ಸಿಡಿಲಿನ ಮರಿ ಭಗತ್‌ಸಿಂಗ್‌ ಮತ್ತು ನಮ್ಮ ಹುಡುಗರು!


ಭಗತ್‌ ಸಿಂಗ್‌ ಹೋರಾಟದ ಹೆಜ್ಜೆಗಳು :

Bhagat Singh in Jailಭಗತ್‌ ಹಾಗು ಅವನ ಕ್ರಾಂತಿಕಾರಿಗಳ ತಂಡದ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಿರುವು ಕೊಟ್ಟ ಘಟನೆಯೆಂದರೆ ಲಾಲಾ ಲಜಪತ್‌ ರಾಯರ ಸಾವು. 1928 ಅಕ್ಟೋಬರ್‌ 30ರಂದು ಲಾಲಾ ಲಜಪತ್‌ ರಾಯ್‌ರೊಂದಿಗೆ ಚಂದ್ರಶೇಖರ್‌ ಅಜಾದ್‌, ಭಗತ್‌ ಹಾಗು ಇನ್ನು ಅನೇಕ ಕ್ರಾಂತಿಕಾರಿಗಳು ಸೇರಿ ಸೈಮನ್‌ ಕಮಿಷನ್‌ ವಿರುದ್ಧ ಪ್ರತಿಭಟನೆ ನಡೆಸುತ್ತಾರೆ.

ಅಹಿಂಸಾತ್ಮಕವಾಗಿ ನಡೆಯುತ್ತಿದ್ದ ಪ್ರತಿಭಟನೆಯ ಮೇಲೆ ಪೋಲೀಸರು ಹಿಂಸಾತ್ಮಕವಾಗಿ ದಾಳಿಮಾಡುತ್ತಾರೆ. ಪೊಲೀಸ್‌ ಮುಖ್ಯಸ್ಥ ಸ್ಕಾಟ್‌ ಲಾಲಾ ಲಜಪತ್‌ ರಾಯರನ್ನು ಲಾಠಿಯಿಂದ ಮನಬಂದಂತೆ ಥಳಿಸುತ್ತಾನೆ. ಆ ಏಟುಗಳನ್ನು ತಾಳಲಾರದ ಲಾಲಾ ಕೊನೆಯುಸಿರೆಳೆಯುತ್ತಾರೆ.

ತನ್ನ ಕಣ್ಣ ಮುಂದೆಯೇ ನಡೆದ ಈ ಘಟನೆ ನೋಡಿ ಭಗತ್‌ ವ್ಯಗ್ರನಾಗುತ್ತಾನೆ. ಪ್ರತೀಕಾರದ ಪಣ ತೊಟ್ಟು ಕ್ರಾಂತಿಕಾರಿಗಳೊಂದಿಗೆ ಸಮಾಲೋಚಿಸಿ ಸ್ಕಾಟ್‌ನ ಹತ್ಯೆಯ ಸಂಚು ರೂಪಿಸುತ್ತಾರೆ. ಆದರೆ ಕೊನೇಘಳಿಗೆಯಲ್ಲಿ ಸ್ಕಾಟನ್ನು ಗುರುತಿಸುವಲ್ಲಿ ವಿಫಲರಾಗಿ ಸಾಂಡರ್ಸ್‌ ಎಂಬ ಡೆಪ್ಯುಟಿ ಸೂಪರಿಂಟೆಂಡೆಂಟ್‌ ಪೊಲೀಸನ ಹತ್ಯೆ ಮಾಡಿಬಿಡುತ್ತಾರೆ.

ಕೆಲಕಾಲದ ನಂತರ ಜನರ ರಕ್ಷಣೆಯ ಹೆಸರಿನಲ್ಲಿ ಪೋಲೀಸರಿಗೆ ಹೆಚ್ಚಿನ ಅಧಿಕಾರ ನೀಡಿ ಜನತೆಯ ಮೇಲೆ ದಬ್ಬಾಳಿಕೆ ಮಾಡುವ ಶಾಸನ ಪಾರ್ಲಿಮೆಂಟಿನಲ್ಲಿ ಮಂಡಿಸಲಾಗುತ್ತದೆ. ಇದನ್ನು ತಿಳಿದು ಕ್ರಾಂತಿಕಾರಿಗಳು ಶಾಸನವನ್ನು ಪಾರ್ಲಿಮೆಂಟಿನ ಅಧಿವೇಶನದಲ್ಲಿ ಅಂಗೀಕರಿಸುವ ಮುನ್ನವೆ ಅದನ್ನು ವಿಫಲಗೊಳಿಸಲು ತಂತ್ರ ಹೂಡುತ್ತಾರೆ. ಯೋಜನೆಯಂತೆ ಅಧಿವೇಶನ ನಡೆಯುತ್ತಿರುವಾಗಲೆ ಭಗತ್‌ ಸಿಂಗ್‌ ಹಾಗು ಭಟುಕೇಶ್ವರ್‌ ದತ್‌ ಅಸೆಂಬ್ಲಿಯಲ್ಲಿ ಖಾಲಿ ಇರುವ ಜಾಗ ನೋಡಿ ಯಾರಿಗು ಹಾನಿಯಾಗದಂತೆ ಬಾಂಬ್‌ ಎಸೆದು ಬ್ರಿಟೀಷರ ವಿರುದ್ಧ ದಿಕ್ಕಾರ ಕೂಗುತ್ತಾ ಪೊಲೀಸರಿಗೆ ಶರಣಾಗುತ್ತಾರೆ.

ಈ ರೀತಿಯ ಶರಣಾಗತಿಯ ಹಿಂದೆ ಭಗತನ ಅನೇಕ ಉದ್ದೇಶಗಳಿವೆ ಅವುಗಳಲ್ಲಿ ಕೆಲವೆಂದರೆ ಕ್ರಾಂತಿಕಾರಿಗಳು ಭಯೋತ್ಪಾದಕರಲ್ಲಾ ಅವರು ಅಹಿಂಸಾತ್ಮಕ ಹೋರಾಟಕ್ಕು ಸೈ ಎಂದು ದೇಶದ ಜನತೆಗೆ ತಿಳಿಯಪಡಿಸುವುದು ಇದಕ್ಕೆ ಉದಾಹರಣೆಯಂತೆ ಭಗತ್‌ ಹಾಗು ಅವನ ಸಂಗಡಿಗರು ಜೈಲಿನಲ್ಲಿ ಬ್ರಿಟೀಷ್‌ ಕೈದಿಗಳು ಹಾಗು ಭಾರತೀಯ ಕೈದಿಗಳ ಸಮಾನತೆಗಾಗಿ 63 ದಿನಗಳು ಉಪವಾಸ ಮಾಡುತ್ತಾರೆ. ಜೈಲಿನ್‌ ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ಮಾಡಿ ಹೊಡೆದು ಬಡಿದು ಅನೇಕ ರೀತಿಯ ಚಿತ್ರಹಿಂಸೆ ಕೊಟ್ಟು ಆಹಾರ ತಿನ್ನಿಸಲು ಪಟ್ಟ ಪ್ರಯತ್ನ ಫಲಕಾರಿಯಾಗುವುದಿಲ್ಲ.

ಶರಣಾಗತಿಯ ಇನ್ನೊಂದು ಮುಖ್ಯ ಉದ್ದೇಶವೆಂದರೆ ಭಗತ್‌ ವಿಚಾರಣೆಯ ಸಮಯದಲ್ಲಿ ಕೋರ್ಟಿನಲ್ಲೇ ಎಲ್ಲರ ಸಮ್ಮುಖದಲ್ಲಿ ಬ್ರಿಟೀಷರ ದಬ್ಬಾಳಿಕೆಯ ತಂತ್ರಗಳನ್ನು ಒಂದೊಂದಾಗಿ ಎಳೆ ಎಳೆಯಾಗಿ ಬಿಡಿಸಿಡುತ್ತಾನೆ. ಆದರೆ ಕೊನೆಗೆ ಅದೇ ದಬ್ಬಾಳಿಕೆಯ ಕುತಂತ್ರಕ್ಕೆ ಬಲಿಪಶುವಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗುತ್ತಾನೆ.

ಹೀಗೆ ಭಗತ್‌ ಸಿಂಗ್‌ ಹಾಗು ಆತನ ತಂಡ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಿಂಚಿ ಅಷ್ಟೇ ಬೇಗ ಮರೆಯಾಗುತ್ತಾರೆ. ಸಂಗ್ರಾಮದಿಂದ ಮರೆಯಾದರೇನು ?! ನಮ್ಮ-ನಿಮ್ಮ ಮನಸ್ಸಿನ ಮೇಲೆ ಅಚ್ಚಳಿಯದ ಪರಿಣಾಮ ಬೀರಿಹೋಗಿದ್ದಾರೆ.

