• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನಲ್ಲಿ ನಾವಿಕ ಪದಾಧಿಕಾರಿಗಳ ಪತ್ರಿಕಾಗೋಷ್ಠಿ

By Super
|

ಉತ್ತರ ಅಮೆರಿಕಾದಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು 60 ಸಾವಿರಕ್ಕೂ ಹೆಚ್ಚು ಕರ್ನಾಟಕ ಜನರಿದ್ದಾರೆ. ಬಹುಮಟ್ಟಿಗೆ ಈ ಜನಸಾಂದ್ರತೆ ಕಂಡುಬರುವುದು ಪಶ್ಚಿಮ, ಪೂರ್ವ ಮತ್ತು ಮಧ್ಯ ಅಮೆರಿಕಾದ ಪ್ರಾಂತ್ಯಗಳಲ್ಲಿ. ನಾನಾ ಸಮುದಾಯ ಮತ್ತು ಆರ್ಥಿಕ ವರ್ಗಗಳ ಹಿನ್ನೆಲೆಯಿಂದ ಬಂದ ಕನ್ನಡಿಗರು ಇಲ್ಲಿ ನೆಲೆಸಿದ್ದಾರೆ. ಈ ಸಂಗತಿಯನ್ನು ಗಮನಿಸಿದಾಗ ಉತ್ತರ ಅಮೆರಿಕದಲ್ಲಿ ಒಂದೇ ದಿಕ್ಕಿನಲ್ಲಿ ಪುನಃ ಪುನಃ ವಾರ್ಷಿಕ ಸಂಘಟನೆಯನ್ನು ನಡೆಸುವುದು ಹಿತವಲ್ಲ. ಏಕೆಂದರೆ, ಎಲ್ಲಾ ಕುಟುಂಬಕ್ಕೂ ಭಾಗವಹಿಸಲು ಅವಕಾಶ ದೊರೆಯುವುದಿಲ್ಲ.

ಆದಷ್ಟೂ ಎಲ್ಲಾ ಕನ್ನಡಿಗರೂ ಕನ್ನಡ ಸಮಾವೇಶದಲ್ಲಿ ಭಾಗವಹಿಸಲು ಅವಕಾಶ ದೊರಕಿಸಬೇಕೆಂಬ ದೃಷ್ಟಿಯಿಂದ ನಾವಿಕ (ನಾರ್ತ್ ಅಮೆರಿಕ ವಿಶ್ವ ಕನ್ನಡ ಆಗರ - North America Vishwa Kannada Association) ಈ ಬಾರಿ ತನ್ನ ಪ್ರಥಮ ಸಮ್ಮೇಳನವನ್ನು Pasadena Convention Center, ಲಾಸ್ ಏಂಜಲಿಸ್, ಕ್ಯಾಲಿಫೋರ್ನಿಯಾದಲ್ಲಿ ನಡೆಸಬೇಕೆಂದು ನಿರ್ಧರಿಸಿದೆ. ಇದೇ ರೀತಿ ಮುಂದಿನ ಸಮ್ಮೇಳನಗಳನ್ನು ಅಮೆರಿಕದ ಪ್ರತಿ ದಿಕ್ಕಿನಲ್ಲೂ ಹಾಗೂ ಬರಲಿರುವ ವರ್ಷಗಳಲ್ಲಿ ಕೆನಡಾದಲ್ಲಿಯೂ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ನಾವಿಕ ಅಧ್ಯಕ್ಷ ಡಾ. ಐಯ್ಯಂಗಾರ್ ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಭಾರತಕ್ಕೆ ಫಾರ್ ಗುಡ್ ಮರಳಿರುವ ಎಂ.ಕೃಷ್ಣಮೂರ್ತಿ, ಚಿನೋ ಹಿಲ್ಸ್ ಕ್ಯಾಲಿಫೋರ್ನಿಯಾದ ವಲ್ಲೀಶ ಶಾಸ್ತ್ರೀ ಹಾಗೂ ಫ್ಲಾರಿಡಾದ ಟಾಂಪ ನಿವಾಸಿ ಡಾ. ಕೇಶವ ಬಾಬು ಉಪಸ್ಥಿತರಿದ್ದರು.

