152978ಸಿಂಗಪುರನೆನಪಿನ ತರಂಗಾಂತರಗಳು!/nri/article/2009/0121-a-walk-down-radio-memory-lane.htmlರೇಡಿಯೋ ಎಂದಾಕ್ಷಣ ಹಿಂದಿನ ಪೀಳಿಗೆಯ ಮಂದಿಯ ಕಂಗಳು ಅರಳಿ ಇಷ್ಟಗಲವಾಗುತ್ತವೆ. ರೇಡಿಯೋ ಶಬ್ದವೊಂದೇ ಸಾಕು ತರಂಗಾತರಗಳ ಅಲೆಅಲೆಯ ಮೇಲೆ ತೇಲಿಸಿಕೊಂಡು ಹೋಗಿ ಹಳೆಯ ನೆನಪುಗಳ ಲೋಕಕ್ಕೆ ಕರೆದೊಯ್ಯಲು. ಎಫ್ಎಂ, ಟೀವಿ ಇಲ್ಲದ ಕಾಲದಲ್ಲಿ ಎಲ್ಲರ ಅಚ್ಚುಮೆಚ್ಚಿನ ಸಂಗಾತಿಯಾಗಿದ್ದ ಆ ಪೆಟ್ಟಿಗೆ ನಿಮ್ಮ ಅಟ್ಟದ ಮೇಲಿದ್ದರೆ ಥಟ್ಟನೆ ಒಮ್ಮೆ ಹೋಗಿ ನೋಡಿ, ನೆನಪುಗಳ ತರಂಗಗಳು ಏಳದಿದ್ದರೆ ಕೇಳಿ!* ಗಿರೀಶ್ 34201http://kannada.oneindia.com/img/2009/01/21-radio1.jpg152978ಸಿಂಗಪುರಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ/nri/article/2009/0131-yakshagana-puppet-show-in-singapore.htmlಜನವರಿ 10ನೇ ತಾರೀಖಿನಂದು ಮೊಟ್ಟ ಮೊದಲ ಬಾರಿಗೆ ಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಕನ್ನಡ ಸಂಘ(ಸಿಂಗಪುರ)ವು ತನ್ನ ಇತಿಹಾಸದ ಪುಟಗಳಲ್ಲಿ ಇನ್ನೊಂದು ಸಾಧನೆಯ ಮೈಲಿಗಲ್ಲನ್ನು ತಲುಪಿತು. ಕನ್ನಡ ಸಂಘವು ಇದೇ ಮೊದಲ ಬಾರಿಗೆ 12 ಮಂದಿ ಅನುಭವಿ ವೃತ್ತಿನಿರತ ಜನಪದ ಕಲಾವಿದರ ತಂಡವನ್ನು ಕರೆಸಿ ಇಂತಹ ಬೃಹತ್ ಪ್ರಮಾಣದ ಕಾರ್ಯಕ್ರಮವನ್ನು ಸಿಂಗಪುರದ ಡಿ.ಬಿ.ಎಸ್. 34394http://kannada.oneindia.com/img/2009/01/31-sing-yaksha-puppet1.jpg152978ಸಿಂಗಪುರಪುರಂದರ ದಾಸರಿಗೆ ಸಿಂಗಪುರದಲ್ಲಿ ಸಂಗೀತ ನಮನ/nri/article/2009/0203-purandara-namana-in-singapore.htmlಏಳು ಸ್ವರವು ಸೇರಿ ಸಂಗೀತವಾಯಿತು ಎಂಬುದು ಎಲ್ಲರೂ ಅರಿತ ವಿಷಯ. ಈ ಸಪ್ತ ಸ್ವರಗಳ ಸುಮಧುರತೆಯನ್ನು ಸರಳೆ ವರಸೆ, ಜಂಟಿ ವರಸೆ, ದಾಟು ವರಸೆ, ಮೇಲುಸ್ಥಾಯಿ, ಅಲಂಕಾರಗಳೆಂದು ವಿಂಗಡಿಸಿ ಅದಕ್ಕೆ ವೇಗ, ಲಯ, ತಾಳ, ರಾಗ ಪದ್ಧತಿಗಳ ನಿಯಮಗಳನ್ನು ಅಳವಡಿಸಿ, ಕರ್ನಾಟಕ ಸಂಗೀತ ಕಲಿಕೆಯಲಿ ಪ್ರಥಮ ಪಾಠದ, ಮೊದಲ ಭದ್ರ ಬುನಾದಿ ಹಾಕಿದವರು ಪುರಂದರದಾಸರು. ಪುರಂದರದಾಸರು ದಕ್ಷಿಣಾದಿ 34444http://kannada.oneindia.com/img/2009/02/03-purandara4.jpg152978ಸಿಂಗಪುರಆಕಾಶದಲ್ಲಿ ಗೃಹ ತಾರೆಗಳ ಮೇಳ/nri/article/2009/0211-phenomena-in-space-vasanth-kulkarni.htmlಈ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಖಗೋಳ ವೀಕ್ಷಣೆಯಂತಹ ಉಪಯುಕ್ತ ಹವ್ಯಾಸಗಳನ್ನು ಹೇಳಿ ಕೊಡಲು ಅನೇಕ ಸಂಸ್ಥೆಗಳು, ಉಪಕರಣಗಳು ಇತ್ಯಾದಿಗಳ ಸೌಲಭ್ಯವಿದ್ದರೂ, ಮಕ್ಕಳಿಗೆ ಮತ್ತು ಪಾಲಕರಿಗೆ ಸಮಯದ ಆಭಾವವಿದೆ. ಅಲ್ಲದೇ ಸಧ್ಯದ ನಮ್ಮ ಪರೀಕ್ಷಾಕೇಂದ್ರಿತ ಶಿಕ್ಷಣವು ಇಂತಹ ಹವ್ಯಾಸಗಳಿಗೆ ಅಗತ್ಯವಾದ ಪ್ರೋತ್ಸಾಹ ನೀಡುವದಿಲ್ಲ. ಅದರಿಂದ ಮಕ್ಕಳ ಪಾಲಕರೇ ಇಂತಹ ವಿಷಯಗಳಲ್ಲಿ ಆಸಕ್ತಿ ತಳೆದು ಮಕ್ಕಳಿಗೆ ಕೂಡ ಆಸಕ್ತಿ ಹುಟ್ಟುವಂತೆ 34597http://kannada.oneindia.com/img/2009/02/11-solar-eclipse1.jpg152978ಸಿಂಗಪುರನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 3)/literature/articles/2009/0408-doll-history-culture-and-lifestyle-part3.htmlನಾವ್ ಮನುಜರಾಡುವಾ ಬೊಂಬೆಯಾಟವಯ್ಯಾ...ಇದು ಭಾರತದಲ್ಲೇ ಅಲ್ಲ ದಕ್ಷಿಣ ಆಫ್ರಿಕೆಯಲಿ ಮೊದಲ ಮಗುವಾದ ತಕ್ಷಣ ತಾಯಿ ಒಂದು ಗೊಂಬೆ ಅದರ ಪಕ್ಕ ಇಡುತ್ತಾಳೆ. ನಂತರ ಇನ್ನೊಂದು ಮಗುವಾದಾಗ ಮೊದಲ ಮಗುವಿನ ಗೊಂಬೆ ಎರಡನೆಯ ಮಗುವಿಗೆ ಬಳುವಳಿ. ಮತ್ತೊಂದು ಹೊಸ ಗೊಂಬೆ ಮೊದಲ ಮಗುವಿಗೆ. ಸಿರಿಯಾದಲ್ಲಿ ಮದುವೆಯ ವಯಸ್ಸಿನ ಹುಡುಗಿಯಿದ್ದರೆ ಮನೆಯ ಕಿಟಕಿಯ ಬಾಗಿಲುಗಳಲ್ಲಿ ಗೊಂಬೆ ನೇತು ಹಾಕುವ 35829http://kannada.oneindia.com/img/2009/04/08-barbie1.jpg151563ಯಕ್ಷಗಾನಫ್ರೆಂಚರನ್ನು ಬೆಚ್ಚಗಾಗಿಸಿದ ಲಂಡನ್ ಕನ್ನಡಿಗರ ಯಕ್ಷಗಾನ/nri/article/2009/0109-yakshagana-france-parade.htmlಕಳೆದ ವರ್ಷ ಜನವರಿ 1ರಂದು ಲಂಡನ್ನಿನ ರಾಜಬೀದಿಗಳಲ್ಲಿ ಕನ್ನಡ ಸಂಸ್ಕೃತಿಯ ಪ್ರತೀಕವಾಗಿರುವ ಯಕ್ಷಗಾನವನ್ನು ಪ್ರದರ್ಶಿಸಿ ಆಂಗ್ಲರ ಮೈಮನ ಬೆಚ್ಚಗಾಗಿಸಿದ್ದ ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡಿಗರು (www.yakshaland.com ಸದಸ್ಯರು) ಡಿಸೆಂಬರ್ 31ರಂದು ಫ್ರಾನ್ಸಿಗೆ ಪಯಣಿಸಿ ಫ್ರೆಂಚರಿಗೆ ಯಕ್ಷಗಾನದ ಸವಿರುಚಿಯನ್ನು ಉಣಬಡಿಸಿದರು.ತಾಪಮಾನ 3 ಡಿಗ್ರಿ ಇದ್ದರೂ ಚಳಿಯನ್ನು ಲೆಕ್ಕಿಸದೆ ಲಂಡನ್ನಿನಿಂದ ನಾಲ್ಕು ಗಂಟೆ ಪ್ರಯಾಣ ಮಾಡಿ, ಇಂಗ್ಲಿಷ್ ಕಾಲುವೆಯನ್ನು ಹಡಗಿನಲ್ಲಿ ದಾಟಿ 33993http://kannada.oneindia.com/img/2009/01/09-yakshaland2.jpg151563ಯಕ್ಷಗಾನಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ/nri/article/2009/0131-yakshagana-puppet-show-in-singapore.htmlಜನವರಿ 10ನೇ ತಾರೀಖಿನಂದು ಮೊಟ್ಟ ಮೊದಲ ಬಾರಿಗೆ ಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಕನ್ನಡ ಸಂಘ(ಸಿಂಗಪುರ)ವು ತನ್ನ ಇತಿಹಾಸದ ಪುಟಗಳಲ್ಲಿ ಇನ್ನೊಂದು ಸಾಧನೆಯ ಮೈಲಿಗಲ್ಲನ್ನು ತಲುಪಿತು. ಕನ್ನಡ ಸಂಘವು ಇದೇ ಮೊದಲ ಬಾರಿಗೆ 12 ಮಂದಿ ಅನುಭವಿ ವೃತ್ತಿನಿರತ ಜನಪದ ಕಲಾವಿದರ ತಂಡವನ್ನು ಕರೆಸಿ ಇಂತಹ ಬೃಹತ್ ಪ್ರಮಾಣದ ಕಾರ್ಯಕ್ರಮವನ್ನು ಸಿಂಗಪುರದ ಡಿ.ಬಿ.ಎಸ್. 34394http://kannada.oneindia.com/img/2009/01/31-sing-yaksha-puppet1.jpg151563ಯಕ್ಷಗಾನಯಕ್ಷ ಕಲಾವಿದ ಕೆರೆಮನೆ ಶಂಭುಹೆಗಡೆ ಅಸ್ತಂಗತ/news/2009/02/03/yakshagana-artist-keremane-shambhu-hegde-demise.htmlಬೆಂಗಳೂರು, ಫೆ.2: ಖ್ಯಾತ ಯಕ್ಷಗಾನ ಕಲಾವಿದ, ಅಕಾಡೆಮಿ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ ಇಂದು ಮುಂಜಾನೆ ಸುಮಾರು 4:30 ಗಂಟೆಗೆ ನಿಧನರಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಗುಣವಂತೆಯ ಇಡುಗುಂಜಿ ಮೇಳದಲ್ಲಿ ಸಂಭ್ರಮದಿಂದ ಪಾಲ್ಗೊಂಡು ಲವ-ಕುಶ ಪ್ರಸಂಗಕ್ಕಾಗಿ ತಮ್ಮ ಮೆಚ್ಚಿನ ರಾಮನ ವೇಷ ಧರಿಸಿ ರಂಗವೇರಿದ್ದ ಶಂಭು ಹೆಗ್ಗಡೆ ಹೃದಯಾಘಾತಕ್ಕೆ ಒಳಗಾಗಿ ಅಸುನೀಗಿದರು ಎಂದು ಕುಟುಂಬದರು ತಿಳಿಸಿದ್ದಾರೆ.ಬಡಗುತಿಟ್ಟಿನ 34426http://kannada.oneindia.com/img/2009/02/03-keremane-shambhu-sridhar-he.jpg151563ಯಕ್ಷಗಾನಮಹಿಳೆಯರಿ೦ದ ಯಶಸ್ವೀ ತಾಳಮದ್ದಲೆ ಸಪ್ತಾಹ/literature/articles/2009/0819-yakshagana-talamaddale-by-women-part2.html(ಮುಂದುವರಿದಿದೆ...)ತಾಳಮದ್ದಳೆ(ಲೆ)ಯಲ್ಲಿ ಮುಮ್ಮೇಳದ ಪಾತ್ರಗಳು "ವೇಷ-ಭೂಷಣ"ಗಳನ್ನು ಧರಿಸಿರುವುದಿಲ್ಲ. ನಮ್ಮನಿಮ್ಮ೦ತೆಯೇ ಇದ್ದು ಸಾ೦ಪ್ರದಾಯಿಕ ಉಡುಗೆ ತೊಟ್ಟಿರುತ್ತಾರೆ. ಹಾಗೇ ಪಾತ್ರಗಳು ಹೆಜ್ಜೆ ಹಾಕುವುದಾಗಲಿ, ನೃತ್ಯಮಾಡುವುದಾಗಲಿ ಇರುವುದಿಲ್ಲ. ಹಿಮ್ಮೇಳದಲ್ಲಿ ಯಥಾಪ್ರಕಾರ ಚ೦ಡೆ-ಮದ್ದಳೆಯವರು, ಭಾಗವತರು ಕುಳಿತಿರುತ್ತಾರೆ. ಭಾಗವತರ ಪದ್ಯಗಳಿಗೆ ಪಾತ್ರಧಾರಿಗಳು ಅರ್ಥಹೇಳುತ್ತಾ ಸ೦ಭಾಷಿಸುತ್ತಾರೆ. ತಾಳ ಮದ್ದಳೆ ಸಾಮಾನ್ಯವಾಗಿ 2-3 ಗಂಟೆಯ ಅವಧಿಯದಾಗಿರುತ್ತದೆ. ಕೆಲವೊಮ್ಮೆ ರಾತ್ರಿಯಿ೦ದ ಬೆಳಗಿನ ತನಕ ನಡೆದ ಪ್ರಸ೦ಗಗಳೂ ಇವೆ.ಇದಕ್ಕೆ ಸರ್ವಸಜ್ಜಿತ ರ೦ಗಸ್ಥಳದ 38727http://kannada.oneindia.com/img/2009/08/19-talamaddale2.jpg151563ಯಕ್ಷಗಾನಗಂಡಸರ ಕಲೆ ತಾಳಮದ್ದಳೆ ಹೆಂಗಳೆಯರ ಕೈವಶ/literature/articles/2009/0819-yakshagana-talamaddale-by-women.htmlನೀವು "ಯಕ್ಷಗಾನ"ವನ್ನು ನೋಡಿರಲೇಬೇಕು. ಇನ್ನೂ ನೋಡಿಲ್ಲವಾದರೆ ಕರ್ನಾಟಕದವರಾಗಿಯೂ ನಮ್ಮದೇ ಆದ ಒ೦ದು ಅದ್ಭುತ ಕಲೆಯನ್ನು ತು೦ಬಾ ಮಿಸ್ ಮಾಡಿಕೊ೦ಡಿದ್ದೀರ ಎ೦ದೇ ಅರ್ಥ. ಪ್ರತಿಯೊ೦ದು ಕಲೆಗೂ ಅದರದೇ ಆದ ವೈಶಿಷ್ಟತೆ ಇದೆ. ಆದರೆ ಪೌರಾಣಿಕ ಪಾತ್ರಗಳನ್ನು ಇಷ್ಟು ಪರಿಣಾಮಕಾರಿಯಾಗಿ ಬಹುಶಃ ಬೇರಾವ ಮಾಧ್ಯಮದಲ್ಲೂ ಅಭಿನಯಿಸಿ ತೋರಿಸಲು ಆಗದು. ಕೇರಳಕ್ಕೆ ಮೋಹಿನಿಆಟ್ಟ೦, ತಮಿಳರಿಗೆ ಕುಚುಪುಡಿ/ಭರತ ನಾಟ್ಯಮ್, ಒರಿಯಾದವರಿಗೆ ಕಥಕ್ಕಳಿ, ಪ೦ಜಾಬಿಗಳಿಗೆ 38728http://kannada.oneindia.com/img/2009/08/19-talamaddale2.jpg99731ಕರ್ನಾಟಕಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ/column/gv/2008/1227-vk-gokak-birth-centenary-memoirs-part2.htmlಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ 33727http://kannada.oneindia.com/img/2008/12/27-vk-gokak-bendre1.jpg99731ಕರ್ನಾಟಕಬಿಜೆಪಿಗೆ ನಿಮ್ಮ ಐಡಿಯಾ ಬೇಕಂತೆ/news/2009/01/07/your-idea-can-change-karnataka-appeal-bjp.htmlಭಾರತೀಯ ಜನತಾಪಕ್ಷ ಕರ್ನಾಟಕ ಘಟಕದ ವತಿಯಿಂದ ನಮ್ಮ ವೆಬ್ ಜಾಲಕ್ಕೆ ಬಂದಿರುವ ಒಂದು ಮನವಿಯನ್ನು ಇಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕದ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಭಾಜಪ ನೀಡಿರುವ ಈ ಕರೆಗೆ ನಮ್ಮ ಓದುಗರು ಸ್ಪಂದಿಸುತ್ತಾರೆ ಎಂಬ ನಿರೀಕ್ಷೆ ನಮ್ಮದು. ರಾಜ್ಯದ ಏಳಿಗೆಗೆ ನಿಮ್ಮದೊಂದು ಐಡಿಯಾ ಕೊಡಿ ಎಂದು ಕೇಳಿದರೆ ವಲ್ಲೆ ಎಂದು ಯಾರು ಹೇಳುತ್ತಾರೆ!- ಸಂಪಾದಕ***ಕರ್ನಾಟಕದ ಅಭಿವೃದ್ಧಿಗಾಗಿ 33949http://kannada.oneindia.com/img/2009/01/07-cm-sadanandagowda.jpg99731ಕರ್ನಾಟಕಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 3)/column/gv/2009/0117-vinayaka-krishna-gokak-part3.htmlಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಮಾಡಿ ಭಾರತಕ್ಕೆ ಮರಳಿದ ವಿನಾಯಕ ಕೃಷ್ಣ ಗೋಕಾಕ್ ಅವರು ಮಾಡಿಕೊಂಡ ದೊಡ್ಡ ಆಸ್ತಿಯೆಂದರೆ ಅಪಾರ ಶಿಷ್ಯವೃಂದ. ಹೇಮಂತ ಕುಲಕರ್ಣಿ, ಸುಬ್ಬಣ್ಣ ಎಕ್ಕುಂಡಿ, ವಿ.ಜಿ.ಭಟ್ಟ, ಗಾಂಗಾಧರ ಚಿತ್ತಾಲ ಮೊದಲಾದ ಖ್ಯಾತ ಲೇಖಕರು ಗೋಕಾಕರ ಗರಡಿಯಲ್ಲಿ ಪಳಗಿದವರೇ.* ಡಾ|ಜೀವಿ ಕುಲಕರ್ಣಿಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆಂಗ್ಲಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ.(ಆಗ್ಝನ್) ಡಿಗ್ರಿ ಪಡೆದು ವಿಕ್ರಮ ಸಾಧಿಸಿದ ಗೋಕಾಕರು 34120http://kannada.oneindia.com/img/2009/01/17-vk-gokak3e.jpg99731ಕರ್ನಾಟಕಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 4)/column/gv/2009/0124-vinayaka-krishna-gokak-part4.htmlಮಹರ್ಷಿ ಶ್ರೀ ಅರವಿಂದರ ಕೃತಿಗಳನ್ನು ಅರಗಿಸಿ ಕುಡಿದು ತಮ್ಮ ಜೀವನದಲ್ಲಿ ಹಾಗೂ ಸಾಹಿತ್ಯದಲ್ಲಿ ಅದರ ಬೆಳಕನ್ನು ಹರಡಿದ ಕೆಲವೇ ಶ್ರೇಷ್ಠ ಸಾಹಿತಿಗಳಲ್ಲಿ ಗೋಕಾಕರೂ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕರ ಜನ್ಮಶತಮಾನೋತ್ಸವ ನಿಮಿತ್ತ ಲೇಖನ ಸರಣಿ ಮುಂದುವರಿಯುತ್ತಿದೆ.* ಡಾ|ಜೀವಿ ಕುಲಕರ್ಣಿ1947ರಲ್ಲಿ ಭಾರತಕ್ಕೆ ಸ್ವಾತಂತ್ಯ ದೊರೆತ ನಂತರ ಬರೋಡಾ ಸಂಸ್ಥಾನ ಭಾರತ ಸರಕಾರದಲ್ಲಿ 34269http://kannada.oneindia.com/img/2009/01/24-vk-gokak4.jpg99731ಕರ್ನಾಟಕಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ/nri/article/2009/0131-yakshagana-puppet-show-in-singapore.htmlಜನವರಿ 10ನೇ ತಾರೀಖಿನಂದು ಮೊಟ್ಟ ಮೊದಲ ಬಾರಿಗೆ ಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಕನ್ನಡ ಸಂಘ(ಸಿಂಗಪುರ)ವು ತನ್ನ ಇತಿಹಾಸದ ಪುಟಗಳಲ್ಲಿ ಇನ್ನೊಂದು ಸಾಧನೆಯ ಮೈಲಿಗಲ್ಲನ್ನು ತಲುಪಿತು. ಕನ್ನಡ ಸಂಘವು ಇದೇ ಮೊದಲ ಬಾರಿಗೆ 12 ಮಂದಿ ಅನುಭವಿ ವೃತ್ತಿನಿರತ ಜನಪದ ಕಲಾವಿದರ ತಂಡವನ್ನು ಕರೆಸಿ ಇಂತಹ ಬೃಹತ್ ಪ್ರಮಾಣದ ಕಾರ್ಯಕ್ರಮವನ್ನು ಸಿಂಗಪುರದ ಡಿ.ಬಿ.ಎಸ್. 34394http://kannada.oneindia.com/img/2009/01/31-sing-yaksha-puppet1.jpgnews"> ಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ | Yakshagana puppet show in Singapore - ಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ - Kannada Oneindia

ಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ

Yakshagana puppet show in Singapore
ಜನವರಿ 10ನೇ ತಾರೀಖಿನಂದು ಮೊಟ್ಟ ಮೊದಲ ಬಾರಿಗೆ ಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಕನ್ನಡ ಸಂಘ(ಸಿಂಗಪುರ)ವು ತನ್ನ ಇತಿಹಾಸದ ಪುಟಗಳಲ್ಲಿ ಇನ್ನೊಂದು ಸಾಧನೆಯ ಮೈಲಿಗಲ್ಲನ್ನು ತಲುಪಿತು. ಕನ್ನಡ ಸಂಘವು ಇದೇ ಮೊದಲ ಬಾರಿಗೆ 12 ಮಂದಿ ಅನುಭವಿ ವೃತ್ತಿನಿರತ ಜನಪದ ಕಲಾವಿದರ ತಂಡವನ್ನು ಕರೆಸಿ ಇಂತಹ ಬೃಹತ್ ಪ್ರಮಾಣದ ಕಾರ್ಯಕ್ರಮವನ್ನು ಸಿಂಗಪುರದ ಡಿ.ಬಿ.ಎಸ್. ಸಭಾಂಗಣದಲ್ಲಿ ಏರ್ಪಡಿಸಿತ್ತು. ದಕ್ಷಿಣ ಕನ್ನಡದ 'ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಮಂಡಳಿ'ಯವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಪ್ರದರ್ಶನ ನೀಡುತ್ತಿರುವ ಈ ತಂಡವು ನೃತ್ಯ, ಸಂಗೀತ, ಸಂಭಾಷಣೆಗಳನ್ನೊಳಗೊಂಡ, ಆದರೆ ನಶಿಸಿಹೋಗುತ್ತಿರುವ, ಈ ಜನಪದ ಕಲೆಯನ್ನು ಕಳೆದ ಆರು ತಲೆಮಾರುಗಳಿಂದ ಜೀವಂತವಾಗಿಡಲು ಅವಿರತವಾಗಿ ಶ್ರಮಿಸುತ್ತಿದೆ. ಆಕರ್ಷಣೀಯವಾದ ಸೂತ್ರದ ಗೊಂಬೆಗಳ ಈ ಆಟ ತಾಂತ್ರಿಕತೆಯಲ್ಲೂ ಹಾಗೂ ಅಂಶಗಳಲ್ಲೂ ಯಕ್ಷಗಾನ ಬಯಲಾಟದ ಎಲ್ಲ ನಿಯಮಗಳನ್ನೂ ಚಾಚೂ ತಪ್ಪದೆ ಪರಿಪಾಲಿಸುತ್ತದೆ. ಮರದ ಗೊಂಬೆಗಳಿಗೆ ಜೀವಕಳೆ ತುಂಬುವ ಈ ಕಲೆಯನ್ನು ನೋಡುವಾಗ ಕೆಲವೊಮ್ಮೆ ಇದು ಜೀವರಹಿತ ಗೊಂಬೆಗಳ ಕುಣಿತವೋ ಇಲ್ಲವೇ ನಿಪುಣ ಕಲಾವಿದರ ಗಂಭೀರ ಪ್ರದರ್ಶನವೋ ಎಂಬ ಸಂದೇಹ ಸಹಜವಾಗಿ ಮೂಡುತ್ತದೆ.

ಸಾಂಪ್ರದಾಯಿಕವಾದ, ವರ್ಣರಂಜಿತ ಗೊಂಬೆಗಳ ಕುಣಿತಕ್ಕೆ ಬೇಕಾದ ಎಲ್ಲ ಸಲಕರಣೆಗಳನ್ನು ಭಾರತದಿಂದ ತಮ್ಮ ಜೊತೆ ತಂದಿದ್ದ ಈ ನಿಪುಣ ಕಲಾವಿದರು ವಿಶಿಷ್ಟವಾದ ಕಿರುವೇದಿಕೆಯನ್ನು ಬಹಳ ಬೇಗ ಕಟ್ಟಿ ಅದನ್ನು ಸುಂದರ ದೀಪಗಳಿಂದ ಅಲಂಕರಿಸಿದ್ದರು. ನೆರೆದಿದ್ದ ಕನ್ನಡೇತರ ಕಲಾಸಕ್ತರನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮವನ್ನು ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಆಯೋಜಿಸಲಾಗಿತ್ತು. ಕುಮಾರಿ ಧ್ಯುತಿ ರಾಮದಾಸ್ ಹಾಗೂ ಕುಮಾರ ನಿಶಾಂತ್ ಹಾರಿಮನೆಯವರು ಈ ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸಿಕೊಟ್ಟರು. ಕುಮಾರಿ ಸೂಕ್ತಿ ಭಟ್ ಹಾಗು ಕುಮಾರಿ ನಿಧಿ ಹೆಗ್ಡೆಯವರು ಹಾಡಿದ ಇಂಪಾದ ಪ್ರಾರ್ಥನೆಯಿಂದ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ರಾಮದಾಸ್ ಅವರು ಕಲಾವಿದರನ್ನು ಹಾಗೂ ಪ್ರೇಕ್ಷಕರನ್ನು ಸ್ವಾಗತಿಸಿದರೆ, ಸಂಘದ ಕಾರ್ಯಕಾರೀ ಸಮಿತಿಯ ಸದಸ್ಯ ಪ್ರಕಾಶ್ ಹಂದೆಯವರು ಈ ಕಲೆಯ ಬಗ್ಗೆ, ಕಲಾವಿದರ ಬಗ್ಗೆ ಹಾಗೂ ಆಡಲು ಆಯ್ದುಕೊಂಡ ಪ್ರಸಂಗದ ಬಗ್ಗೆ ಕಿರುಪರಿಚಯ ನೀಡಿದರು.

ನೆರೆದಿದ್ದ ಪ್ರೇಕ್ಷಕರಲ್ಲಿ ಕೆಲವರಿಗೆ ಗೊಂಬೆಗಳ ಪರಿಕಲ್ಪನೆಯಿದ್ದರೆ ಕೆಲವರಿಗೆ ಯಕ್ಷಗಾನದ ಪರಿಚಯವಿತ್ತು. ಆದರೆ ಸರಿ ಸುಮಾರು 18 ಇಂಚುಗಳಷ್ಟು ಎತ್ತರದ ಮರದ ಗೊಂಬೆಗಳ ಮೂಲಕ ಸೂತ್ರದಾರರು ಯಕ್ಷಗಾನದಂತಹ ಸಂಕೀರ್ಣ ಕಲೆಯನ್ನು ನೈಜವಾಗಿ ಪ್ರಸ್ತುತ ಪಡಿಸಬಲ್ಲರೆಂಬುದು ಬಹುತೇಕ ಮಂದಿಗೆ ಊಹಾತೀತವಾಗಿತ್ತು ಹಾಗೂ ಎಲ್ಲರ ಕುತೂಹಲಭರಿತ ಕಣ್ಣುಗಳು ಕಿರುವೇದಿಕೆಯ ಮೇಲೆ ಕೇಂದ್ರೀಕೃತವಾಗಿತ್ತು. ಸರಿಸುಮಾರು ಆರು ಘಂಟೆಗೆ ಕಿರುಪರದೆ ಸರಿದಾಗ; ಹಿನ್ನೆಲೆಯಲ್ಲಿ ಚಂಡೆ, ಮದ್ದಲೆ, ಹಾರ್ಮೋನಿಯಮ್‌ಗಳ ಮಧುರ ನಿನಾದ ಹೊರಹೊಮ್ಮಿದಾಗ ಸಭಾಂಗಣದಲ್ಲಿ ಬಡಗತಿಟ್ಟು ಶೈಲಿಯ ಯಕ್ಷಗಾನದ ಕಳೆ ಕಟ್ಟಿತ್ತು.

