ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಶಿಕ್ಷಣ ನೀಡಲು ಮಗಳನ್ನೇ ಅನುಭವಿಸಿದ ಭೂಪ!

By Staff
|
Google Oneindia Kannada News


ವಿಚಿತ್ರವಾದರೂ ಸತ್ಯ ಎನುವಂಥ ವರದಿ, ಸಿಂಗಪೂರ್‌ನಿಂದ...

ಸಿಂಗಪುರ : ಕೋರ್ಟಿನ ಕಟಕಟೆ. ಅಲ್ಲಿ ಅಪರಾಧಿಗಳಾಗಿ ನಿಂತವರು ಮೂವರು ಹೆಂಗಸರು, ಒಬ್ಬ ಗಂಡಸು. ಆತನಿಗೆ 50ರ ವಯಸ್ಸು. ಆ ಮೂವರು ಹೆಂಗಸರಿಗೆ ತಲಾ 38, 39 ಹಾಗೂ 45ರ ವಯಸ್ಸು. ಈ ಮೂವರನ್ನು ಅಪರಾಧಿಗಳೆಂದು ಕಟಕಟೆಯಲ್ಲಿ ನಿಲ್ಲಿಸಿದವರು 12, 14, 16 ವರುಷದ ಹೆಣ್ಣುಮಕ್ಕಳು!

ಆತ ಬಿಸಿನೆಸ್‌ ಮ್ಯಾನ್‌ ಹಾಗೂ ರಿಲಿಜಿಯಸ್‌ ಟೀಚರ್‌. ಕಟಕಟೆಯಲಿ ಜತೆಯಾಗಿ ನಿಂತ ಮೂವರು ಹೆಂಗಸರ ಪತಿ. ಎದುರಿನಲ್ಲಿ ನಿಂತ ಆ ಮೂವರು ಹುಡುಗಿಯರು ಮತ್ಯಾರೂ ಅಲ್ಲ . ತಂದೆ-ತಾಯಿಗಳನ್ನೇ ಕೋರ್ಟಿಗೆ ಎಳೆದ ಮಕ್ಕಳು. ಇದೇನು ಎಲ್ಲರ ಮನೆಯಲ್ಲಿ ನಡೆಯುತ್ತೆ ಎಂದು ಮೂಗೆಳೆಯ ಬೇಡಿ..ಸ್ವಲ್ಪ ತಾಳಿ, ಆತನ ಅಪರಾಧ ತಾನು ಹುಟ್ಟಿಸಿದ ಮಕ್ಕಳನ್ನೇ ಲೈಂಗಿಕ ಶಿಕ್ಷಣ ನೀಡುವ ಸಲುವಾಗಿ ತನ್ನ ಕಾಮ ತೃಷೆಗೆ ಉಪಯೋಗಿಸಿಕೊಂಡದ್ದು. ಇಂಥಾ ಶಿಕ್ಷಣ ಬೇರೆಡೆ ಪಡೆಯುವದಕ್ಕಿಂತ ತಂದೆಯಿಂದಲೇ ಬಂದರೆ ಒಳ್ಳೆಯದು ಎಂದು ತನ್ನದೇ ಕರುಳ ಕುಡಿಯನ್ನು ಪತಿಗೆ ಅರ್ಪಿಸಿ ಕೃತಾರ್ಥರಾದೆವೆಂದು ಬೀಗಿದ್ದು ಆ ಹುಡುಗಿಯರ ಮಾತೆಯರು!

ಮತ ಶ್ರದ್ದೆಯುಳ್ಳ ಆ ಹೆಂಗಸರಿಗೆ ಗಂಡನಿಗೆ ಅವಿಧೇಯತೆಯಿಂದ ನಡೆದರೆ ಕುಟುಂಬಕ್ಕೆ ಕೆಟ್ಟದಾಗುವುದೆಂಬ ಬೋಧನೆ, ಋತುಮತಿಯಾದ ಹುಡುಗಿಯರಿಗೆ ಲೈಂಗಿಕ ಶಿಕ್ಷಣ ಹೊರಗಿನಿಂದ ಕಲಿಯುವುದಕ್ಕಿಂತ, ತಂದೆಯಿಂದಲೇ ಕಲಿಯುವುದು ಒಳ್ಳೆಯದು ಎಂದ ಹುಟ್ಟಿಸಿದಾತನ ವಾದ. ಹುಟ್ಟಿಸಿದ ತಂದೆಯಿಂದಲೇ ಗರ್ಭವತಿಯರಾದ ಯುವತಿಯರಿಗೆ ಅಬಾರ್ಷನ್‌ ಮಾಡಿಸಿದವರು ಆ ತಾಯಂದಿರು!

