಿವರ್ಸಿಟಿ ಸರ್ವೆ ನಡೆಸಿದ ಅಧ್ಯಯನ ಮತ್ತು ಸೋಮವಾರ ಪ್ರಕಟಿಸಿದ ವರದಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಅನೇಕ ಆತಂಕಕಾರಿ ವಿದ್ಯಮಾನಗಳನ್ನು ಬಯಲಿಗೆಳೆದಿದೆ. ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟಿದೆ.

2010 ಮತ್ತು 2011ರ ಸಾಲಿನಲ್ಲಿ 7ರಿಂದ 12ನೇ ತರಗತಿಗಳಲ್ಲಿ ಓದುತ್ತಿರುವ ಶೇ.48ರಷ್ಟು ಮಕ್ಕಳು ವೈಯಕ್ತಿಕವಾಗಿ ಅಥವಾ ಎಲೆಕ್ಟ್ರಾನಿಕ್ ಸಲಕರಣೆಗಳ ಮುಖಾಂತರ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಎಸ್ಎಮ್ಎಸ್, ಈಮೇಲ್, ಸಾಮಾಜಿಕ ವೆಬ್ ತಾಣಗಳಲ್ಲಿ ಮಾನಸಿಕವಾಗಿ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನುತ್ತದೆ ಸಮೀಕ್ಷೆ.

ಮೊಬೈಲ್ ಮುಖಾಂತರ ಹರಿದಾಡುವ ಅಸಹ್ಯಕರ ಫೋಟೋಗಳು, ಚಾರಿತ್ರ್ಯವಧೆ ಮಾಡುವ ಎಸ್ಎಮ್ಎಸ್ ಸಂದೇಶಗಳು, ಸಾಮಾಜಿಕ ತಾಣಗಳಲ್ಲಿ ಪ್ರಕಟವಾಗುವ ಲೇಖನಗಳು ಅನೇಕ ಬಾರಿ ತಮಾಷೆಗೆಂದು ಕಳಿಸಿದ್ದರೂ ಅದರಿಂದ ಆಗುವ ಪರಿಣಾಮ ಭೀಕರವಾಗಿರುತ್ತದೆ.

ಇಂಥ ಅನುಭವ ಪಡೆದ ಮಕ್ಕಳು ಮಾನಸಿಕ ಕ್ಷೋಬೆಗೊಳಗಾಗಿದ್ದಾರೆ, ಓದಿನಲ್ಲಿ ಹಿಂದೆ ಬಿದ್ದಿದ್ದಾರೆ. ಕಡೆಗೆ ಶಾಲೆಗೆ ಹೋಗಲು ಕೂಡ ಹಿಂಜರಿಯುತ್ತಿದ್ದಾರೆ. ಕೆಲ ಮಕ್ಕಳು ಜೀವ ಕಳೆದುಕೊಳ್ಳುವ ವಿಚಾರಕ್ಕೂ ಕೈಹಾಕಿದ್ದರು ಎನ್ನುತ್ತದೆ ಅಧ್ಯಯನ. ಲೈಂಗಿಕ ದೌರ್ಜನ್ಯಕ್ಕೊಳಗಾದವರಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆಯೇ ಹೆಚ್ಚು.

ಇದು ಎಲ್ಲ ಶಾಲೆಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಲೈಂಗಿಕ ಕಾಮೆಂಟುಗಳನ್ನು ಪಾಸ್ ಮಾಡುವುದು, ಹೆಣ್ಣು ಗಂಡೆನ್ನದೆ ಮೈ ಮುಟ್ಟುವುದು, ಅಸಹ್ಯಕರ ಚಿತ್ರಗಳನ್ನು ಬಲವಂತವಾಗಿ ತೋರಿಸುವುದು ಶಾಲೆಯೊಳಗೆ ನಡೆದುಬಂದಷ್ಟೇ ಸಹಜವಾಗಿರುತ್ತವೆ. ಒಬ್ಬ ಹುಡುಗಿಗೆ ಜಾಸ್ತಿ ಸ್ನೇಹಿತರು ಇದ್ದದ್ದಕ್ಕೆ ವ್ಯಭಿಚಾರಿ ಎಂಬ ಪದ ಕೂಡ ಕಟ್ಟಿದ್ದರು.

ಮಾನಸಿಕವಾಗಿ ಬಳಲಿದ ಅನೇಕ ಮಕ್ಕಳು ಆತ್ಯಹತ್ಯೆ ಮಾಡಿಕೊಂಡ ಮೇಲೆ ಅಥವಾ ಆತ್ಮಹತ್ಯೆಗೆ ಯತ್ನಿಸಿದ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಇಂಥ ಆಚರಣೆಗಳಿಗೆ ಮೂಗುದಾಣ ಹಾಕಿ ಮಕ್ಕಳನ್ನು ಸರಿದಾರಿಗೆ ತರಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದೆ ವಿಪರೀತ ಪರಿಣಾಮ ಎದುರಿಸಬೇಕಾಗುತ್ತದೆಂದು ಎಚ್ಚರಿಸಲಾಗಿದೆ.

English summary
Sexual harassment is pervasive in American schools, says a survey conducted by American Association of University Women. Children in 7-12 grades, boy and girl, are affected most. Sending lewd photos, sexting, passing vulgar comments, showing unwelcome picture are as normal as walking into a school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X