ಚೀನಾ ಹೊಸವರ್ಷದಲ್ಲಿ ಕೋತಿಗಳು ಸಾರ್‌ ಕೋತಿಗಳು !

ಈ ವರುಷದ ಸಂಕೇತ ‘ಕೋತಿ’. ಚತುರತೆ, ಜೀವನ ಶಕ್ತಿ, ಬಲ, ತೀಕ್ಷ್ಣ ಬುದ್ಧಿಗೆ ಕೋತಿಯಾಂದು ಸಂಕೇತ. ಈ ವರುಷ ಬಂದಿರುವ ‘ಕೋತಿ’ ಎಲ್ಲರಿಗೂ ಹರುಷ ತರುತ್ತದೆ ಎಂಬುದು ಅವರ ನಂಬಿಕೆ. ಈ ವರುಷದಲ್ಲಿ ಹುಟ್ಟುವ ಮಕ್ಕಳು ‘ಮರ್ಕಟ’ ನಂತೆ ಬಹಳ ಬುದ್ಧಿವಂತರು, ತುಂಟರು ಆಗುವರೆಂದು ಕೂಡ ಒಂದು ನಂಬಿಕೆ.

ಚೀನಿಯರ ಜ್ಯೋತಿಷ್ಯದ ಪ್ರಕಾರ ಕೋತಿಯಂತೆಯೇ ಈ ವರುಷ ಎಲ್ಲರಲ್ಲೂ ತುಂಟತನದ ಪ್ರಭಾವ ಹೆಚ್ಚು. ಚತುರತೆ ಮತ್ತು ಕುಟಿಲೋಪಾಯದಿಂದ ನಿಂತು ಹೋದ ಕಾರ್ಯಕಲಾಪಗಳು ಶಾಂತಿಯಿಂದ ಮುಗಿಯುತ್ತವೆ ಎಂದು ಚೀನಿಯರು ಹೇಳುತ್ತಾರೆ.

ಮನೆಯ ಹಿರಿಯ ಕಿರಿಯರೆಲ್ಲರೂ ಕೂಡಿ ಹಬ್ಬದ ಹಿಂದಿನ ರಾತ್ರಿ ದೊಡ್ಡ ಔತಣ ಮಾಡಿ ಸಂಭ್ರಮಿಸುತ್ತಾರೆ. ಊಟವಾದ ಮೇಲೆ ಚಿಕ್ಕವರು ಹಿರಿಯರು ನೀಡುವ ಕೆಂಪು ಬಣ್ಣದ ‘ಹಾಂಗ್‌ ಬಾವ್‌’ (ಜಟ್ಞಜ ಚಿಚಟ) ಪೊಟ್ಟಣಗಳಿಗಾಗಿ ಕಾಯುತ್ತಾರೆ. ಈ ಪೊಟ್ಟಣಗಳು ಮದುವೆ ಆಗದಿರುವ ಯುವಕ ಯುವತಿಯರಿಗಾಗಿ ಮತ್ತು ಚಿಕ್ಕ ಮಕ್ಕಳಿಗಾಗಿ ಮೀಸಲು. ‘ ಕೆಂಪು ಪೊಟ್ಟಣಗಳು ಗರಿ ಗರಿಯಾದ ನೋಟುಗಳು’ ಎಷ್ಟು ಚೆನ್ನ ಅಲ್ಲವೇ? ಕೀಟಲೆಗಾಗಿ ಮಕ್ಕಳು ‘ಗಾಂಗ್‌ ಸೀ ಫಾ ಚಾಯ್‌, ಹಾಂಗ್‌ ಬಾವ್‌ ನ ಲಯ್‌’( ಹೊಸವರುಷದ ಶುಭಾಶಯಗಳು, ಕೈಗೆ ಕೊಡಿ ಹಾಂಗ್‌ ಬಾವ್‌ ಪೊಟ್ಟಣಗಳು ಎಂದು ಹೇಳುತ್ತಾರೆ). ಈ ಪೊಟ್ಟಣಗಳಲ್ಲಿ ಸಮ ಸಂಖ್ಯೆಗಳಲ್ಲಿ ಹಣ ಇಟ್ಟಿರುತ್ತಾರೆ. ಎಲ್ಲೆಡೆ ಕಿತ್ತಳೆ, ಪಾಲಕ್‌, ಕಡಲೆಕಾಯಿ, ಗೋಡಂಬಿ, ಚಿಕ್ಕಿಗಳ ರಾಶಿಯೋ ರಾಶಿ. ಈ ಪದಾರ್ಥಗಳು ಹಬ್ಬದ ಸಂದರ್ಭದ ಶುಭ ಸಂಕೇತಗಳು.

ಈ ವರುಷದ ಆರಂಭದಲ್ಲಿಯೇ ಹೆಚ್ಚು ಮಾರಾಟವಾಗುತ್ತಿರುವ ಸರುಕು ಏನು ಗೊತ್ತೇ ‘ಕೋತಿ’ ಯ ಚಿತ್ರವಿರುವ ಒಳಚಡ್ಡಿಗಳು. ಚೀನ, ಸಿಂಗಾಪುರ, ತೈವಾನ್‌, ಮಲೇಷಿಯಾಗಳಲ್ಲಿ ಈ ಒಳಚಡ್ಡಿಗಳ ಮಾರಾಟ ಹೆಚ್ಚು ಲಾಭವನ್ನು ತಂದಿವೆ.

ನಾವು ಕೂಡ ಇವರೊಂದಿಗೆ ಸೇರಿ ‘ಗಾಂಗ್‌ ಸಿ ಫಾ ಚಾಯ್‌’ (Gong xi fa cai) ಹೊಸವರುಷದ ಶುಭಾಶಯಗಳು ತಿಳಿಸೋಣವೇ?

ಇಂಡಿಯಾ ಚೀನಾ ಭಾಯ್‌ ಭಾಯ್‌!!
ಓದಿ : Taboos and Superstitions of Chinese New Year


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+