ಸಿಲಿಕಾನ್ ಕಣಿವೆಯ ಕವಿಗಳಿಗೆ ಮಾತ್ರ

ಸ್ಪರ್ಧೆಯಲ್ಲಿ ವಿಜೇತರಾದ ಕವಿಗಳ ಹೆಸರುಗಳನ್ನು ಕನ್ನಡ ಕೂಟದ ಯುಗಾದಿ ಕಾರ್ಯಕ್ರಮದಲ್ಲಿ ಘೋಷಿಸಲಾಗುವುದು.
ಸ್ಪರ್ಧೆಯ ನಿಬಂಧನೆಗಳು:
* ಕವನಗಳು ಕನ್ನಡದಲ್ಲಿರಬೇಕು ಮತ್ತು ಒಂದು ಪುಟ ಮೀರಬಾರದು.
* ಕವನ ಸ್ವಂತದ್ದಾಗಿದ್ದು ಬೇರೆಲ್ಲೂ ಪ್ರಕಟವಾಗಿರಬಾರದು ಮತ್ತು ಅನುವಾದಿತ ಕವನಗಳಿಗೆ ಅವಕಾಶವಿಲ್ಲ.
* ಕವನಗಳು ಬರಹ ಅಥವಾ MS Wordನಲ್ಲಿರಬೇಕು.ಹಸ್ತಪ್ರತಿಗಳನ್ನು ಪರಿಗಣಿಸಲಾಗುವುದಿಲ್ಲ.
* ಕೆಕೆಎನ್ ಸಿ ಸದಸ್ಯರು ಮತ್ತು ಅವರ ಪರಿವಾರದವರಿಗಷ್ಟೇ ಅಲ್ಲದೆ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಎಲ್ಲಾ ಕನ್ನಡಿಗರಿಗೂ ಭಾಗವಹಿಸುವ ಅವಕಾಶವಿದೆ.
* ಸ್ಪರ್ಧೆಯ ಕವನಗಳಲ್ಲಿ ಯಾವ ಕವನವನ್ನಾದರು 2010ರ ಸ್ವರ್ಣಸೇತುವಿನಲ್ಲಿ ಪ್ರಕಟಿಸುವ ಅಥವಾ ಪ್ರಕಟಿಸದಿರುವ ತೀರ್ಮಾನ ಸಂಪಾದಕ ಸಮಿತಿಯದು.
* ಕವನಗಳನ್ನು ನಿಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಯ ಜೊತೆ ಈ ವಿಳಾಸಕ್ಕೆ ಕಳುಹಿಸಿ:
[email protected]
* ಕವನಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ : 20 ಮಾರ್ಚ್ 2010.
* ಸ್ಪರ್ಧೆಗೆ ಬಂದ ಕವನಗಳನ್ನು ಒಂದು ವರ್ಷ ಬೇರೆಲ್ಲೂ ದಯವಿಟ್ಟು ಪ್ರಕಟಿಸಬೇಡಿ.
* ಒಬ್ಬ ಸ್ಪರ್ಧಿಗೆ ಒಂದು ಪ್ರವೇಶ ಮಾತ್ರ.
* ತೀರ್ಪುಗಾರರ ನಿರ್ಧಾರವೇ ಅಂತಿಮ.
ಸಂಪಾದಕ ಸಮಿತಿ
ಸ್ವರ್ಣಸೇತು 2010












Click it and Unblock the Notifications