ಸಿಡ್ನಿಯಲ್ಲಿ ಎಂದರೋಮಹಾನುಭವುಲು ಅಂದರೀಕೀ..
ಸಂಗೀತ ಜೀವನದಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ಕೂಡಿರುವುದೆನ್ನುವುದಕ್ಕೆ ಈ ಸಂಗೀತೋತ್ಸವವೇ ನಿದರ್ಶನ.
- ಸೀತಾಕೇಶವ, ಸಿಡ್ನಿ
ಮೊದಲ ಮೂರು ದಿವಸಗಳು ಮಕ್ಕಳ ವಯಸ್ಸಿಗನುಗುಣವಾಗಿ ಏರ್ಪಡಿಸಿದ್ದ ಸಂಗೀತ ಸ್ಪರ್ಧೆಗೆ ಕದರಿ ಗೋಪಾಲನಾಥ್ ಮತ್ತು ಶ್ರೀಮತಿ ಕನ್ಯಾಕುಮಾರಿಯವರು ತೀರ್ಪುಗಾರಾಗಿದ್ದುದು ವಿಶೇಷ. ನಂತರ ಭಾರತದಿಂದ ಕರೆಸಿದ್ದ ಸಂಗೀತ ವಿದ್ವಾಂಸರುಗಳಿಂದ ಕಛೇರಿ, ಎರಡೆರಡು ಗಂಟೆಗಳ ಅಂತರದಲ್ಲಿ ದಿನಕ್ಕೆ ನಾಲ್ಕು ಜನ ಸಂಗೀತಗಾರರರು ಮತ್ತು ಸ್ಥಳೀಯರ ಸಂಗೀತ ಕಛೇರಿಗಳಿದ್ದವು. ಈ ಎರಡು ದಿವಸಗಳು ಸಿಡ್ನಿಯಲ್ಲಿ ವರುಣನ ಆರ್ಭಟವಿದ್ದರೂ ಲೆಕ್ಕಿಸದೆ ರಸಿಕರು ಕಛೇರಿ ಹಾಜರಿ ಹಾಕಿದರು.
ಎರಡನೆಯ ದಿವಸದ ಆಕರ್ಷಣೆ, ಥಳಥಳ ಹೊಳೆಯುವ ಟ್ರೋಫಿ. ವಿಜಯಿಗಳಾದ ಮಕ್ಕಳ ತಾಯಿತಂದೆಯರ ಉಲ್ಲಾಸದ ಮುಖಗಳು ಎದ್ದು ಕಾಣುತ್ತಿತ್ತು. ಮಾರನೆಯ ದಿವಸ ಸಂಗೀತಗಾರರಿಂದ ಏರ್ಪಡಿಸಿದ್ದ ವರ್ಕ್‌ಷಾಪ್ ಕೂಡ, ಸಂಗೀತ ಕಲಿಯುತ್ತಿರುವವರಿಗೆ, ಕಲಿಯಬೇಕೆಂದು ಬಯಸುವವರಿಗೆ ಇನ್ನೂ ಹೆಚ್ಚಿನ ಉತ್ಸಾಹ ಮತ್ತು ವಿಶೇಷ ಮಾರ್ಗದರ್ಶನ ಕೊಟ್ಟಿತು.
ಜೂನ್ ತಿಂಗಳಿನ ವೀಕ್‌ಎಂಡ್ ಎಲ್ಲಾ ಸಂಗೀತಕ್ಕೇ ಮುಡಿಪಾಗಿಡಬೇಕೆಂದು ನಿರ್ಧರಿಸಿದ ಹಾಗೆ, ವಿವಿಧ ಅಸೋಸಿಏಷನ್ ನವರುಗಳೂ, ನಾವು, ತಾವು ಎಂದು ಉಳಿದ ಸಂಗೀತಗಾರರ ಕಛೇರಿ ಕೇಳಿಸುವ ಪ್ರಯತ್ನ. ಪ್ರವೇಶ ದರಗಳಲ್ಲೂ ಪೈಪೋಟಿಯ ಶುಲ್ಕ! ಕರೆಯೋಲೆಯ ಸುರಿಮಳೆ. ಸಂಗೀತಗಾರರನ್ನು ಮನೆಗಳಿಗೆ ಆಮಂತ್ರಿಸಿ, ರಸಿಕ ಮತ್ತು ಆತ್ಮೀಯರಿಗೂ ಆಹ್ವಾನಿಸಿ, ಖುದ್ದಾಗಿ ಭೇಟಿಮಾಡಿಸಿ, ಪರಸ್ಪರ ವಿಷಯಗಳನ್ನು ಹಂಚಿಕೊಳ್ಳುವ ಸಮಯವೂ ಒದಗಿಬಂತು.
ಹಲವಾರು ತಂದೆ ತಾಯಿಯರಲ್ಲಿ ತಮ್ಮ ಮಕ್ಕಳಲ್ಲೂ ವಿವಿಧ ಸಂಗೀತ ಕಲೆಯನ್ನು ಕಾಣುವ ತವಕ. ಹಾಗಾಗಿ ಸೂಕ್ತ ಗುರುಗಳ ಹುಡುಕಾಟ.
ಸಂಗೀತ ಜೀವನದಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ಕೂಡಿರುವುದೆನ್ನುವುದಕ್ಕೆ ಈ ಸಂಗೀತೋತ್ಸವವೇ ನಿದರ್ಶನ. ಚಳಿ, ಮಳೆ, ಗಾಳಿಯಿಂದ ಕೂಡಿದ್ದರೂ ಸಂಗೀತಾಭಿಮಾನಿಗಳ ಸಂಖ್ಯೆಯೂ ಏನೂ ಕಡಿಮೆಯಾಗದೆ, ಸಂಗೀತಗಾರರಿಗೆ ಹಾಗೂ ವ್ಯವಸ್ಥಾಪಕರಿಗೆ ತುಂಬ ತೃಪ್ತಿಯನ್ನುಂಟುಮಾಡಿತು.












Click it and Unblock the Notifications