ರಾಮಾಯಣದಿಂದ ಆಯ್ದುಕೊಂಡ ಚೂಡಾಮಣಿ / ಲಂಕಾದಹನ ಕಾರ್ಯಕ್ರಮವು ಗಣೇಶನ ಪೂಜೆಯೊಂದಿಗೆ ಆರಂಭವಾಯಿತು. ಇಲ್ಲಿಂದ ಮುಂದೆ ಸುಮಾರು 90 ನಿಮಿಷಗಳ ಕಾಲ 16 ಅಂಕಗಳಲ್ಲಿ, ವಿರಾಮವಿಲ್ಲದೆ ಪ್ರದರ್ಶಿತವಾದ ಈ ಗೊಂಬೆಯಾಟವು ನೆರೆದ ಹಿರಿಯ-ಕಿರಿಯರೆಲ್ಲರನ್ನೂ ತಮ್ಮ ಆಸನಗಳಿಂದ ಒಂದಿನಿತೂ ಅಲುಗಬಿಡದೆ ಅವರನ್ನು ಗೊಂಬೆಗಳ ಮಾಯಾನಗರಿಗೆ ಕರೆದೊಯ್ದಿತ್ತು. ಹಿಮ್ಮೇಳದಲ್ಲಿ ಭಾಗವತ ಶಂಕರನಾರಾಯಣ ಶಾನುಭೋಗ ಅವರ ಸುಶ್ರಾವ್ಯ ಗಾಯನ ಹಾಗೂ ನಾರಾಯಣ ಬಿಲ್ಲವ ಮತ್ತು ರಾಮ ಬಳೆಗಾರ್ ಅವರ ಸಂಭಾಷಣೆ ಸೊಗಸಾಗಿ ಕೇಳುತ್ತಿದ್ದರೆ ಪರದೆಯ ಹಿಂದಿನಿಂದ ಸೂತ್ರದಾರರು ತಮ್ಮ ಕೈಚಳಕದಿಂದ ಬಣ್ಣದ ಗೊಂಬೆಗಳ ಮೂಲಕ ಯಕ್ಷಗಾನದ ಕಲೆಯನ್ನು; ಎಲ್ಲ ಹಾವ-ಭಾವ, ಚಲನೆಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ಲಿಂಗದಿಂದ ಹೊರಬಂದು ದರ್ಶನವನ್ನಿತ್ತ ಶಿವ, ಲಂಕೆಗೆ ಹಾರಿದ ಹನುಮಂತ, ಯುದ್ಧಕ್ಕೆ ಸಿದ್ದವಾದ ಸೈನ್ಯ ಮುಂತಾದ ಕೆಲವು ದೃಶ್ಯಗಳು ಅತ್ಯುತ್ತಮವಾಗಿ ಮೂಡಿಬಂದು ಪ್ರೇಕ್ಷಕರನ್ನು ಮೂಕವಿಸ್ಮಿತರಾಗಿಸಿ, ಚಪ್ಪಾಳೆ ಗಿಟ್ಟಿಸಿದವು.

ಯಕ್ಷಗಾನ ಮುಗಿಯುತ್ತಿದ್ದಂತೆ ಮುಖ್ಯ ಸೂತ್ರದಾರರಾದ ಭಾಸ್ಕರ್ ಕೊಗ್ಗ ಕಾಮತ್ ಹಾಗೂ ತಂಡದವರು ಪರದೆಯ ಮುಂದೆ ಬಂದು ಗೊಂಬೆಯಾಟದ ಕೈಚಳಕವನ್ನು, ದಾರಗಳ ಮೂಲಕ ಗೊಂಬೆಗಳನ್ನು ಕುಣಿಸುವ ತಂತ್ರವನ್ನು ಪ್ರೇಕ್ಷಕರಿಗೆ ಮಾಹಿತಿಯುಕ್ತವಾದ ವ್ಯಾಖ್ಯಾನ - ಪ್ರದರ್ಶನದ ಮೂಲಕ ಸರಳವಾಗಿ ವಿವರಿಸಿ ತೋರಿಸಿದರು. ತಂಡದ ನಾಯಕರಾದ ಡಾ|| ಲೀಲಾ ಉಪಾಧ್ಯಾಯ ಅವರು ಆಂಗ್ಲ ಭಾಷೆಯಲ್ಲಿ ವಿವರಣೆ ನೀಡಿದರು. ಈ ಕಲೆಯ ಹಲವು ನವೀನ ಆವಿಷ್ಕಾರಗಳಾದ ಮರದ ಹಾಗೂ ವಸ್ತ್ರದ ಗೊಂಬೆಗಳನ್ನು ಪ್ರದರ್ಶಿಸಲಾಯಿತು. ನವಯುಗದ ಜೇಡದ ಗೊಂಬೆ, ಯೋಗದ ಗೊಂಬೆ, ನೊಣದ ಗೊಂಬೆ, ಕಂಬಳಿ ಹುಳು ಗೊಂಬೆ, ಡಾಂಡಿಯಾ ಗೊಂಬೆ, ಜನಪದ ಗೊಂಬೆಗಳು ಜನಮನವನ್ನು ಸೂರೆಗೊಂಡವು. ಒಟ್ಟು ಸುಮಾರು 50 ಗೊಂಬೆಗಳನ್ನು ಈ ಕಾರ್ಯಕ್ರಮಕ್ಕೆ ಬಳಸಲಾಗಿತ್ತು. ಹೊಸವರ್ಷ ಹಾಗೂ ಸಂಕ್ರಾಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವು ಅತಿಥಿಗಳಿಗೆ ಕಿರುಕಾಣಿಕೆ ಹಾಗು ಸಂಘದ ಸಹಕಾರ್ಯದರ್ಶಿ ಅರ್ಚನಾ ಪ್ರಕಾಶ್ ಅವರಿಂದ ವಂದನಾರ್ಪಣೆಯೊಂದಿಗೆ ಕೊನೆಗೊಂಡಿತು. ಕಾರ್ಯಕ್ರಮದ ನಂತರ ಎಲ್ಲು ಬೆಲ್ಲ, ಗಣಪತಿ ಪ್ರಸಾದ ವಿತರಣೆ ಹಾಗೂ ಭೋಜನವನ್ನು ಕೊಂಡುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.