ಇದು ಪುಸ್ತಕದಲ್ಲಿ ಅಥವಾ ಚಲನಚಿತ್ರಗಳಲ್ಲಿ ಬರುವ ಕಥೆಯಲ್ಲ, ಸಿಂಗಪುರದ ಕುಟುಂಬವೊಂದರಲ್ಲಿ ನಡೆದ ಘಟನೆ. ತಾ ಹುಟ್ಟಿಸಿದ ಹೂವು ತನಗೇ ಮೀಸಲು, ತಾನೇನು ತಪ್ಪು ಮಾಡಿಲ್ಲ ಎಂದ ತಂದೆ ಕೋರ್ಟಿನ ಕಟಕಟೆಯಲ್ಲಿ. ಪತಿ, ಗುರು, ಅನ್ನದಾತನ ಆಜ್ಞೆ, ಆಣತಿ, ಅಸಂತೋಷ ಮೀರಲಾರದೆ ಮಕ್ಕಳನ್ನು ಗಂಡನ ಬಳಿ ಅವರ ಸಮ್ಮತಿಯಿಂದಲೇ ಕಳುಹಿಸಿದೆವು ಎಂದು ಅವನ ಹೆಂಡತಿಯರ ವಾದ.

ತಂದೆ ಎನಿಸಿಕೊಂಡವನಿಗೆ ಈ ಕೃತ್ಯಕ್ಕೆ ಸಿಕ್ಕ ಶಿಕ್ಷೆ 32 ವರುಷ ಜೈಲುವಾಸ, 24 ಕೇನಿಂಗ್‌ ಸ್ಟ್ರ್ರೋಕ್‌ (ಸ್ವಿಚ್‌ ಒತ್ತಿದ ತಕ್ಷಣ ರೊಯ್ಯೆಂದು ಟಪ್ಪನೆ ಬಡಿಯುವ ವೇಗದ ಬೆತ್ತದ ಛಡಿ ಏಟು). ಅವನಿಗೆ ದೈಹಿಕ ಶಿಕ್ಷೆ ... ಆ ಮಕ್ಕಳಿಗೆ ಆಜೀವ ಪರ್ಯಂತ ಮಾನಸಿಕ ಶಿಕ್ಷೆ. ಇದು ನ್ಯಾಯವೇ? ಇನ್ನು ತಾಯಂದಿರಿಗೆ, ಇಲ್ಲಿ ಟರ್ನಿಂಗ್‌ ಪಾಯಿಂಟ್‌.. ಇದಿನ್ನೂ ಡಿಸೈಡ್‌ ಆಗಿಲ್ಲ..ಕಾರಣ .. ಆ ಮೂವರು ಹುಡುಗಿಯರು ನ್ಯಾಯಾಧೀಶರ ಬಳಿ ಮಾತೆಯರನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿರುವುದು!

ಹದಿಮೂರು ಮಕ್ಕಳ ಕುಟುಂಬ ನಮ್ಮದು. ಮೂವರು ತಾಯಂದಿರೂ ನಮ್ಮನ್ನು ಪ್ರೀತಿಯಿಂದ ಸಾಕಿ ಸಲಹಿದ್ದಾರೆ. ತಂದೆಗೆ ಜೈಲಾಗಿದೆ. ತಾಯಿಯರೂ ಜೈಲಿಗೆ ಹೋದಲ್ಲಿ ನಾವು ಅನಾಥರಾಗುತ್ತೇವೆ, ನಮ್ಮನ್ನು ಕಾಪಾಡುವವರು ಯಾರೂ ಇಲ್ಲ ಬೀದಿಗೆ ಇಳಿಯಬೇಕಾದ ಪರಿಸ್ಥಿತಿ ಬಂದಿದೆ. ದಯವಿಟ್ಟು ಅವರನ್ನು ಬಿಟ್ಟು ಬಿಡಿ ಎಂದು ಆ ಹೆಣ್ಣು ಮಕ್ಕಳು ಮೊರೆಯಿಟ್ಟಿದ್ದಾರೆ.

ಕಾರ್ಯೇಷು ದಾಸಿ, ಕರಣೇಷು ಮಂತ್ರಿ, ಕ್ಷಮಯಾಧರಿತ್ರಿ... ಹೆಣ್ಣು ಎಲ್ಲವೂ ಆಗಬಲ್ಲಳು. ಸುಕೋಮಲೆ, ಅಬಲೆ ಎಂದು ಭಾವಿಸಿದಲ್ಲಿ ತಪ್ಪು . ಅವಳು ಅತ್ಯಂತ ಸಬಲೆ, ವಜ್ರದಷ್ಟು ಕಠಿಣೆ, ಒಲಿದರೆ ನಾರಿ ಮುನಿದರೆ ಮಾರಿ. ತಾಯಿ ಲಾಲಿಸುತ್ತಾಳೆ, ಪಾಲಿಸುತ್ತಾಳೆ, ಆಲಿಸುತ್ತಾಳೆ. ಪತ್ನಿ, ತಂಗಿ, ತಾಯಿ, ಅಜ್ಜಿ, ಗೆಳತಿ, ತ್ಯಾಗಮಯಿ, ವಾತ್ಸಲ್ಯಮಯಿ, ಪ್ರೇಮಮಯಿ ಎಲ್ಲವೂ ಆಗಬಲ್ಲಳು.

ಅದು ಸಂದರ್ಭದ ಮೇಲೆ ಅವಲಂಬಿತ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X