ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಎಸ್ಎಸ್ ದೇಗುಳದಲ್ಲಿ ವಿಗ್ರಹ ಪ್ರತಿಷ್ಠಾಪನೆ

By Staff
|
Google Oneindia Kannada News

Idols Installation and Spiritual Discourse by Suttur Sri
ವಾಷಿಂಗ್ಟನ್ ಡಿಸಿ, ಜು. 8: ಮೇರಿಲ್ಯಾಂಡಿನ ಗೈಥಸ್ ಬರ್ಗ್ ನಲ್ಲಿರುವ ಜೆಎಸ್ಎಸ್ ಸ್ಪಿರಿಚ್ಯುಯಲ್ ಮಿಶನ್ ದೇಗುಳದಲ್ಲಿ ಜುಲೈ 10ರಿಂದ ಮೂರು ದಿವಸಗಳ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಜರುಗಲಿದೆ.

ಮೈಸೂರಿನ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಲಾಗಿದೆ. ಮೂರೂ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಿಗ್ರಹ ಪ್ರತಿಷ್ಠಾಪನೆಯಲ್ಲದೆ ತನ್ನಿಮಿತ್ತ ಆಧ್ಯಾತ್ಮ ಕುರಿತ ಪ್ರವಚನಗಳನ್ನು ಏರ್ಪಡಿಸಲಾಗಿದೆ. ಇದೇ ವೇಳೆ ಜೆಎಸ್ಎಸ್ ಮಹಾವಿದ್ಯಾಪೀಠ inc ಉದ್ಘಾಟನೆ ಆಗಲಿದೆ. ವಿಳಾಸ : ಜೆಎಸ್ಎಸ್ ಸ್ಪಿರಿಚ್ಯುಯಲ್ ಮಿಶನ್, 7710 ಹಾಕಿನ್ಸ್ ಕ್ರೀಮರಿ ರಸ್ತೆ, ಗೈಥಸ್ ಬರ್ಗ್, ಎಂಡಿ 20882.

ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಅನೇಕ ಧಾರ್ಮಿಕ ಮುಖಂಡರು, ಮಠಾಧೀಶರು ಮತ್ತಿತರ ಗಣ್ಯ ವ್ಯಕ್ತಿಗಳನ್ನು ಆಮಂತ್ರಿಸಲಾಗಿದೆ. ಮೇರಿಲ್ಯಾಂಡಿನ ಗವರ್ನರ್, ಭಾರತದ ರಾಯಭಾರಿಗಳು, ಶ್ರೀ ಸಿದ್ದೇಶ್ವರ ಸ್ವಾಮಿ ಜ್ಞಾನಯೋಗಾಶ್ರಮ ವಿಜಾಪುರ, ಗಣಪತಿ ಸಚ್ಚಿದಾನಂದ ಸ್ವಾಮಿ ಮೈಸೂರು, ಶಿವಮೂರ್ತಿ ಶಿವಾಚಾರ್ಯ ಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಸಂಜೆ ವೇಳೆ ಅನೇಕಾನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿರುತ್ತದೆ. ವಸುಂಧರಾ ದೊರೆಸ್ವಾಮಿ ಅವರಿಂದ ನಾಟ್ಯ ಪ್ರದರ್ಶನ ಮತ್ತು ಮೈಸೂರು ಮಂಜುನಾಥ್ ಅವರ ವಯೋಲಿನ್ ವಾದನದ ಜತೆಗೆ ಸ್ಥಳೀಯ ಪ್ರತಿಭೆಗಳ ಪ್ರತಿಭಾ ಪ್ರದರ್ಶನ ಇರುತ್ತದೆ. ಭಕ್ತಾದಿಗಳಿಗೆ ಉಚಿತ ಪ್ರವೇಶ ಇದೆ. ಮೂರೂ ದಿನಗಳ ಕಾಲ ಭಕ್ತವೃಂದಕ್ಕೆ ಮಧ್ಯಾನ್ಹ ಮತ್ತು ರಾತ್ರಿ ಊಟೋಪಚಾರಗಳು ಇರುತ್ತವೆ.

ಹೆಚ್ಚಿನ ವಿವರಗಳನ್ನು ಬಯಸುವವರು ವೆಬ್ ನೋಡಿ http://www.jssmission.org ಅಥವಾ ದೂರವಾಣಿ ಕರೆಮಾಡಿ (301) 414 0144

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X