ಬೃಂದಾವನ ವಸಂತೋತ್ಸವಕ್ಕೆ ಎಚ್ ಡಿ ಕುಮಾರಸ್ವಾಮಿ

ಈ ಬಾರಿಯ ಯುಗಾದಿಯ ವಿಶೇಷವೆಂದರೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಎಚ್ ಡಿ ಕುಮಾರಸ್ವಾಮಿ ಅವರು ಬೃಂದಾವನದ ಕನ್ನಡಿಗರೊಂದಿಗೆ ಖರನಾಮ ಸಂವತ್ಸರದಲ್ಲಿ ಬೇವು ಬೆಲ್ಲ ಹಂಚಿಕೊಳ್ಳಲು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವುದು. ವಸಂತೋತ್ಸವದ ಉದ್ಘಾಟನೆಯನ್ನು ಕುಮಾರಸ್ವಾಮಿ ಮಾಡಲಿದ್ದಾರೆ. ವಿಶೇಷ ಅತಿಥಿಯ ಆಗಮನದಿಂದಾಗಿ 'ಮೈತ್ರಿ'ಕೂಟದ ಸದಸ್ಯರ ಸಡಗರವೂ ಇಮ್ಮಡಿಗೊಂಡಿದೆ.
ಮೇ 15ರ ಭಾನುವಾರ ಬೆಳಿಗ್ಗೆ 10.30ರಿಂದ ಸಂಜೆ 7 ಗಂಟೆಯವರೆಗೆ ಬೃಂದಾವನ ಕನ್ನಡ ಕೂಟದ ಸದಸ್ಯರಿಂದ ಹಾಡುಹಸೆ, ಚೈತ್ರಮಾಸವನ್ನು ಸ್ವಾಗತಿಸುವ ಕಾರ್ಯಕ್ರಮಗಳು, ಹಾಸ್ಯ ನಾಟಕ, ಸಂಗೀತ ಸಂಜೆಗಳು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲಿವೆ. ಜೊತೆಗೆ ಮಧ್ಯಾಹ್ನ ಹೋಳಿಗೆ ಊಟವಂತೂ ಇದ್ದೇ ಇದೆ. ಕಾರ್ಯಕ್ರಮ ನಡೆಯುವ ಸ್ಥಳ : ಕ್ರೆಪ್ಸ್ ಮಿಡ್ಲ್ ಸ್ಕೂಲ್, 5 ಕೆಂಟ್ ಲೇನ್, ಈಸ್ಟ್ ವಿಂಡ್ಸರ್, ನ್ಯೂ ಜೆರ್ಸಿ 08520.
ಕಾರ್ಯಕ್ರಮದ ವಿವರಗಳು
10.30 : ಬಂಧ, ಸ್ನೇಹಿತರೊಡನೆ ಭೇಟಿ
11.00 : ಸ್ವಾಗತ
11.15 : ಕುಮಾರಸ್ವಾಮಿಯಿಂದ ವಸಂತೋತ್ಸವದ ಉದ್ಘಾಟನೆ
12.00 : ಸದಸ್ಯರಿಂದ ಯುಗಾದಿ ಕುರಿತ ಕಾರ್ಯಕ್ರಮಗಳು
1.00 : ಹಬ್ಬದೂಟ
1.45 : ಯುಗಾದಿ ಕುರಿತ ಕಾರ್ಯಕ್ರಮಗಳು (ಭಾಗ 2)
2.45 : ಚೇತನ್ ಹೆಬ್ಬಾರ್ ಮತ್ತು ಅಖಿಲಾ ವಸುದೇವಮೂರ್ತಿ ಅವರಿಂದ 'ಪಂಚವಟಿ' ನೃತ್ಯನಾಟಕ
3.25 : ಮಲ್ಲಿ ಸಣ್ಣಪ್ಪನವರ್ ಅವರ ತಂಡದಿಂದ ಹಾಸ್ಯ ನಾಟಕ 'ಅಮೆರಿಕ ಅಳಿಯ'
3.40 : ಯುಗಾದಿ ಕುರಿತ ಕಾರ್ಯಕ್ರಮಗಳು (ಭಾಗ 3)
4.30 : ಸುರೇಶ್ ರಾಮಚಂದ್ರ ಮತ್ತು ಹರಿಣಿ ವಾಸುದೇವನ್ ಅವರಿಂದ ಸಂಗೀತ ಸಂಜೆ












Click it and Unblock the Notifications