• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನೆಯೆ ಮೊದಲ ಪಾಠಶಾಲೆ...

By Staff
|
 • ಜಯಾ ನಾರಾಯಣ್‌,ಸನ್ನಿವೇಲ್‌, ಕ್ಯಾಲಿಪೋರ್ನಿಯ
 • Jaya Narayan, Californiaನಮ್ಮ ಮಕ್ಕಳಿಗೆ ಸರಿಯಾದ ತಿಳುವಳಿಕೆ ನೀಡುತ್ತಿದ್ದೇವೆಯೆ?

  ಮಕ್ಕಳ ತಪ್ಪು ಒಪ್ಪುಗಳಲ್ಲಿ ಪೋಷಕರಾದ ನಮ್ಮ ಪಾಲೆಷ್ಟು? ಮಕ್ಕಳು ಮಾಡುವ ಎಲ್ಲಾ ತಪ್ಪುಗಳೂ ನಮ್ಮದಲ್ಲದಿದ್ದರೂ ಕೆಲವೊಂದರಲ್ಲಿ ನಮ್ಮ ಪಾಲಿರುವುದು ನಿಜಾ ತಾನೇ ! ಮಕ್ಕಳನ್ನು ಸ್ಪರ್ಧಾತ್ಮಕವಾಗಿ ಬೆಳೆಸುವ ಆತುರದಲ್ಲಿ ಮಕ್ಕಳ ಹತ್ತಿರ ತಿಳಿದೋ ತಿಳಿಯದೆಯೋ ಮಕ್ಕಳನ್ನ ಇತರ ಮಕ್ಕಳಿಗೆ ಹೋಲಿಕೆ ಮಾಡಿ ವಿಶ್ಲೇಷಿಸುವುದು ಅಂಥಾ ತಪ್ಪುಗಳಲ್ಲೊಂದು.

  ಮಕ್ಕಳ ಮನಸ್ಸು ತುಂಬ ಸೂಕ್ಷ್ಮ. ಅದಕ್ಕೇ ಹೇಳುವುದು ಮೂರು ವರುಷದ ಬುದ್ಧಿ ನೂರು ವರುಷದ ತನಕ, ಎಂದು. ಪಾಲಕರಾದ ತಿಳಿವಳಿಕೆ ಇರುವ ನಾವು, ಕೆಲವೊಮ್ಮೆ ಇತರ ಮಕ್ಕಳ ಜೊತೆ ನಮ್ಮ ಮಕ್ಕಳನ್ನು ಹೋಲಿಕೆ ಮಾಡುತ್ತೇವೆ. ಇದು ಎಷ್ಟರಮಟ್ಟಿಗೆ ಸಮಂಜಸ? ಮಕ್ಕಳ ಮೇಲೆ ನಾವು ತುಂಬ ಆಸೆಯಿಟ್ಟಿರುತ್ತೇವೆ. ಅಪೂರ್ಣವಾದ ನಮ್ಮ ಕನಸುಗಳನ್ನೂ ಸಹ ನಮ್ಮ ಮಕ್ಕಳಲ್ಲಿ ಕಾಣಲು ಬಯಸುತ್ತೇವೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ; ಹಾಗಿರುವಾಗ ಅವರಲ್ಲಿ ಆಸೆಯಿಡುವುದು ಕನಸು ಕಾಣುವುದು ತಪ್ಪಲ್ಲ. ಮಕ್ಕಳಿಗೆ ರೂಲ್ಸ್‌ ಇರುವುದೂ ಸರಿಯೆ. ಆದರೆ ಅದಕ್ಕೊಂದು ಮಿತಿ ಬೇಡವೆ?

  ನಮ್ಮ ಆಸೆ, ಕನಸು ಅವರಲ್ಲಿ ಕಾಣದಾದಾಗ ಅಥವಾ ಮಕ್ಕಳು ಕೆಲವೊಮ್ಮೆ ನಿಯಮವನ್ನ ಸರಿಯಾಗಿ ಪಾಲಿಸಿದೆ ಇರುವಾಗ ಅವರಿಗೆ ತಿಳಿಸಿ ಹೇಳುವ ಬದಲು ಹೋಲಿಕೆ ಮಾಡಲು ಪ್ರಾರಂಭಿಸುತ್ತೇವೆ. ಉದಾಹರಣೆಗೆ- ಒಂದು ಮಗು ಚೆನ್ನಾಗಿ ಕಥೆ ಹೇಳುತ್ತದೆ ಎಂದುಕೊಳ್ಳೋಣ. ಆದರೆ, ನಮ್ಮ ಮಗುವಿಗೆ ಚೆನ್ನಾಗಿ ಕಥೆ ಹೇಳಲು ಬರದಿದ್ದಾಗ ನಮ್ಮ ಮಕ್ಕಳಿಗೆ ಕಥೆ ಹೇಳಲು ಬರುವದಿಲ್ಲವಲ್ಲ ಎನಿಸುತ್ತದೆ. ನಿನಗೆ ಆ ಮಗುವಿನ ಹಾಗೆ ಚೆನ್ನಾಗಿ ಕತೆ ಹೇಳಲು ಬರುವದಿಲ್ಲ , ಅವನ ಹಾಗೆ ನೀನೂ ಇರಬೇಕು ಎನ್ನುತ್ತೇವೆ. ಇಂಥ ಹೋಲಿಕೆಯಿಂದಾಗಿ ಕೆಲವು ಮಕ್ಕಳು ಚಿಕ್ಕಂದಿನಲ್ಲೇ ಕೀಳರಿಮೆ ಬೆಳೆಸಿಕೊಳ್ಳುತ್ತವೆ. ಓ ನನಗೆ ಚೆನ್ನಾಗಿ ಕತೆ ಹೇಳಲು ಬರುವದಿಲ್ಲ ಎಂದುಕೊಳ್ಳುವ ಮಗು ಮುಂದೆಂದೂ ಒಳ್ಳೆಯ ಕಥೆಗಾರನಾಗುವುದು ಕಷ್ಟಸಾಧ್ಯವಾಗುತ್ತದೆ. ಇತರ ಮಕ್ಕಳನ್ನು ಅನುಸರಿಸಲು ತೊಡಗುತ್ತದೆ. ಈ ಅನುಕರಣೆ ಎಷ್ಟರಮಟ್ಟಿಗೆ ವಿಕೋಪಕ್ಕೆ ಹೋಗುತ್ತದೆಂದರೆ- ಮುಂದೊಂದು ದಿನ ಇತರ ಮಕ್ಕಳು ಹಟ ಮಾಡಿದಾಗ ಇದೂ ಸಹ ಕೂಗಲಾರಂಭಿಸುತ್ತದೆ. ಆಗ ನಾವು ಹಾಗೆ ಕೆಟ್ಟ ನಡತೆ ಮಾಡಬಾರದು ಎನ್ನುತ್ತೇವೆ. ಆದರೆ ನಾವೇ ಹೇಳಿಕೊಟ್ಟಿದ್ದೇವಲ್ಲ ? ಮಗು ಗೊಂದಲದಲ್ಲಿ ಬೀಳುವುದು ಇಂಥ ಸಂದರ್ಭಗಳಲ್ಲೇ.

