ಕೆಕೆಎನ್ ಸಿಯಲ್ಲಿ ಸಂಗೀತಾ ಕಟ್ಟಿ ಸಂಗೀತ ಸುಧೆ

ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿರುವ ಧಾರವಾಡದವರಾದ ಸಂಗೀತಾ ಕಟ್ಟಿ ಕುಲಕರ್ಣಿ ಕೆಕೆಎನ್ ಸಿ ಈ ವಿಶೇಷ ದಿನದಂದು ವಿಶೇಷ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಅವರ ಕಂಠದಲ್ಲಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ಕವನಗಳನ್ನು ಕೇಳುವುದೇ ಒಂದು ಮಧುರ ಅನುಭವ.
ಕ್ಯಾಲಿಫೋರ್ನಿಯಾದ ಮಿಲ್ಪಿಟಸ್ ನಲ್ಲಿ ಅ.16ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗಾಗಿಯೇ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಪಟ್ಟಿ
* ಮಕ್ಕಳಿಂದ ಸಂಗೀತ ಸುಧೆ
* ಉತ್ತರ ಅಮೆರಿಕದ ವೀರಶೇವ ಸಮಾಜದಿಂದ ಸಾಂಸ್ಕೃತಿಕ ಕಾರ್ಯಕ್ರಮ
* ಮಕ್ಕಳಿಗಾಗಿ ಫ್ಯಾನ್ಸಿ ಡ್ರೆಸ್
* ಕೊಂಕಣಿ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮ
* ಕರ್ನಾಟಕದ ಕರಾವಳಿಯ ವಿಶಿಷ್ಟ ಕಲಾಪ್ರದರ್ಶನ
* ಮಕ್ಕಳು ಮತ್ತು ಯುವಕರ ಅಭಿನಂದನಾ ಕಾರ್ಯಕ್ರಮ
ಕಾರ್ಯಕ್ರಮ ನಡೆಯುವ ಸ್ಥಳ
"ICC" 525 Los Coches Street, Milpitas, CA - 95035












Click it and Unblock the Notifications