ಬೇ ಏರಿಯಾ, ಸಾಮರಸ್ಯಕ್ಕೆ ಒಂದು ಸಲಹೆ
ಕ್ಯಾಲಿಫೋರ್ನಿಯಾ,
ಜ.29 : ಕನ್ನಡ ಭಾಷೆ, ಸಂಗೀತ ನಾಟಕ ಮುಂತಾದ ಲಲಿತಕಲೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮೇಲಿಂದಮೇಲೆ ಹಮ್ಮಿಕೊಳ್ಳುವ ಅಮೆರಿಕಾದ ಕನ್ನಡ ಸಂಘಗಳಲ್ಲಿ ಉತ್ತರ ಕ್ಯಾಲಿಫೋರ್ನಿಯದ ಕನ್ನಡ ಕೂಟ ಕೆಕೆಎನ್ ಸಿ ಒಂದು. ಪ್ರಸಕ್ತ ಸಾಲಿನ ಮೊದಲ ಸಾಂಸ್ಕೃತಿಕ ಕಾರ್ಯಕ್ರಮ 'ಸ್ನೇಹ ಸಪ್ತಮಿ'. ಈ ಸಪ್ತಮಿಗೆ ಬೇ ಏರಿಯ ಕನ್ನಡಿಗರು ಸಜ್ಜಾಗುತ್ತಿದ್ದಾರೆ. id="toptextpromo">ಫೆಬ್ರವರಿ
20ರಂದು ನಡೆಯಲಿರುವ ಈ ಸಮಾರಂಭದ ಪ್ರಮುಖ ಆಕರ್ಷಣೆ 'ಗೋಕುಲ ನಿರ್ಗಮನ' ಖ್ಯಾತಿಯ ಅಲಮೇಲು ಅಯ್ಯಂಗಾರ್ ನಿರ್ದೇಶನದ ಸಾಮಾಜಿಕ ನಾಟಕ 'ಸಾಮರಸ್ಯಕ್ಕೆ ಒಂದು ಸಲಹೆ'. ಸ್ಥಳ : ಸನ್ನಿವೇಲ್ ಹಿಂದೂ ದೇವಾಲಯ. id='are-slot-1' class='oiad oi-axt oiadv'> id='top-searched-articles'>ಅದರ
ಮುಂದಿನವಾರ ಅಂದರೆ ಫೆ. 27ರ ಶನಿವಾರ ಪ್ರತಿ ವರ್ಷದಂತೆ ಪುರಂದರ ದಾಸರ ಆರಾಧನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಲಿವರ್ ಮೋರ್ ಹಿಂದೂ ದೇವಾಲಯದಲ್ಲಿ ನಡೆಯಲಿದೆ. ಸಂಗೀತ ಕಾರ್ಯಕ್ರಮಗಳನ್ನು ನೀಡಬಯಸುವ ಆಸಕ್ತರು ತಮ್ಮ ಹೆಸರು, ಹಾಡು ಹಾಗೂ ಸಂಗೀತ ನಿರ್ದೇಶಕರ ಮಾಹಿತಿಯೊಂದಿಗೆ href="mailto:[email protected]">[email protected]ನಲ್ಲಿ ನೊಂದಾಯಿಸಿಕೊಳ್ಳಬೇಕೆಂದು ಕೆಕೆಎನ್ ಸಿ ಕನ್ನಡ ಸಂಘದ ಪ್ರಕಟಣೆ ತಿಳಿಸಿದೆ. ಕಡೆಯ ದಿನಾಂಕ : ಫೆ. 10.











Click it and Unblock the Notifications