ಕೆಸಿಎ: ಪ್ರಜಾಪ್ರಭುತ್ವದ ಇನ್ನೊಂದು ಅಧ್ಯಾಯ
- ದಟ್ಸ್‌ಕನ್ನಡ ಬ್ಯೂರೊ
ಕನ್ನಡ ಸದಸ್ಯರು ಹೆಚ್ಚು ಸಂಖ್ಯೆಯಲ್ಲಿರುವ ಹಾಗೂ ಕ್ರಿಯಾಶೀಲ ಕನ್ನಡಿಗರೇ ತುಂಬಿರುವ ಕನ್ನಡ ಕೂಟಗಳನ್ನು ಹೊಂದಿರುವ ದೇಶ ಉತ್ತರ ಅಮೆರಿಕ. ಅಲ್ಲಿನ ಕೆಲವು ಕನ್ನಡ ಕೂಟಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಚಕಾರ ಬಂದಿರುವ ಆರೋಪಗಳು ಪೂರ್ಣ ನಿಜವೂ ಅಲ್ಲ , ಪೂರ್ಣ ಸುಳ್ಳೂ ಅಲ್ಲ. ಕನ್ನಡ ನಾಡಿನ ಹೊರಗೆ ಅತ್ಯಂತ ಹೆಚ್ಚು ಕನ್ನಡ ಸಂಘಗಳನ್ನು ಹೊಂದಿರುವ ಅಮೆರಿಕೆಯಲ್ಲಿ ಅನೇಕ ಕನ್ನಡ ಕೂಟ/ ಸಂಘಗಳು ಪ್ರಜಾಪ್ರಭುತ್ವದ ರೀತಿನೀತಿಗಳನ್ನು ತಪ್ಪದೆ ಪಾಲಿಸುತ್ತವೆ ಎಂಬ ಪ್ರಶಂಸೆಗೆ ಪಾತ್ರವಾಗಿರುವುದುಂಟು. ದಕ್ಷರು ಮತ್ತು ದೂರದೃಷ್ಟಿ ಹೊಂದಿರುವ ಪದಾಧಿಕಾರಿಗಳು ನೆಲೆಗೊಂಡಿರುವ ಸಂಘಗಳಲ್ಲಂತೂ ಡೆಮಾಕ್ರಸಿಯ ಲವಲವಿಕೆ ಎದ್ದು ಕಾಣುತ್ತದೆ.
ಈ ಪೈಕಿಯ ಕನ್ನಡ ಸಂಘಗಳಲ್ಲಿ ಒಂದೆನಿಸಿರುವ ದಕ್ಷಿಣ ಕ್ಯಾಲಿಫೋರ್ನಿಯ ಕನ್ನಡ ಸಂಘ ಇವತ್ತು ಸುದ್ದಿಯಲ್ಲಿದೆ.
ಎರಡು ವರ್ಷಗಳಿಗೊಮ್ಮೆ ನಡೆಯುವ ನಿರ್ದೇಶಕ ಮಂಡಳಿ ಸದಸ್ಯರ ಚುನಾವಣೆಗಳು ಏಪ್ರಿಲ್ 17ರಂದು ನಡೆಯಲಿದೆ. ಅಂದೇ ಯುಗಾದಿ ಹಬ್ಬಾಚರಣೆ ಕಾರ್ಯಕ್ರಮವೂ ಏರ್ಪಾಟಾಗಿದೆ. KCA ಕನ್ನಡ ಕೂಟದ 9 ಮಂದಿ ನಿರ್ದೇಶಕ ಸ್ಥಾನಗಳಿಗೆ ಈ ಬಾರಿ 12 ಮಂದಿ ಆಕಾಂಕ್ಷಿಗಳಿದ್ದಾರೆ. 2002-04 ನೇ ಸಾಲಿನಲ್ಲಿ ಇಬ್ಬರು ಕನ್ನಡತಿಯರು (ಜಯಂತಿ ಮತ್ತು ಲಕ್ಷ್ಮಿ ಕೃಷ್ಣಮೂರ್ತಿ) ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. 2004-06 ಸಾಲಿನ ಸ್ಪರ್ಧಾ ಕಣದಲ್ಲೂ ಇಬ್ಬರು ಮಹಿಳಾಮಣಿಗಳಿದ್ದಾರೆ. ಮಹಿಳಾ ಪ್ರಾತಿನಿಧ್ಯ ಅದೇಕೊ ಏರುತ್ತಿಲ್ಲ !
ಕೆಸಿಎ ಕನ್ನಡ ಸಂಘದ ಏಳಿಗೆಗೆ ದುಡಿಯಲು ಕಂಕಣ ಬದ್ಧವಾಗಿರುವ ಸ್ಪರ್ಧಿಗಳ ಸ್ಥೂಲ ಪರಿಚಯ ಮಾಡಿಕೊಡುವ ಪ್ರಯತ್ನವನ್ನು ದಟ್ಸ್‌ಕನ್ನಡ ಮಾಡಿದೆ. ಸ್ವತಃ ತಾವೇ ಅಭ್ಯರ್ಥಿಯಾಗಿರುವ ಉತ್ಸಾಹಿ ಕನ್ನಡಿಗ ವಲ್ಲೀಶ ಶಾಸ್ತ್ರಿ ರವಾನಿಸಿರುವ ಕ್ಯಾಂಡಿಡೇಟ್‌ಗಳ ಕಿರು ಪರಿಚಯ ಇಲ್ಲಿದೆ- ಓದಿ.
12 ಮಂದಿ ಅಭ್ಯರ್ಥಿಗಳ ಪೈಕಿ 9 ಮಂದಿಯ ಪರಿಚಯ ಮತ್ತು ಅವರ ಭಾವಚಿತ್ರಗಳನ್ನು ಮವಾಸು ಅವರ ಚಿತ್ರ-ವರದಿಯಲ್ಲಿ ಕಾಣುವಿರಿ. ಉಳಿದ ಮೂರು ಮಂದಿ ಯಾರು ? ಕನ್ನಡ ಕೂಟದ ಅಧಿಕೃತ ವೆಬ್‌ಜಾಲ ನೋಡಿ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications