ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕನ್ನಡೋತ್ಸವದ ಮರೆಯಲಾರದ ಗಳಿಗೆಗಳು

By Prasad
|
Google Oneindia Kannada News

Ramesh Aravind speaking at Americannadotsava
ನಾರ್ತ್ ಅಮೆರಿಕ ವಿಶ್ವ ಕನ್ನಡಿಗರ ಆಗರ (ನಾವಿಕ) ಸಂಸ್ಥೆ ಅನಿವಾಸಿ ಭಾರತೀಯರ ಸಮಿತಿ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಎರಡು ದಿನಗಳ ಸಡಗರದ ಸಾಂಸ್ಕೃತಿಕ ಸಮ್ಮೇಳನ ಇದೀಗ ಮುಕ್ತಾಯವಾಗಿದೆ.

ಅಮೆರಿಕ ಮತ್ತು ಕರ್ನಾಟಕಗಳ ನಡುವೆ ಸ್ನೇಹಸೇತು ನಿರ್ಮಿಸುವ ಉದ್ದೇಶದಿಂದ ಆಗಮಿಸಿದ್ದ ಅಮೆರಿಕನ್ನಡಿಗರು ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ 9 ಮತ್ತು 10ರಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಅಮೆರಿಕನ್ನರೂ ಸೇರಿದಂತೆ ಬೆಂಗಳೂರಿನ ಕಲಾಸಕ್ತರಿಂದ ಕಲಾಕ್ಷೇತ್ರ ತುಂಬಿ ತುಳುಕುತಿತ್ತು.

ಮಂಗಳೂರಿನ ಸನಾತನ ನಾಟ್ಯಾಲಯ ಸಂಸ್ಥೆ ಪ್ರದರ್ಶಿಸಿದ 'ರಾಷ್ಟ್ರದೇವೋಭವ' ಕಾರ್ಯಕ್ರಮ ಸಮ್ಮೇಳನದ ಹೈಲೈಟ್ ಗಳಲ್ಲಿ ಒಂದು. ಇಂದಿನ ಪೀಳಿಗೆಯ ಮಕ್ಕಳು ಕನ್ನಡ ನಾಡು ತೊರೆದರೂ ಕನ್ನಡ ಭಾಷೆ ಮರೆತಿಲ್ಲ ಎಂಬ ಸಂಗತಿಯನ್ನು ಮಾತು, ಹಾಡು, ನರ್ತನಗಳ ಮೂಲಕ ಮನದಟ್ಟು ಮಾಡಿಕೊಟ್ಟರು.

ವಿಶ್ವ ಕನ್ನಡಿಗರಿಗಾಗಿ ಸಮ್ಮೇಳನದಲ್ಲಿ ಸೆರೆಹಿಡಿದ ಮರೆಯಲಾರದ ಗಳಿಗೆಗಳನ್ನು ಗ್ಯಾಲರಿ ಮುಖಾಂತರ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

* ಭಾನುವಾರದ ಚಿತ್ರಗಳು ಮತ್ತು ಸಮಾರೋಪ ಸಮಾರಂಭ
* ರಾಷ್ಟ್ರಪ್ರೇಮದ ಕನಸು ತುಂಬಿ ಮನಸು ಗೆದ್ದ ರಾಷ್ಟ್ರದೇವೋಭವ
* ಕನ್ನಡಕ್ಕಾಗಿ ತನು, ಮನ, ಧನ ಧಾರೆಯೆರೆದ ಸಾಧಕರಿಗೆ ಸನ್ಮಾನ
* ಶನಿವಾರ ಪುರಭವನದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ಮೆರವಣಿಗೆ

English summary
Two days cultural extravaganza of Navika organized Americannadotsava is just concluded. Many Kannadiga from America exhibited their talent at Ravindra Kalakshetra in Bangalore on July 9 and 10. Here is photo feature of the mega event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X