ನಾವಿಕ ಸಂಸ್ಥೆಯು 2010ರ ಜುಲೈ ತಿಂಗಳ 2,3,4ರಂದು ಲಾಸ್‌ಏಂಜಲಿಸ್ ನಗರದಲ್ಲಿ ಒಂದು ಬೃಹತ್ ಕನ್ನಡ ಸಮಾವೇಶವನ್ನು ಆಯೋಜಿಸಬೇಕೆಂದು ನಿರ್ಧರಿಸಿದೆ. ಈ ಸಮಾವೇಶದಲ್ಲಿ ಮೂರು ವಿಭಾಗಗಳಲ್ಲಿ ಇರುತ್ತವೆ. ಅವೆಂದರೆ :

ಮೊದಲ ದಿನ

* ಕರ್ನಾಟಕ ಸರ್ಕಾರವು ಕನ್ನಡಿಗರ ಮನಸ್ಸುಗಳಿಗೆ ತಿಳಿಸಬೇಕಾದ ವಿವರ, ಯೋಜನೆಗಳನ್ನು ಕುರಿತ ಗೋಷ್ಠಿ.

* ಕರ್ನಾಟಕ ಸರ್ಕಾರದ ಜೊತೆಗೂಡಿ ಔದ್ಯಮಿಕ ಕಾರಣಗಳಿಗೆ ಹಣ ತೊಡಗಿಸಬಹುದಾದಂತಹ ಎಲ್ಲ ಉದ್ಯಮಿಗಳೊಡನೆ ನೇರ ಸಂವಾದದ ವೇದಿಕೆ. ಕ್ಯಾಲಿಫೋರ್ನಿಯಾ ರಾಜ್ಯ ಸರ್ಕಾರದ ರಾಜ್ಯಪಾಲರಾದ ಆರ್ನಾಲ್ಡ್ ಶ್ವಾಸ್ನೇಗರ್ ಅವರನ್ನು ಆಹ್ವಾನಿಸಲಾಗಿದೆ ಹಾಗೂ ಅಮೆರಿಕಾದ ಇತರ ಉನ್ನತ ಅಧಿಕಾರಿಗಳನ್ನೂ ಆಹ್ವಾನಿಸಲಾಗುವುದು.

* ಜಾಗತಿಕವಾಗಿ ಅದಾಗಲೇ ಕೆಲಸ ಮಾಡುತ್ತಾ ಇರುವ, ವಿಭಿನ್ನ ದೇಶವಾಸಿಗಳ ಕನ್ನಡ ಸಂಘಟನೆಗಳ ಪ್ರತಿನಿಧಿಗಳೊಡನೆ ನೇರಸಂವಾದವನ್ನು ರೂಪಿಸಿ ವಿಶ್ವ ಕನ್ನಡಿಗರ ಸಂಪರ್ಕ ಜಾಲವೊಂದನ್ನು ರಚಿಸುವ ಹಾಗೂ ಅಂತರ್ಜಾಲ ತಾಣವನ್ನು ರಚಿಸುವ ಹಾಗೂ ಎಲ್ಲಾ ಕನ್ನಡ ದೇಶಗಳವರ ಚಟುವಟಿಕೆಯನ್ನು ಎಲ್ಲರಿಗೂ ತಲುಪಿಸವಂತೆ ಮಾಡುವ ವಿಶೇಷ ವೇದಿಕೆಗೆ ಚಾಲನೆ.

ಎರಡನೇ ದಿನ

* ಹೊರನಾಡಿನಲ್ಲಿರುವ ಕನ್ನಡ ಕತೆಗಾರರು/ ಕವಿಗಳು/ ನಾಟಕಕಾರರು/ ಕಲಾವಿದರುಗಳನ್ನು ಒಳನಾಡಿನ ವಿಮರ್ಶಕರ ಒರೆಗಲ್ಲಿಗೆ ಹಚ್ಚುವ ವಿಚಾರಗೋಷ್ಠಿ.

* ಕರುನಾಡಿನಲ್ಲಿ ಆಗುತ್ತಿರುವ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಯನ್ನು ಹೊರನಾಡಿಗರು ನೋಡುವ ಕ್ರಮ, ವಿಮರ್ಶೆಯನ್ನು ಒಳಗೊಂಡಂತಹ ವಿಚಾರಗೋಷ್ಠಿ.

* ಕನ್ನಡ ಮತ್ತು ಕನ್ನಡದ ಸೋದರ ಭಾಷೆಗಳಲ್ಲಿ ತಯಾರಾದ ಉತ್ತಮ ಗುಣಮಟ್ಟದ ಚಲನಚಿತ್ರಗಳ ಉತ್ಸವ ಮತ್ತು ಅಂತಹ ಚಿತ್ರಗಳನ್ನು ಕುರಿತ ವಿಚಾರಸಂಕಿರಣ.