ಈ ಯಶಸ್ವೀ ಕಾರ್ಯಕ್ರಮದ ಮೂಲಕ ಕನ್ನಡ ಸಂಘ(ಸಿಂಗಪುರ)ವು ಆಯೋಜಿಸುವ ಕಾರ್ಯಕ್ರಮಗಳ ವೈವಿಧ್ಯತೆ ಮತ್ತು ಗುಣಮಟ್ಟವು ಇನ್ನೊಂದು ಮಟ್ಟಕ್ಕೆ ಮೇಲೇರಿತ್ತು. ಇಂತಹ ಅಪರೂಪದ ಕಲಾಪ್ರದರ್ಶನ ಸಿಂಗಪುರದಲ್ಲಿ ಸಾಧ್ಯವಾಗಿದ್ದು ಇನ್‌ಫೋಸಿಸ್ ಪ್ರತಿಷ್ಠಾನದ ಧರ್ಮದರ್ಶಿಗಳಾದ ಸುಧಾಮೂರ್ತಿಯವರ ಪ್ರೋತ್ಸಾಹ ಹಾಗೂ ಪ್ರಾಯೋಜಕತ್ವದಿಂದ ಮಾತ್ರ. ಸ್ಥಳೀಯವಾಗಿ ಕಾಮತ್ ರೆಸ್ಟೋರೆಂಟ್, ಎಚ್.ಡಿ.ಎಫ್.ಸಿ. ಸಿಂಗಪುರ ಹಾಗೂ ಡಿವೈನ್ ಸ್ಪಾರ್ಕ್, ಸಿಂಗಪುರ ಸಂಸ್ಥೆಗಳು ಈ ಕಾರ್ಯಕ್ರಮದ ಸಹ-ಪ್ರಾಯೋಜಕರಾಗಿದ್ದರು. ಸಂಘ-ಸಂಸ್ಥೆಗಳಿಂದ, ಕಲಾಪೋಷಕರಿಂದ ಹಾಗೂ ಕಲಾವಿದರ ಪರಿಶ್ರಮ ಇದೇರೀತಿ ಮುಂದುವರೆದರೆ ಚಲನಚಿತ್ರ, ದೂರದರ್ಶನಗಳಂತಹ ಪ್ರಭಾವಾಶಾಲೀ ಮಾಧ್ಯಮಗಳ ನಡುವೆಯೂ ಯಕ್ಷಗಾನ ಗೊಂಬೆಯಾಟ ಕಲೆ ಉಳಿದು, ಬೆಳೆಯುವುದರಲ್ಲಿ ಸಂಶಯವೇ ಇಲ್ಲ.

1996ರಲ್ಲಿ ನೋಂದಣಿಯಾಗಿ, ತನ್ನ ತಾರುಣ್ಯಕ್ಕೆ ಕಾಲಿದುತ್ತಿರುವ ಕನ್ನಡ ಸಂಘ (ಸಿಂಗಪುರ)ವು ಕಳೆದ ಹಲವಾರು ವರ್ಷಗಳಿಂದ ಸುಮಾರು ತಿಂಗಳಿಗೊಂದು ವೈವಿಧ್ಯಮಯ, ಉತ್ತಮ ಗುಣಮಟ್ಟದ ಕಾರ್ಯಕ್ರಮವನ್ನು ಅತೀ ಕಡಿಮೆ ದರದಲ್ಲಿ ನೀಡುತ್ತಾ ಬಂದಿದೆ. ಪ್ರವಾಸೀ ಭಾರತೀಯರು, ಸಿಂಗಪುರ ಹಾಗೂ ಮಲೇಶಿಯಾದ ಕನ್ನಡಿಗರು ಈ ಕಾರ್ಯಕ್ರಮಗಳನ್ನು ನೋಡಿ, ಆನಂದಿಸಿ, ಪ್ರೋತ್ಸಾಹಿಸುತ್ತಿದ್ದಾರೆ. ಹೊರನಾಡಿನಲ್ಲಿ, ತಮ್ಮ ದೈನಂದಿನ ಕಾರ್ಯ, ಚಟುವಟಿಕೆಗಳ ನಡುವೆಯೂ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸ್ವಯಂಸೇವಕರು ಪ್ರತಿ ದಿನ ಕೆಲವು ಘಂಟೆಗಳನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟು, ನಿಸ್ವಾರ್ಥಸೇವೆ ಸಲ್ಲಿಸುತ್ತಿದ್ದಾರೆ. ಜನಸಾಮಾನ್ಯರೆಲ್ಲರಿಗೂ ಕಲೆಯನ್ನು ಉಳಿಸಿ ಬೆಳೆಸುವ ತಮ್ಮ ಜವಾಬ್ದಾರಿಯು ಮನವರಿಕೆಯಾಗಿ, ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹ ದೊರೆತರೆ ಸಿಂಗಪುರ ಕನ್ನಡ ಸಂಘವು ಇನ್ನೂ ಉನ್ನತ ಗುರಿಯನ್ನು ಇಟ್ಟು, ಸಾಧಿಸಿ, ಇತರ ಕಲಾಪೋಷಕ ಸಂಘ-ಸಂಸ್ಥೆಗಳಿಗೆ ಮಾದರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+