ಅಥೆನ್ಸ್‌ನಲ್ಲೊಬ್ಬ ಅಮೆರಿಕನ್ನಡಿಗ ಕ್ರೀಡಾಳು !

  • ಶ್ರೀವತ್ಸ ಜೋಶಿ; ಮೇರಿಲ್ಯಾಂಡ್‌
Vikas Gowda : Amerikannadiga Athlete in Athens !ಅಥೆನ್ಸ್‌ನಲ್ಲಿ ಇದೀಗ ಆರಂಭವಾಗಿರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಕ್ರೀಡಾಳುಗಳಲ್ಲಿ ಒಬ್ಬ ಯುವ ಅಮೆರಿಕನ್ನಡಿಗನೂ ಇದ್ದಾರೆ! ಈ ಸಲದ ಪಂದ್ಯಾಟಗಳಲ್ಲಿ ‘ಡಿಸ್ಕಸ್‌ ಥ್ರೋ’ ಇವೆಂಟ್‌ನಲ್ಲಿ ಭಾಗವಹಿಸುತ್ತಿರುವ ವಿಕಾಸ್‌ ಗೌಡ ಅವರೇ ಆ ಹೆಮ್ಮೆಯ ಕನ್ನಡಿಗ!

ಅಮೆರಿಕ ರಾಜಧಾನಿ ವಾಷಿಂಗ್‌ಟನ್‌ ಡಿಸಿ ಪ್ರದೇಶದಲ್ಲಿ ವಾಸಿಸುತ್ತಿರುವ ಶಿವೇಗೌಡ-ವಿಜಯಲಕ್ಷ್ಮಿ ದಂಪತಿಯ (ಮೂಲ ಮೈಸೂರು, 1989ರಲ್ಲಿ ಮಕ್ಕಳ ವಿದ್ಯಾಭ್ಯಾಸ-ಕ್ರೀಡಾಸಕ್ತಿಯಿಂದಾಗಿ ಅಮೆರಿಕೆಗೆ ವಲಸೆ) ಎರಡನೇ ಮಗ ವಿಕಾಸ್‌. ಹಿರಿಮಗ ವಿಕ್ರಮ್‌ ಕೂಡ ಒಬ್ಬ ಸಮರ್ಥ ಅಥ್ಲೀಟ್‌ ಆದರೂ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವಷ್ಟು ಔನ್ನತ್ಯವನ್ನೇರಿದ್ದು ಕಿರಿಯವ ವಿಕಾಸ್‌ನ ವಿಶೇಷ ಸಾಧನೆ.

ನಾರ್ತ್‌ ಕೆರೊಲಿನಾದ ಚಾಪೆಲ್‌ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಯಾಗಿರುವ ವಿಕಾಸ್‌ನ ಸಹಪಾಠಿಗಳು, ಆ ಕಾಲೇಜಿನ ಹಳೆವಿದ್ಯಾರ್ಥಿಗಳೆಲ್ಲ ಒಲಿಂಪಿಕ್ಸ್‌ನಲ್ಲಿ ಪದಕಗಳ ಕೊಯ್ಲು ಮಾಡಿದ/ಮಾಡಲಿರುವ ಘಟಾನುಘಟಿಗಳೇ. ಮೈಕೇಲ್‌ ಜೋರ್ಡಾನ್‌, ಎಲೆನ್‌ ಜಾನ್ಸನ್‌... ಇತ್ಯಾದಿಯೆಲ್ಲ ಅದೇ ಕಾಲೇಜಿನಿಂದ ಅರಳಿದ ಪ್ರತಿಭೆಗಳು. ‘ಅದ್ಭುತವಾದ ಕೋಚಿಂಗ್‌...’ ಎನ್ನುತ್ತಾರೆ ಶಿವೇಗೌಡ ತನ್ನ ಮಗನ ತರಬೇತುದಾರರ ಬಗ್ಗೆ. ಅಮೆರಿಕದಲ್ಲಿದ್ದೂ ವಿಕಾಸ್‌ ಪ್ರತಿನಿಧಿಸುವುದು ಭಾರತದೇಶವನ್ನು ಎಂಬುದು ಇನ್ನೂ ಸ್ವಾರಸ್ಯದ, ಅಭಿಮಾನದ ಸಂಗತಿ. ಅದಕ್ಕೆಂದೇ ಗೌಡ ಕುಟುಂಬದವರು ಗ್ರೀನ್‌ಕಾರ್ಡ್‌ನಲ್ಲಷ್ಟೆ ಇದ್ದಾರೆಯೇ ಹೊರತು ಅಮೆರಿಕನ್‌ ಸಿಟಿಜನ್‌ಶಿಪ್‌ ತಗೊಂಡಿಲ್ಲ !

ಮೊನ್ನೆ ಒಲಿಂಪಿಕ್ಸ್‌ ಉದ್ಘಾಟನೆಯ ದಿನ ಅವರ ಮನೆಗೆ (ಮೇರಿಲ್ಯಾಂಡ್‌ನ ಫ್ರೆಡೆರಿಕ್‌ ಎಂಬ ಪಟ್ಟಣ) ಫೋನ್‌ ಮಾಡಿದಾಗ ಅಥೆನ್ಸ್‌ಗೆ ಹೋಗಲು ಸಿದ್ಧವಾಗುತ್ತಿದ್ದರು ವಿಕಾಸ್‌ನ ಹೆತ್ತವರು. ಆಗಸ್ಟ್‌ 21ರಂದು ಡಿಸ್ಕಸ್‌ ಥ್ರೋ ಇವೆಂಟ್‌ ಆರಂಭವಾಗುವುದರಿಂದ ಆ ಹೊತ್ತಿಗೆ ಅಥೆನ್ಸ್‌ ತಲುಪುವಂತೆ ಹೊರಡುತ್ತಾರವರು. ಒಲಿಂಪಿಕ್ಸ್‌ನಲ್ಲಿ ಹೆಮ್ಮೆಯ ಸುಪುತ್ರನ ಸಾಧನೆಯ ಬಗ್ಗೆ ತುಂಬುವಿಶ್ವಾಸ ಹೊಂದಿರುವ ಶಿವೇಗೌಡ-ವಿಜಯಲಕ್ಷ್ಮಿ ದಂಪತಿಯ ಆಕಾಂಕ್ಷೆ-ಭರವಸೆಗಳಲ್ಲಿ ನಾವೂ ಭಾಗಿಗಳು.

ವಿಕಾಸ್‌ ಪದಕವಿಜೇತನಾಗಿ ಹೊರಹೊಮ್ಮಲಿ. ಕನ್ನಡ-ಅಮೆರಿಕನ್ನಡ-ಕರ್ನಾಟಕ-ಭಾರತದ ಕೀರ್ತಿಪತಾಕೆ ಎತ್ತರಕ್ಕೇರಲಿ.

ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+