ಪಾರ್ಥಸಾರಥಿಯವರಿಂದ ಅಡಿಲೇಡ್‌ನಲ್ಲಿ ಭಾಗವತ ಸಪ್ತಾಹ
ಖ್ಯಾತ ಹರಿದಾಸ ಸಾಹಿತ್ಯ ಪ್ರವರ್ತಕರಾದ ವಿದ್ಯಾವಾಚಸ್ಪತಿ ಅರಳುಮಲ್ಲಿಗೆ ಪಾರ್ಥಸಾರಥಿಯವರು ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಇದೇ ಜೂನ್ 30ರಿಂದ ಜುಲೈ 10ರವರೆಗೆ 'ಶ್ರೀಮದ್ ಭಾಗವತ ಸಪ್ತಾಹ' ಪ್ರವಚನ ಮಾಲಿಕೆಯನ್ನು ನಡೆಸಿಕೊಡಲಿದ್ದಾರೆ.
ಇದೇ ಸಂದರ್ಭದಲ್ಲಿ, ಇಂದಿನ ಪೀಳಿಗೆಯ ಜನರಿಗಾಗಿ ಆಧ್ಯಾತ್ಮಿಕ ಜ್ಞಾನೋದಯ ವಿಷಯ ಕುರಿತು ಉಪನ್ಯಾಸವನ್ನೂ ಪಾರ್ಥಸಾರಥಿಯವರು ನೀಡಲಿದ್ದಾರೆ.
ದಾಸಸಾಹಿತ್ಯ, ಭಾರತೀಯ ಪರಂಪರೆ, ಭಾರತೀಯ ಸಂಸ್ಕೃತಿ, ಭಾರತೀಯ ಮೌಲ್ಯಗಳು, ಗೀತೆ, ರಾಮಾಯಣ, ಶ್ರೀಮದ್ ಭಾಗವತ ಕುರಿತು ಅವರು ನೀಡಿರುವ ಉಪನ್ಯಾಸ, ಬರೆದಿರುವ ಲೇಖನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮನ್ನಣೆ ಗಳಿಸಿವೆ. ಪಾರ್ಥಸಾರಥಿಯವರು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸುತ್ತಿರುವುದು ಇದು ಐದನೇ ಬಾರಿ.
ಅಪಾರ ಸಂಖ್ಯೆಯಲ್ಲಿ ಕನ್ನಡಿಗರು ಈ ಸರಣಿ ಕಾರ್ಯಕ್ರಮಕ್ಕೆ ಬಂದು ಉಪನ್ಯಾಸದ ಲಾಭ ಪಡೆಯಬೇಕೆಂದು ಆಯೋಜಕರು ಕೇಳಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಿದೆ.
ಕಾರ್ಯಕ್ರಮದ ವಿವರ ಕೆಳಗಿನಂತಿದೆ
ವಿಷಯ : ಆಧ್ಯಾತ್ಮಿಕ ಜ್ಞನೋದಯ
ದಿನಾಂಕ : ಶನಿವಾರ, ಜುಲೈ 5, 2008
ಸ್ಥಳ : ಐಎಎಎಸ್ಎ ಹಾಲ್, 6, ಬ್ಲೇಮಿ ಅವೆನ್ಯೂ, ಬ್ರಾಡ್‌ವ್ಯೂ, ಎಸ್ಎ
ಸಮಯ : ಸಂಜೆ 6.30ರಿಂದ 8.30. ನಂತರ ಊಟವಿರುತ್ತದೆ.
ಪ್ರವೇಶ : ಉಚಿತ
ಹೆಚ್ಚಿನ ವಿವರಗಳಿಗಾಗಿ ಸಂಪರ್ಕ
ಕೃಷ್ಣ ಪ್ರಸಾದ್ : 0411 763 686
ಉಮೇಶ್ ನಾಗಸಂದ್ರ : 0411 156 905












Click it and Unblock the Notifications