ಡಾ.ರೇಣುಕಾ ರಾಮಪ್ಪ ಬರೆಯುತ್ತಿದ್ದಾರೆ..
ಆತ್ಮೀಯ ಕನ್ನಡ ಬಾಂಧವರೆ,
ಸಪ್ರೇಮ ನಮಸ್ಕಾರಗಳು. ನಿಮಗು ಮತ್ತು ನಿಮ್ಮ ಪರಿವಾರಕ್ಕೆ ವಿಶ್ವಕನ್ನಡ ಸಮ್ಮೇಳನದ ಕಾರ್ಯಕಾರಿ ಸಮಿತಿಯ ಪರವಾಗಿ 2004ರ ನೂತನ ವರ್ಷದ ಹೃತ್ಪೂರ್ವಕ ಶುಭಾಶಯಗಳು. ಎಳ್ಳುಬೆಲ್ಲದ ಹಬ್ಬ ಸಂಕ್ರಾಂತಿಯ ಶುಭಕಾಮನೆಗಳು. ಹೊಸ ವರ್ಷ ಸರ್ವರಿಗೂ ಶುಭಕರವಾಗಿರಲಿ, ಹರ್ಷ-ಆರೋಗ್ಯ ಹೆಚ್ಚಿಸಲಿ.
ಪ್ರಸ್ತುತ ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಈ ಸಂತಸದ ಸಮಾಚಾರ ನಿಮಗೆಲ್ಲರಿಗೂ ಈಗಾಗಲೇ ತಿಳಿದಿರಬೇಕು. ತಾಯ್ನಾಡಿನಿಂದ ಇಷ್ಟು ದೂರ ಇರುವ ಅಮೇರಿಕಾದ ಸಮಸ್ತ ಕನ್ನಡಿಗರು ಒಂದೇ ಸೂರಿನಡಿಯಲ್ಲಿ ಸ್ನೇಹದಿಂದ ಕಲೆತು ನಮ್ಮೆಲ್ಲರ ತಾಯಿನಾಡು ನುಡಿಯ ಬಗ್ಗೆ ಪ್ರೀತಿಯಿಂದ ಭವ್ಯವಾದ ಉತ್ಸವ ಆಚರಿಸುವ ಮತ್ತು ನಮ್ಮ ನಮ್ಮ ಅಭಿಪ್ರಾಯ ಹಂಚಿಕೊಳ್ಳುವ, ನಮ್ಮೊಳಗಿನ ಪ್ರತಿಭೆ ಪ್ರದರ್ಶಿಸುವ ಸುವರ್ಣ ಅವಕಾಶದ ಸಮಾಚಾರವಿದು. ಹೌದು, ಈ ಸುವರ್ಣ ಅವಕಾಶ 2004ರ ಸೆಪ್ಟೆಂಬರ್ ತಿಂಗಳಿನ 3,4,5 ರಂದು ಅಮೆರಿಕನ್ನಡಿಗರಿಗೆ ದೊರೆಯಲಿದೆ.
ಆರ್ಲ್ಯಾಂಡೋ ನಗರದ ಗೇಲಾರ್ಡ್ ರಿಸಾರ್ಟ್ ನ ವಿಶಾಲ ಸೌಧ ಸಭಾಂಗಣದಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ-2004 ಏರ್ಪಡಿಸಲಾಗಿದೆ. ಈ ಮಹೋತ್ಸವದ ಯಶಸ್ಸು, ಸಫಲತೆಗೆ ಅಮೇರಿಕಾದ ಪ್ರತಿ ಕನ್ನಡಿಗನೂ ತನು ಮನ ಧನದ ಮೂಲಕ ಪಾಲ್ಗೊಳ್ಳಬೇಕು. ಇದು ಅಮೆರಿಕದಲ್ಲಿನ ಕನ್ನಡಿಗರ ನಾಡು-ನುಡಿಯ ಹಬ್ಬ; ಕನ್ನಡಿಗರದೇ ಕಾರ್ಯಕ್ರಮ. ಈ ಕಾರ್ಯಕ್ರಮದ ಯಶಸ್ಸು, ಸಫಲತೆ ಕೂಡ ಕನ್ನಡಿಗರದೇ.
