ಉ.ಕ್ಯಾಲಿಫೋರ್ನಿಯಾದ ಸಾಹಿತ್ಯಗೋಷ್ಠಿಗೆ ಆರರ ಸಡಗರ
ನವೆಂಬರ್ 11, 2002ರಲ್ಲಿ ಜನಿಸಿದ ಉತ್ತರ ಕ್ಯಾಲಿಫೋರ್ನಿಯ ಕನ್ನಡಾಸಕ್ತರ "ಸಾಹಿತ್ಯ ಗೋಷ್ಠಿ" ತನ್ನ ಆರನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳಲು ಸಜ್ಜಾಗಿದೆ. ಕನ್ನಡ ಸಾಹಿತ್ಯವನ್ನು ಆಧರಿಸಿದ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ, ನಿಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸುವುದು ಗೋಷ್ಠಿ ಉದ್ದೇಶ. ವಾರ್ಷಿಕೋತ್ಯವ ಸಡಗರಕ್ಕೆ ತಮಗೆಲ್ಲರಿಗೂ ಹಾರ್ದಿಕ ಸ್ವಾಗತ. ಕನ್ನಡ ಕುಲ ರಸಿಕರ ತುಂಬಿದ ಸಭೆಯಲ್ಲಿ ನೀವೂ ಇರಬೇಕು.
ಕಾರ್ಯಕ್ರಮದ ವಿವರಗಳು :
ದಿನ : ಡಿಸೆಂಬರ್ 9,(ಭಾನುವಾರ)
ಕಾಲ : ಮಧ್ಯಾಹ್ನ 1 ರಿಂದ 4:45 ರವರೆಗೆ
ಸ್ಥಳ : ಸಾರಟೋಗ ವಾಚನಾಲಯದ ಸಾರ್ವಜನಿಕ ಸಭಾಂಗಣ,
13650 ಸಾರಟೋಗ ಅವೆನ್ಯು,
ಸಾರಟೋಗ, ಕ್ಯಾಲಿಫೋರ್ನಿರಯ 950070
* ಪ್ರಾರ್ಥನೆ: ಗಣೇಶ್ ಕಡಬ
* "ಕನ್ನಡದ ಶ್ರೇಷ್ಠ ಕವಿಗಳು ಬರೆದ ಭಾವಗೀತೆ ಮತ್ತು ಚಿತ್ರಗೀತೆಗಳು" ಸೋಮಶೇಖರ್
* "ಉಪನ್ಯಾಸ: ಭೈರಪ್ಪನವರ 'ಸಾಕ್ಷಿ": ಅಂತ್ಯವಿಲ್ಲದ ಸುಳ್ಳಿನ ಮೂಲ ಯಾವುದು?" ಜಗದೀಶ್ ವಾಸುದೇವಮೂರ್ತಿ
* "ಕನ್ನಡದ ಹಾಸ್ಯ ಚಟಾಕಿಗಳು" ಮಧುಕಾಂತ್ ಕೃಷ್ಣಮೂರ್ತಿ
* "ಬಸಣ್ಣನವರ ವಚನಗಳು - ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ" ನಚೀಕೇತ ಶರ್ಮ
* ವಾರ್ಷಿಕ ವರದಿ ವಿಶ್ವನಾಥ್ ಹುಲಿಕಲ್
* ಕಾರ್ಯಕ್ರಮ ನಿರ್ವಹಣೆ: ವಿಶ್ವನಾಥ್ ಹುಲಿಕಲ್
ತಮಗೆಲ್ಲರಿಗೂ ಸಾಹಿತ್ಯ ಗೋಷ್ಠಿಯ ಆರನೆಯ ವಾರ್ಷಿಕೋತ್ಸವಕ್ಕೆ ಮತ್ತೊಮ್ಮೆ ಸ್ವಾಗತವನ್ನು ಬಯಸುತ್ತಿದ್ದೇವೆ. ದಯವಿಟ್ಟು ಅಧಿಕ ಸಂಖ್ಯೆಯಲ್ಲಿ ಆಗಮಿಸಿ, ಈ ಸಂಭ್ರಮದಲ್ಲಿ ಭಾಗಿಯಾಗಿ. ತಾವು ಆಗಮಿಸಿದಾಗ ಕನ್ನಡ ಸಂಚಾರಿ ಗ್ರಂಥಾಲಯದ ಸೇವೆಯ ಪ್ರಯೋಜನವನ್ನೂ ಸಹ ಪಡೆದುಕೊಳ್ಳಿರಿ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ವಿಶ್ವನಾಥ್ ಹುಲಿಕಲ್
Email: [email protected]
Web-site: http://www.sahityagoshti.org











Click it and Unblock the Notifications