* ಕನ್ನಡ ಚಲನಚಿತ್ರಗಳನ್ನು ಹೊರನಾಡಿಗೆ ತಲುಪಿಸುವ ಮಾರುಕಟ್ಟೆಯನ್ನು ರೂಪಿಸುವ ವಿಶೇಷ ಕಾರ್ಯಾಗಾರ.

* ಎಲ್ಲಾ ಕಲೆಗಳು ಹಾಗೂ ಉದ್ಯಮದಲ್ಲಿ ಮಹಿಳೆಯರು ಪಾಲ್ಗೊಳ್ಳುವಂತೆ (ಜಾಗತಿಕ ದೃಷ್ಟಿಕೋನದಲ್ಲಿ) ಚರ್ಚಿಸುವ ವಿಶೇಷ ವೇದಿಕೆ.

* ಯುವಶಕ್ತಿಯನ್ನು ನಾಳಿನ ಬದುಕಿಗೆ ಸಿದ್ಧಗೊಳಿಸುವ ಮತ್ತು ಅವರ ಪ್ರತಿಭಾ ಪ್ರದರ್ಶನ ವೇದಿಕೆ.

ಮೂರನೆಯ ದಿನ

* ಹೊರನಾಡಿನಲ್ಲಿ ಇರುವ ಆಸಕ್ತರಿಗೆ ಚಲನಚಿತ್ರ/ರಂಗಭೂಮಿ/ ನೃತ್ಯ/ ಸಂಗೀತ/ ಜಾನಪದ ಮತ್ತು ಇತರ ಕಲೆಗಳನ್ನು ಕುರಿತ ರಸಗ್ರಹಣ ಶಿಬಿರ

* ಹೊರನಾಡ ಕನ್ನಡಿಗರಿಗೆ ಕನ್ನಡದ ಚಟುವಟಿಕೆಯಲ್ಲಿ ನೇರ ಪಾಲ್ಗೊಳ್ಳಲು ಇರುವ ಸಾಧ್ಯತೆಗಳನ್ನು ಕಲಿಸುವ ಕಾರ್ಯಾಗಾರ.

* ಹೊರನಾಡ ಕನ್ನಡಿಗರ ಹಾಗೂ ಒಳನಾಡ ಕನ್ನಡಿಗರ ಭಾಗವಹಿಸುವಿಕೆ ಇರುವಂತಹ ನಾಟಕೋತ್ಸವ

* ಕನ್ನಡದ ಸಂಸ್ಕೃತಿಗೆ ಪೂರಕವಾಗುವ ಎಲ್ಲಾ ಕಲೆಗಳ ಪ್ರದರ್ಶನ ಹಾಗೂ ಅವುಗಳನ್ನು ಕುರಿತ ಅಭಿಪ್ರಾಯ ವಿನಿಮಯ ವೇದಿಕೆ.

* ಹೊರನಾಡ ಕನ್ನಡಿಗರಿಗೆ ಕನ್ನಡ ಕಲಿಕಾ ಕೇಂದ್ರಗಳ ಮಾದರಿಗಳ ಪರಿಚಯ ಮತ್ತು ಕಲಿಕಾ ಕೇಂದ್ರಗಳಿಗೆ ಚಾಲನೆ.

ಈ ಮೂರು ದಿನಗಳಲ್ಲಿ ಪ್ರತಿದಿನ ಸಂಜೆ ಬೃಹತ್ ಸಾಂಸ್ಕೃತಿಕ ಸಮಾವೇಶವನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿಶ್ವದ ಎಲ್ಲಾ ಮೂಲೆಗಳಿಂದ ಬಂದಿರುವ ಕನ್ನಡಿಗರೊಂದಿಗೆ ಕರ್ನಾಟಕ ಸರ್ಕಾರವೂ ನೇರ ಒಡಂಬಡಿಕೆಯೊಂದನ್ನು ಮಾಡಿಕೊಂಡು, ಕನ್ನಡಿಗರ ನಿರಂತರ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸುವಂತಾಗಬೇಕು ಎಂಬುದು ಈ ಸಮಾವೇಶದ ಪ್ರಧಾನ ಆಶಯ ಎಂದು ನಾವಿಕ ಅಧ್ಯಕ್ಷ ಡಾ.ಅಯ್ಯಂಗಾರ್ ಪತ್ರಕರ್ತರಿಗೆ ವಿವರಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
North America Vishwa Kannada Conference, July 2-4, 2010, South California. Conference shedule, program high lights by Dr. iIyyengar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more