• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೇರಿಕಾ ಚುನಾವಣೆ:ಚೂರು ಮಾಹಿತಿ

By Staff
|
  • ಬಸವರಾಜ. ಸೂ. ಮುದೇನೂರ, ವೆಸ್ಟಬರೂ

basusm@gmail.com

Basavaraj Mudenoorಕಳೆದ ನವಂಬರ 2, 2004 ರಂದು ಅಮೇರಿಕಾದ ಅಧ್ಯಕ್ಷರಾಗಿ ಜಾರ್ಜ ಬುಶ್‌ ಪುನರಾಯ್ಕೆಯಾದರು. ನಾನು ಮತ್ತು ನನ್ನ ಹಲವಾರು ಸ್ನೇಹಿತರು ಚುನಾವಣೆ ಬಗ್ಗೆ ನಮ್ಮದೇ ಆದ ಲೋಕಾಭಿರೂಡಿಯ ಹರಟೆಯಲ್ಲಿ ತೊಡಗಿದ್ದೆವು. ಮಿತ್ರನೊಬ್ಬ ಕುತೂಹಲದಿಂದ ಇಲ್ಲಿನ ಎಲೆಕ್ಷನ ಬಗ್ಗೆ ವಿವರಿಸಲು ಕೇಳಿದ. ನಾವೆಲ್ಲ ಒಂದು ಕ್ಷಣ ತಬ್ಬಿಬ್ಬಾದೆವು. ಏಕೆಂದರೆ ನಮಗೂ ಕೂಡ ಇಲ್ಲಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಗೊತ್ತಿರುವುದೂ ಸ್ವಲ್ಪ.

ಚುನಾವಣೆ ಅಂದ್ರೆ ಇನ್ನೇನು? ಅಮೇರಿಕಾ ಭಾರತದಂತೆ ಪ್ರಜಾಪ್ರಭುತ್ವ ರಾಷ್ಟ್ರವಾದ್ದರಿಂದ ಜನ ಮತ ಹಾಕ್ತಾರೆ, ಅತಿ ಹೆಚ್ಚು ಮತಗಳಿಸಿದ ಅಭ್ಯರ್ಥಿ 4 ವರ್ಷದ ಅವಧಿಗೆ ಅಧ್ಯಕ್ಷರಾಗ್ತಾರೆ. ದೂರದರ್ಶನ, ಅಂತರ್ಜಾಲ ಇತರ ಸಾಮಾನ್ಯ ಮಾಧ್ಯಮಗಳನ್ನ ಬಿಟ್ಟರೆ ನಮ್ಮೂರ ತರಾ ಅಬ್ಬರದ ಪ್ರಚಾರ, ಮೈಕಾಸುರನ ಹಾವಳಿ ಇಲ್ಲ, ಗರಿ ಗರಿಯಾದ ಖಾದಿ ಬಟ್ಟೆಯ ಪ್ರದರ್ಶನವಿಲ್ಲ. ಅದೆಲ್ಲ ನನಗೂ ಗೊತ್ತು . ಆದ್ರ 2000 ಇಸ್ವಿಯಲ್ಲಿ ನಡೆದ ಚುನಾವಣೆಯಲ್ಲಿ ಜಾರ್ಜ ಬುಶ್‌, ಅಲ್‌ ಗೋರ್‌ ಗಿಂತ ಕಡಿಮೆ ಮತ ಪಡೆದರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು ಅನ್ನೋದೆ ಆಶ್ಚರ್ಯ. ಇನ್ನು 2004 ರಲ್ಲಿ ಜಾರ್ಜ ಬುಶ್‌ ಗೆದ್ದರು ಅಂತ ಜಗತ್ತೇ ಶುಭಾಶಯಗಳನ್ನು ಕಳುಹಿಸುತ್ತಿರುವಾಗ ನನ್ನ ಅಮೇರಿಕಾದ ಸಹಪಾಠಿಯಾಬ್ಬ ಡಿಸೆಂಬರ್‌ 13 2004 ಕ್ಕೆ ಮತ್ತೊಮ್ಮೆ ಪ್ರತಿನಿಧಿಗಳು ಮತ ಚಲಾಯಿಸುತ್ತಾರೆ ಎನ್ನುತ್ತಾನೆ. ನನಗೊಂದು ಅರ್ಥ ಆಗ್ತಿಲ್ಲ, ಇಲ್ಲೇನರಾ ಚುನಾವಣ ಅವ್ಯವಹಾರ ನೆಡಿತಾವೆನ ಮತ್ತ? ರಾಜಕೀಯ ಅಂದ್ರ ಇದೆಲ್ಲ ಇರೋದೇ ಅನ್ನುವ ಗಾಳಿಸುದ್ದಿಗಳು ಹರಡುವ ಮೊದಲೇ ಇಲ್ಲಿನ ವ್ಯವಸ್ಥೆಯ ಬಗ್ಗೆ ಸ್ವಲ್ಪ ಅರ್ಥಮಾಡಿಕೊಳ್ಳೋದು ಒಳ್ಳೇದು ಅನ್ನಿಸಿತು.

ಅಮೇರಿಕಾದ ಚುನಾವಣ ವ್ಯವಸ್ಥೆ ನಾವಂದು ಕೊಂಡಷ್ಟು ಸರಳವಿಲ್ಲ. ಕನಿಷ್ಠ 270 ಪ್ರಾತಿನಿಧಿಕ (ಚುನಾಯಿತ) ಮತಗಳನ್ನು (Electoral Vote) ಪಡೆದ ಅಭ್ಯರ್ಥಿ ಅದ್ಯಕ್ಷನಾಗಬಲ್ಲ. ಒಟ್ಟು 538 ಪ್ರಾತಿನಿಧಿಕ ಮತಗಳನ್ನು ಆರಿಸಲು ಅಮೇರಿಕಾದ ಪ್ರಜೆಗಳು ಮತ ಚಲಾಯಿಸುತ್ತಾರೆ. ಪ್ರತಿಯಾಬ್ಬ ನಾಗರಿಕರಿಂದ ಚಲಾಯಿಸಲ್ಪಡುವ ಮತವನ್ನು ಜನಪ್ರೀಯ ಮತಗಳೆಂದು (Popular Vote) ಕರೆಯುತ್ತಾರೆ. ಪ್ರತಿ ರಾಜ್ಯವು ಹೊಂದಿರುವ ಶಾಸನ ಸಭೆಯ ಸದಸ್ಯರ (House of Representative) ಸಂಖ್ಯೆ ಮತ್ತು ಸೆನೆಟರ್‌ಗಳ ಸಂಖ್ಯೆ ಆಯಾ ರಾಜ್ಯದ ಒಟ್ಟು ಪ್ರಾತಿನಿಧಿಕ ಮತಗಳನ್ನು ನಿರ್ಧರಿಸುತ್ತದೆ. ಪ್ರತಿ ರಾಜ್ಯ 2 ಸೆನೆಟರ್‌ ಗಳನ್ನು ಹೂಂದಿರುತ್ತದೆ. ಶಾಸನ ಸಭೆಯ ಸದಸ್ಯರ ಸಂಖ್ಯೆ ಅಯಾ ರಾಜ್ಯದ ಜನಸಂಖ್ಯೆಯ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಹೇಳೋದಾದ್ರೆ ಮ್ಯಾಸಚುಸೆಟ್ಸ ರಾಜ್ಯ 10 ಶಾಸನಸಭೆಯ ಸದಸ್ಯರು ಹಾಗು 2 ಸೆನೆಟರ್‌ ಗಳೊಂದಿಗೆ 12 ಪ್ರಾತಿನಿಧಿಕ ಮತಗಳಿಗೆ ತಾಣವಾಗಿದೆ. ಹಾಗಾದ್ರೆ ಕ್ಯಾಲಿಫೊರ್ನಿಯ ರಾಜ್ಯದಲ್ಲಿ ಜಾರ್ಜ ಬುಶ್‌ಗೆ ಕೆಲವಾದರೂ ಮತಗಳು ಏಕೆ ಸಿಗಲಿಲ್ಲ?

ಪ್ರತಿ ರಾಜ್ಯದಲ್ಲಿ ಯಾವ ಅಭ್ಯರ್ಥಿ ಅತಿ ಹೆಚ್ಚು ಜನಪ್ರಿಯ ಮತಗಳನ್ನು ಪಡೆಯುತ್ತಾನೊ ಆತನಿಗೆ ಆ ರಾಜ್ಯದ ಎಲ್ಲ ಪ್ರಾತಿನಿಧಿಕ ಮತಗಳನ್ನು ಕೊಡಬೇಕೆಂಬ ಕಾನೂನು ಇದೆ. ಮೇನ್‌ ಹಾಗು ನಬ್ರಾಸ್ಕ ಈ ನಿಯಮವನ್ನು ಅನುಸರಿಸುವುದಿಲ್ಲ. ಜಾನ್‌ ಕೆರಿ ಕ್ಯಾಲಿಪೊರ್ನಿಯದಲ್ಲಿ ಅತಿ ಹೆಚ್ಚು ಜನಪ್ರೀಯ ಮತಗಳನ್ನು ಪಡೆದು ಆ ರಾಜ್ಯದ ಎಲ್ಲ ಪ್ರಾತಿನಿಧಿಕ ಮತಗಳನ್ನು ಪಡೆದರು. 2000 ಇಸ್ವಿಯ ಚುನಾವಣೆಯಲ್ಲಿ ದೇಶಾದ್ಯಂತ ಅತಿ ಹೆಚ್ಚು ಜನಪ್ರಿಯ ಮತಗಳನ್ನು ಪಡೆದ ಅಲ್‌ ಗೋರ್‌, ನ್ಯೂಹಾಮಶೈರ್‌ ರಾಜ್ಯದಲ್ಲಿ ಪ್ರಾತಿನಿಧಿಕ ಮತಗಳನ್ನು ಪಡೆಯದೇ ಪರಾಭವಗೊಂಡರು. ಕೆಲವೊಂದು ಸಾರಿ ದೇಶಾದ್ಯಂತ ಕಡಿಮೆ ಜನಪ್ರಿಯ ಮತಗಳನ್ನು ಪಡೆದ ಅಭ್ಯರ್ಥಿ ಹೆಚ್ಚು ಪ್ರಾತಿನಿಧಿಕ ಮತಗಳನ್ನು ಪಡೆಯಬಹುದು.

