Get Updates
Get notified of breaking news, exclusive insights, and must-see stories!

ಅಪ್ಪನಿಗೆ ಮಗಳಿಂದ ‘ವೆಬ್‌ ಮಹಲು’

  • ದಟ್ಸ್‌ಕನ್ನಡ ಡೆಸ್ಕ್‌
RamprasadDeepika Ramprasad‘ನಿನ್ನಂಥ ಅಪ್ಪ ಇಲ್ಲ ’
‘ನಿನ್ನಂಥ ಮಗಳು ಇಲ್ಲ ’

ವರನಟ ರಾಜ್‌ಕುಮಾರ್‌ ಹಾಗೂ ಸುಧಾರಾಣಿ ಹಾಡಿ ಕುಣಿವ ‘ದೇವತಾ ಮನುಷ್ಯ’ ಚಿತ್ರದ ಜನಪ್ರಿಯ ಗೀತೆಯಿದು. ಅಪ್ಪ ಹಾಗೂ ಮಗಳ ನಡುವಿನ ಪ್ರೀತಿ -ಖುಷಿಯ ಜನಪ್ರಿಯ ಅಭಿವ್ಯಕ್ತಿಯಿದು, ಅಪರೂಪದ ಗೀತೆಯೂ ಹೌದು. ಅಂಥದ್ದೇ ಒಂದು ಖುಷಿ ಉತ್ತರ ಕ್ಯಾಲಿಫೋರ್ನಿಯಾದ ಅಪ್ಪ ಮಗಳದು. ಪುಟಾಣಿ ಕನ್ನಡತಿ ದೀಪಿಕಾ ಹಾಗೂ ಹಾಡುಗಾರ ರಾಮ್‌ ಪ್ರಸಾದ್‌ ಇಲ್ಲಿನ ಅಪರೂಪದ ಜೋಡಿ.

ರಾಮ್‌ಪ್ರಸಾದ್‌ ಯಾರಿಗೆ ಗೊತ್ತಿಲ್ಲ ? ‘ಮೂಡಲ್‌ ಕುಣಿಗಲ್‌ ಕೆರೆ’ ಎನ್ನುವ ಮರೆತುಹೋದ ಜಾನಪದ ಗೀತೆಯನ್ನು ಕನ್ನಡಿಗರಿಗೆ ನೆನಪಿಸಿದ ಹಾಡುಗಾರ ; ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಕಾಣಿಸಿಕೊಂಡವರು. ಇಂಥ ಅಪ್ಪನ ಕುರಿತು ‘ನಿನ್ನಂಥ ಅಪ್ಪ ಇಲ್ಲ...’ ಎಂದು ದೀಪಿಕಾ ಹಾಡಿದರೆ ತಪ್ಪೇನು ! ಇನ್ನು ಅಪ್ಪನ ಪಾಲಿಗೆ ಮಗಳು ಸದಾ ಮುದ್ದು .

ಉಹುಂ, ದೀಪಿಕಾಳ ಖುಷಿ ಹಾಡಿಗೆ ಮಾತ್ರ ಸೀಮಿತವಾದುದಲ್ಲ ; ತನ್ನ ಖುಷಿಯನ್ನು , ಅಪ್ಪನ ಕುರಿತ ಹೆಮ್ಮೆಯನ್ನು ಜಾಗತಿಕ ಕನ್ನಡಿಗರಿಗೆ ಹಂಚುವ ಆಸೆ ಆಕೆಯದು. ಆ ಕಾರಣದಿಂದಲೇ ಅಪ್ಪನನ್ನು ಪರಿಚಯಿಸುವ ವೆಬ್‌ಸೈಟೊಂದನ್ನು ರೂಪಿಸಿದ್ದಾಳೆ. ರಾಮ್‌ಪ್ರಸಾದ್‌ ಕುರಿತ ಪರಿಚಯ, ಸಿನಿಮಾ ಹಾಗೂ ವಿವಿಧ ಆಲ್ಬಂಗಳಿಗಾಗಿ ಹಾಡಿದ ಹಾಡುಗಳು, ಎಲ್ಲವೂ ಆ ವೆಬ್‌ಸೈಟ್‌ನಲ್ಲುಂಟು. www.geocities.com/singer_ram ಅಂತರ್ಜಾಲ ತಾಣದಲ್ಲಿ ಉಚಿತ ರಾಮ ದರ್ಶನ !

ವೆಬ್‌ಸೈಟ್‌ ರೂಪಿಸುವ ವಿಷಯ ಅಮೆರಿಕನ್ನಡಿಗರಿಗೆ ದೊಡ್ಡ ವಿಷಯವೇನೂ ಅಲ್ಲ . ಆದರೆ ಇಲ್ಲಿನ ಕಥೆಯೇ ಬೇರೆ : ದೀಪಿಕಾಗಿನ್ನೂ ಹತ್ತೇ ವರ್ಷ. ನಾಲ್ಕನೇ ಗ್ರೇಡ್‌ನಲ್ಲಿ ಕಲಿಯುತ್ತಿದ್ದಾಳೆ. ಆಟವಾಡುವ ವಯಸ್ಸಿನಲ್ಲಿ ವೆಬ್‌ಸೈಟ್‌ ರೂಪಿಸಿದ್ದಾಳೆ. ಅಪ್ಪನ ಪ್ರತಿಭೆಯ ಅಂತರ್ಜಾಲದಲ್ಲಿ ತೇಲಿಬಿಡುವ ದೀಪಿಕಾಗಳ ಉದ್ದೇಶ ಈಗ ಈಡೇರಿದೆ. ಅಪ್ಪನಿಗೆ ತಕ್ಕ ಮಗಳು !

ಈ ಜಾಣೆಗೆ ಓದುವುದೆಂದರೆ ಭಾರೀ ಇಷ್ಟ . ಪದ್ಯ, ಕಥೆ, ಚಿತ್ರ ಬರೆಯುವುದೂ ಇಷ್ಟ . ಭರತ ನಾಟ್ಯ ಕಲಿಯುತ್ತಿದ್ದಾಳೆ. ಅಂದಹಾಗೆ, ವೆಬ್‌ಸೈಟ್‌ ರೂಪಿಸಲು ದೀಪಿಕಾಗೆ ಕಷ್ಟವಾಗಲಿಲ್ಲವೇ ? ಆಕೆ ಹೇಳುತ್ತಾಳೆ ಕೇಳಿ :

‘ನನ್ನ ಗೆಳತಿ ಪ್ರಿಯಾಳ ವೆಬ್‌ಸೈಟ್‌ ನೋಡಿದಾಗ ಅಪ್ಪನ ಕುರಿತು ವೆಬ್‌ಸೈಟ್‌ ಮಾಡಬೇಕನ್ನಿಸಿತು. ಜನರು ನನ್ನ ಅಪ್ಪನ ಪ್ರತಿಭೆಯ ಕುರಿತು ತಿಳಿದುಕೊಳ್ಳಬೇಕು ಎನ್ನುವುದು ನನ್ನ ಆಸೆ. ಎಚ್‌ಟಿಎಂಎಲ್‌ ಕೋಡುಗಳು ಬರೀ ಗೋಜಲು ಗೋಜಲು. ಆ ಕಾರಣದಿಂದಾಗಿ ಯಾಹೂ ಪೇಜ್‌ಬಿಲ್ಡರ್‌ ಬಳಸುವಂತೆ ನನ್ನ ಸೋದರ ಹೇಳಿದ. ಇದು ತುಂಬಾ ಸುಲಭ. ಎಲ್ಲರೂ ವೆಬ್‌ಸೈಟ್‌ ಮಾಡಬಹುದು ಎಂದು ಈಗ ನನಗನ್ನಿಸುತ್ತೆ...’

ದೀಪಿಕಾ ತನ್ನ ವೆಬ್‌ಸೈಟ್‌ನಲ್ಲಿ ನೆಚ್ಚಿನ ಗೆಳತಿ ಅದಿತಿ ಶ್ರೀನಿವಾಸನ್‌ಗೂ ಒಂದು ಪುಟ ಮೀಸಲಿಟ್ಟಿದ್ದಾಳೆ. ಅದಿತಿ ಹಾಡಿದ ಎಲ್ಲ ಹಾಡುಗಳೂ ಇಲ್ಲಿವೆ. ಅದಿತಿ, ರಾಮ್‌ರ ಶಿಷ್ಯೆ, ಕರ್ನಾಟಕ ಸಂಗೀತ ಕಲಿಯುತ್ತಿದ್ದಾಳೆ.

ಕನ್ನಡ ಗೀತೆಗಳ ಧ್ವನಿಸುರುಳಿಗಳು ವಿದೇಶಗಳಲ್ಲಿ ಸಿಗುವುದು ತುಂಬಾನೇ ಕಷ್ಟ . ಇಂಥ ಸಂದರ್ಭದಲ್ಲಿ ದೀಪಿಕಾಳ ವೆಬ್‌ಸೈಟ್‌ ಕನ್ನಡ ಹಾಡುಗಳ ಪ್ರಿಯರಿಗೆ ಆಪ್ತವೆನ್ನಿಸುತ್ತದೆ.

www.geocities.com/singer_ram ಅಂತರ್ಜಾಲ ತಾಣಕ್ಕೆ ಒಮ್ಮೆ ಭೇಟಿ ಕೊಡಿ. ಹಾಡುಗಳನ್ನು ಕೇಳಿ; ಅಪ್ಪ ಮಗಳ ಬೆನ್ನು ತಟ್ಟಿ . ದೀಪಿಕಾಳಿಗೊಂದು ವಿಶೇಷ ಅಭಿನಂದನೆ ಇರಲಿ.

ಮುಖಪುಟ / ಎನ್‌ಆರ್‌ಐ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+