ಭಗತ್‌ಸಿಂಗ್‌ ಸ್ಮರಣೆ :

  • ಭಗತನ 75ನೇ ಪುಣ್ಯತಿಥಿಯನ್ನು ಸಾಮ್ರಾಜ್ಯಶಾಹಿ ವಿರೋಧಿ ದಿನವನ್ನಾಗಿ ಆಚರಿಸಲು ಹಾಗು ಅವನ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲು ಸಲಹೆಗಳು ಕೇಳಿ ಬರುತ್ತಲಿವೆ.
  • ಅದೇ ಸಮಯದಲ್ಲಿ ನಮ್ಮ ಪಾರ್ಲಿಮೆಂಟ್‌ ಕಟ್ಟಡ ಹಾಗು ಸರ್ಕಾರಿ ಕಛೇರಿಗಳಲ್ಲಿ ಆತನ ಚಿತ್ರಪಟ ತೂಗು ಹಾಕಲು ಬೇಡಿಕೆಗಳು ಎದ್ದಿವೆ. ಹಾಗೆಯೇ ಮೂವರು ಯುವಕರನ್ನು ಗಲ್ಲಿಗೇರಿಸಿದ ಲಾಹೋರಿನ ಜೈಲಿನಲ್ಲಿ ಈ ವರ್ಷ ಮಾರ್ಚ್‌ 23ರಂದು ಪಾಕಿಸ್ತಾನ್‌ ಹಾಗು ಭಾರತ ಜಂಟಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲು ಸಲಹೆಗಳು ಬಂದಿವೆ.
  • ಪಾಕಿಸ್ತಾನದೊಂದಿಗೆ ಬಾಂಧವ್ಯ ವೃದ್ಧಿಗೆ ಇದೂ ಕೂಡ ಮಹತ್ತರವಾಗಿ ನೆರವಾಗಬಲ್ಲದು!!
ಕೆಲವು ವಿಪರ್ಯಾಸಗಳು :
  • ಅಧಿಕಾರದಲ್ಲಿರುವ ಕಾಂಗ್ರೆಸ್‌ ಅಪ್ಪಟ ದೇಶಭಕ್ತ ಭಗತ್‌ ಸಿಂಗನಂತಹವನ ಪರವಾಗಿ ಅಂದು ದನಿಯೆತ್ತದೆ ಅವನನ್ನು ಹಾಗು ಅವನ ಸಂಗಡಿಗರನ್ನು ಗಲ್ಲಿಗೇರಿಸಲು ಅನುವುಮಾಡಿಕೊಟ್ಟಿತ್ತು.
  • ಇವತ್ತಿನ ದಿನ ಒಬ್ಬ ದೇಶ ದ್ರೋಹಿ, ಭಯೋತ್ಪಾದಕ ಪಾರ್ಲಿಮೆಂಟ್‌ ಕಟ್ಟಡವನ್ನು ಧ್ವಂಸಗೊಳಿಸುವ ಸಂಚಿನ ಪ್ರಮುಖ ವ್ಯಕ್ತಿ ಅಫ್ಜಲ್‌ ಗುರುವಿನಂತಹವನ ಪರವಾಗಿ ದನಿಯೆತ್ತುತ್ತಿದೆ!?
  • ವೋಟ್‌ ಬ್ಯಾಂಕಿನ ರಾಜಕಾರಣಿಗಳಿಗೆ ಹಾಗು ಅವರ ರಾಜಕೀಯಕ್ಕೆ ದಿಕ್ಕಾರವಿರಲಿ!!
ಇದೇ ಸಮಯದಲ್ಲಿ ‘ಕಪ್ಪು ಬಿಳುಪು’ ಚಲನ ಚಿತ್ರದ ಹಾಡೊಂದರ ಸಾಲುಗಳು ನೆನಪಿಗೆ ಬರುತ್ತಿವೆ. ನನ್ನ ಜೊತೆಗೆ ನೀವೂ ಹಾಡಿರಿ :

ಇಂದಿನ ಹಿಂದೂ ದೇಶದ ನವ ಯುವಕರೆ - ನವ ಯುವತಿಯರೆ,
ಯಾವುದು ಕಪ್ಪು, ಯಾವುದು ಬಿಳುಪು,
ಯಾವುದು ಸತ್ಯ, ಯಾವುದು ಮಿಥ್ಯ,
ಅರಿಯದೆ ನಡೆದು... ಎಡವದಿರಿ... ಎಡವದಿರಿ.. ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+