ವೇವ್ಜ್ ಅಕಾಡೆಮಿಯಿಂದ ಉಚಿತ ಸಂಗೀತ ಶಿಬಿರ

ಶಿಬಿರದಲ್ಲಿ ನ್ಯೂಜೆರ್ಸಿ ಹಾಗು ಸುತ್ತಮುತ್ತಲಿನ ನ್ಯೂಯಾರ್ಕ್, ಪೆನ್ ಸಿಲ್ ವೇನಿಯ, ಕನೇಟಿಕಟ್, ಬಾಸ್ಟನ್ ನಗರಗಳ ಕನ್ನಡಿಗರಿಗೆ ಸ್ವಾಗತ. ಸುಗಮ ಸಂಗೀತ, ನೃತ್ಯ, ಸಂಗೀತ ಗೋಷ್ಠಿಯನ್ನು ಕಲಿಯುವ ಆಸಕ್ತಿಯುಳ್ಳವರು ತಪ್ಪದೆ ಸೆಪ್ಟೆಂಬರ್ 2, 3, 4ರಂದು ಸಂಜೆ 4ರಿಂದ 6ರವರೆಗೆ ವೇವ್ ಜ್ ಅಕಾಡೆಮಿಯ ವತಿಯಿಂದ ಅಯೋಜಿಸಿರುವ ಉಚಿತ ಸುಗಮ ಸಂಗೀತ (ದಾಸ ಸಾಹಿತ್ಯ/ದೇವರನಾಮ, ವಚನ ಸಾಹಿತ್ಯ, ಭಾವ ಗೀತೆ, ಜಾನಪದ ಗೀತೆ ಇತ್ಯಾದಿ.) ನೃತ್ಯ, ವಾದ್ಯಗೋಷ್ಠಿ (ತಬಲ ಹಾಗು ಹಾರ್ಮೋನಿಯಮ್)ನ ತರಬೇತಿ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರಿಕೆ.
ಅಲ್ಲದೆ, ಗೌರಿ ಗಣೇಶ ಹಬ್ಬದ ಪ್ರಯುಕ್ತ ಕರ್ನಾಟಕದಿಂದ ಆಗಮಿಸಿರುವ ಕಲಾವಿದ ಹಾಗು ಸಂಗೀತ ನಿರ್ದೇಶಕ ಗಣೇಶ್ ದೇಸಾಯೀ ಅವರ "ಸುಗಮ ಸಂಗೀತ ಸಂಜೆ" ಕಾರ್ಯಕ್ರಮವನ್ನು ಶನಿವಾರ ಸೆಪ್ಟೆಂಬರ್ 5ರಂದು ಸಂಜೆ 6ರಿಂದ 8ರವರೆಗೆ ಏರ್ಪಡಿಸಲಾಗಿದೆ.
ಕಾರ್ಯಕ್ರಮ ವಿವರ:
ಸೆಪ್ಟೆಂಬರ್ 2, 3 ಹಾಗು 4 : ಉಚಿತ ಸುಗಮ ಸಂಗೀತ ನೃತ್ಯ, ವಾದ್ಯ ಗೋಷ್ಠಿ ಶಿಬಿರ
ಸಮಯ : ಸಂಜೆ 4ರಿಂದ 6 ಗಂಟೆ
ಸ್ಥಳ : ವೇವ್ ಜ್ ಅಕಾಡೆಮಿ, ವಸಂತಾ ಶಶಿಯವರಮನೆ
ಶಿಕ್ಷಕರು : ಗಣೇಶ್ ದೇಸಾಯೀ ಹಾಗು ನಮಿತ ದೇಸಾಯೀ
ಶನಿವಾರ ಸೆಪ್ಟೆಂಬರ್ 5 : ಸುಗಮ ಸಂಗೀತ ಸಂಜೆ
ಸಮಯ : ಸಂಜೆ 6 ರಿಂದ 8 ಗಂಟೆ
ಕಲಾವಿದರು : ಕರ್ನಾಟಕದ ಸಂಗೀತದ ವಿದ್ವಾನ್ ಹಾಗು ಸಂಗೀತ ನಿರ್ದೇಶಕ ಗಣೇಶ್ ದೇಸಾಯೀ ಮತ್ತು ನ್ಯೂಜೆರ್ಸಿ ಗಾನ ಕೋಗಿಲೆ ವಸಂತಾ ಶಶಿ ಅವರಿಂದ
ಸ್ಥಳ : ಶಶಿಯವರ ಮನೆಯ ದೇವರಗುಡಿಯಂಗಳ
ಹಬ್ಬದೂಟ : ಪಾಟ್ ಲಕ್ ಡಿನ್ನರ್ ರಾತ್ರಿ 8.30
ಇಲ್ಲಿ ಸೂಚಿಸಿರುವ ಎರಡು ಕಾರ್ಯಕ್ರಮಕ್ಕೂ ಅರ್.ಎಸ್.ವಿ. ಪಿ. ಕಳಿಸಿ. ಇಮೇಲ್([email protected]) ಅಥವಾ ದೂರವಾಣಿ ಸಂಖ್ಯೆ (732 447 3894. ಹೆಚ್ಚಿನ ಮಾಹಿತಿಗೆ, ಇಲ್ಲಿ ಸಂಪರ್ಕಿಸಿ: http://www.wavez-music.com/contact/whatsnew.html












Click it and Unblock the Notifications