ಇದೊಂದು ವಿಚಿತ್ರವಾದ ನಿಯಮ, ಯಾಕೆ ಹೀಗೆ? ಎಲ್ಲ ರಾಜ್ಯಗಳಿಗೆ ಸಮಾನವಾದ ಅಧಿಕಾರ ಹಂಚಿಕೆ, ಸಣ್ಣ ಹಾಗು ಆರ್ಥಿಕವಾಗಿ ಹಿಂದುಳಿದ ರಾಜ್ಯಗಳಿಗೆ ಮಲತಾಯಿ ಧೋರಣೆ ಅನುಸರಿಸದಿರಲು ಸಹಾಯಕವಾಗುತ್ತದೆ ಎಂಬುದು ಸಂವಿಧಾನದ ನಂಬಿಕೆ. ಈ ನಿಯಮಕ್ಕೆ ತಿದ್ದುಪಡಿ ತರಲು 1969 ರಲ್ಲಿ ಮಂಡಿಸಿದ ಗೊತ್ತುವಳಿ ಸೋಲನುಭವಿಸಿತು.

ನವಂಬರ್‌ ತಿಂಗಳ ಮೊದಲ ಮಂಗಳವಾರ ನೆಡೆಯುವ ಚುನಾವಣೆಯು ಯಾರು ಹೆಚ್ಚು ಜನಪ್ರಿಯ ಮತಗಳನ್ನು ಗಳಿಸಿದರು ಹಾಗು ಅವರ ಪ್ರಾತನಿಧಿಕ ಮತಗಳ ಸಂಖ್ಯೆ ಎಷ್ಟೆಂಬುದನ್ನು ತಿಳಿಸುತ್ತದೆ. ಇದಾದ ನಂತರ ಡಿಸೆಂಬರ್‌ 13 ರಂದು ಎಲ್ಲ ರಾಜ್ಯದ ರಾಜಧಾನಿಯಲ್ಲಿ ಆಯಾ ರಾಜ್ಯದ ಪ್ರತಿನಿಧಿಗಳು ತಮ್ಮ ಪ್ರಾತಿನಿಧಿಕ ಮತಗಳನ್ನು ಚಲಾಯಿಸುತ್ತಾರೆ. ಇದು ಸಾಂಕೇತಿಕವಾದರು ಚುನಾವಣಾ ಪ್ರಕ್ರಿಯೆಯಲ್ಲಿ ಅತಿ ಮುಖ್ಯವಾದುದು.

ಮುಂದೆ ಜನವರಿ 6 ನೇ ತಾರೀಖು ಪ್ರಾತಿನಿಧಿಕ ಮತಗಳನ್ನು ಎಣಿಕೆ ಮಾಡಿ ಆಯ್ಕೆಯಾದವರನ್ನು ಅಧ್ಯಕ್ಷರಾಗಿ ಘೋಷಿಸಲಾಗುತ್ತದೆ. ಒಂದು ವೇಳೆ ಇಬ್ಬರು ಅಬ್ಯರ್ಥಿಗಳು ಸಮಾನಾಗಿ ಪ್ರಾತಿನಿಧಿಕ ಮತಗಳನ್ನು ಪಡೆದರೆ, ಸಂವಿಧಾನದ 12ನೇ ಅಧಿನಿಯಮದಂತೆ ಶಾಸನ ಸಭೆಯ ಸದಸ್ಯರು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಅಮೇರಿಕಾದಲ್ಲಿ ಜನರು ನೇರವಾಗಿ ಅಧ್ಯಕ್ಷರನ್ನು ಆಯ್ಕೆಮಾಡುತ್ತಾರೆ ಎಂದು ನಂಬಿದ್ದ ನಮಗೆ ಎಲ್ಲ ವಿವರಗಳನ್ನು ತಿಳಿದ ಮೇಲೆ ಸೋಜಿಗವೆನಿಸಿತು.

ನಿಮಗೂ ಅಮೇರಿಕಾದ ಚುನಾವಣೆ ಪ್ರಕ್ರಿಯೆ ಬಗ್ಗೆ ತಿಳೀತಲ್ಲ.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X