ಕನ್ನಡ ನಾಡಿನ ಪ್ರಸಿದ್ಧ ಲೇಖಕ-ಲೇಖಕಿಯರು, ಕಲಾವಿದರು, ವಿಜ್ಞಾನಿಗಳು ಹಾಗು ಸಮಾಜದ ಗಣ್ಯವ್ಯಕ್ತಿಗಳು ನಮ್ಮ ಆಹ್ವಾನ ಮನ್ನಿಸಿ ಇಲ್ಲಿಗೆ ಬಂದು ನಮ್ಮೊಡನಿದ್ದು ತಮ್ಮ ಅನುಭವ, ಆನಂದವನ್ನು ಹಂಚಿಕೊಳ್ಳಲಿದ್ದಾರೆ. ಈ ಪ್ರಯತ್ನದಲ್ಲಿ ಕರ್ನಾಟಕದ ಘನ ಸರ್ಕಾರಕ್ಕೆ ಸಹಕಾರ ಮತ್ತು ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡಿರುವೆವು.
ಅಮೇರಿಕಾದ ನಗರಗಳಲ್ಲಿ ಕನ್ನಡ ಸಂಸ್ಕೃತಿಯ ಉಳಿವಿಗಾಗಿ ಹಾಗೂ ಮುಂದಿನ ಜನಾಂಗದಲ್ಲಿ ಕನ್ನಡದ ಬಗ್ಗೆ ಅಭಿಮಾನದ ಜಾಗೃತಿಗಾಗಿ ಅವಿರತವಾಗಿ ಅವಿಶ್ರಾಂತವಾಗಿ ಯತ್ನಿಸುತ್ತಿರುವ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು. ನಿಮ್ಮಲ್ಲಿ ನನ್ನದೊಂದು ಕೋರಿಕೆಯಿದೆ, ಅದೇನೆಂದರೆ:
- ಬರಲಿರುವ ವಿಶ್ವಕನ್ನಡ ಸಮ್ಮೇಳನಕ್ಕೆ ನಿಮ್ಮ ನಗರಗಳಲ್ಲಿನ ಪ್ರತಿ ಕನ್ನಡಿಗರೂ ಭಾಗವಹಿಸಲು ನೀವು ನೀಡಬೇಕಾದ ಪ್ರೇರಣೆ ಅತಿ ಮುಖ್ಯ.
- ಯೋಜಿತ ಉತ್ಸವದ ಮಹಾಕಾರ್ಯ ನಿರ್ವಹಿಸಲು ಅವಶ್ಯಕವಾದ ಧನ ಸಂಗ್ರಹಣೆ, ಇದು ಉದಾರಿ ಮನಸ್ಸಿನ ಕೊಡುಗೈ ದಾನಿಗಳಿಂದ ಸಾಧ್ಯ. ಈ ದಿಕ್ಕಿನಲ್ಲಿ ಪ್ರಾಯೋಜಕರ ಪಟ್ಟಿಯನ್ನು ಸಿದ್ಧಗೊಳಿಸಿ, ಅವರ ವಿಳಾಸವನ್ನು ನಮ್ಮ ಸಮಿತಿಗೆ ತಿಳಿಸಿ. ನಾವೂ ಪ್ರಯತ್ನಿಸುತ್ತೇವೆ ಮತ್ತು ನೀವೂ ಸಹ ಇಂತಹ ಸತ್ಕಾರ್ಯಕ್ಕೆ ಅವರ ಮನ ಒಲಿಸಿ. ಹನಿ ಹನಿ ಸೇರಿದರೆ ಹಳ್ಳ !
ಕನ್ನಡಾಂಬೆಗೆ ಜೈ ಎನ್ನೋಣ.
ಮತ್ತೆ ಭೇಟಿಯಾಗುವ.
ವಂದನೆಗಳು.
- ಡಾ।। ರೇಣುಕ ರಾಮಪ್ಪ ,
ಸಂಚಾಲಕಿ, ಆರ್ಲ್ಯಾಂಡೋ ವಿಶ್ವ ಕನ್ನಡ ಸಮ್ಮೇಳನ 2004
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications