ಸಿಲಿಕಾನ್ ವ್ಯಾಲಿಯಲ್ಲಿ ರಘು ದೀಕ್ಷಿತ್ ಗುಡುಗುಡಿಯ ಸೇದಿ ನೋಡು
ಕನ್ನಡ
ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ಸಂಗೀತ ನಿರ್ದೇಶಕ ಮತ್ತು ಹಾಡುಗಾರ ರಘು ದೀಕ್ಷಿತ್ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಅವರ ಧ್ವನಿ, ವೇಶಭೂಷಣ, ಮಾತುಗಾರಿಕೆ ಎಲ್ಲವೂ ಆಕರ್ಷಕವಾಗಿರುತ್ತವೆ. ಸಿಲಿಕಾನ್ ಕಣಿವೆಯಲ್ಲಿ ಇದೇ ಮೊದಲ ಬಾರಿಗೆ ರಘು ದೀಕ್ಷಿತ್ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. id="toptextpromo"> ಈ ವರ್ಣರಂಜಿತ ಕಾರ್ಯಕ್ರಮವನ್ನು 'ಕಸ್ತೂರಿ ಮೀಡಿಯಾ' ಮತ್ತು 'ರಂಗಧ್ವನಿ'ಯ ಉತ್ಸಾಹಿ ಕಾರ್ಯಕರ್ತರು ಆಯೋಜಿಸಿದ್ದಾರೆ.ಸನ್ನಿವೇಲ್ ಹಿಂದು ದೇವಾಲಯದ ಸಭಾಂಗಣದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ಮಾರ್ಚ್ 5, 2011ರ ಸಂಜೆ 6 ಗಂಟೆಗೆ ನಡೆಯಲಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಪ್ರವೇಶಉಚಿತ. 5 ರಿಂದ 10 ವರ್ಷದೊಳಗಿನ ಮಕ್ಕಳಿಗೆ ಟಿಕೆಟ್ ದರ ನಿಗದಿಪಡಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಕಾರ್ಯಕ್ರಮದಲ್ಲಿ
ರಘು ದೀಕ್ಷಿತ್ ಜಾನಪದ, ರಾಕ್ ಮತ್ತು ಪಾಪ್ ಶೈಲಿಯ ಸಂಗೀತದಿಂದ ರಂಜಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣಕ್ಕೆ ಭೇಟಿ ನೀಡಿ. ಟಿಕೆಟ್ ವಿವರಗಳಿಗಾಗಿ ಸಂಪರ್ಕಿಸಿ: ಅಶಿಥ ಗೋವರ್ಧನ್ (510) 402-4633; ರಘು ಹಾಲೂರು (510) 826-2243; ವಿನೋದ್ ಕೆರೆಮನೆ (650) 888-5587; ಕಿರಣ್ ಕುಮಾರ್ (408) 655-6413.











Click it and Unblock the Notifications