  ಜಾಣ ಅಪ್ಪಅಮ್ಮ ಮಗುವಿನ ಬಳಿ ಈ ರೀತಿ ಹೇಳಬಹುದು- ನೋಡು, ನಿನ್ನ ಗೆಳೆಯ ಅಥವಾ ಗೆಳತಿಯ ನಡತೆ ಎಷ್ಟೊಂದು ಚೆನ್ನಾಗಿದೆ, ಅಲ್ಲವೆ ? ಎಂದು ಮಕ್ಕಳಿಗೆ ಸನ್ನಡತೆಯ ಉಪಯೋಗವನ್ನು ಮನದಟ್ಟು ಮಾಡಬೇಕು.ಅದೇರೀತಿ, ಇತರ ಮಕ್ಕಳ ಪ್ರತಿಭೆಗಳ ಕುರಿತು ನಮ್ಮ ಮಕ್ಕಳ ಗಮನವನ್ನು ಸೆಳೆದು, ನಿನ್ನ ಗೆಳೆಯನ ಹತ್ತಿರ ಹೋಗಿ ಅವನ ಪ್ರತಿಭೆಯನ್ನು ಅಭಿನಂದಿಸು ಎಂದು ಹೇಳಬೇಕು. ಇದು ಎರಡು ರೀತಿಯಲ್ಲಿ ಒಳ್ಳೆಯದು. 1) ನಮ್ಮ ಮಕ್ಕಳಿಗೆ ಇನ್ನೊಬ್ಬರನ್ನು ಹೊಗಳುವುದನ್ನು ಕಲಿಸಿಕೊಡುತ್ತದೆ 2) ಮಗುವಿಗೆ ಸ್ಫೂರ್ತಿ ದೊರಕಬಹುದು.

  ಮಕ್ಕಳ ಹತ್ತಿರ ನೀನೂ ಅದನ್ನು ಕಲಿಯಬಯಸುವಿಯ ಎಂದು ಕೇಳಿ. ಹೂಂ ಅಂದರಂತು ಸರಿ, ಇಲ್ಲದಿದ್ದರೆ ನಿಮಗೆ ನಿಮ್ಮ ಮಕ್ಕಳು ಅದನ್ನು ಕಲಿತರೆ ಚೆನ್ನ ಎನ್ನಿಸಿದರೆ ಸಾವಕಾಶವಾಗಿ ಮಗುವಿಗೆ introduce ಮಾಡಿ. ಮಕ್ಕಳಿಗೆ ಮುಂದೆ ತನ್ನಿಂದ ತಾನೆ ಆಸಕ್ತಿ ಬರುವುದು. ಮಕ್ಕಳು ಚಿಕ್ಕದೊಂದು ಕೆಲಸ ಮಾಡಿದರೂ ಪ್ರೋತ್ಸಾಹ ನೀಡಿ.

  ನಾನು ಗಮನಿಸಿದ ಒಂದು ಸಂಗತಿ ಹೀಗಿದೆ. ನನ್ನ ಮಗ ಮನೆಯಲ್ಲಿ ಇದ್ದ electrical ವಸ್ತುಗಳನ್ನೆಲ್ಲ ಹಾಳು ಮಾಡಿದ್ದಾನೆ (tape recoder, computer ...). ನಾನು ನನ್ನ ಪರಿಚಯದವರೊಬ್ಬರು ಬಂದಾಗ ಇವನು ಇದನ್ನೆಲ್ಲ ಹಾಳು ಮಾಡಿದ್ದಾನೆ ಎಂದು ಅವರ ಮುಂದೆ ಹೇಳಿದೆ. ಅವನು ಇದೊಂದು ಘನಂದಾರಿ ಕೆಲಸವೆಂದು ತಿಳಿದು ಮನೆಗೆ ಯಾರಾದರು ಬಂದಾಗ ಅವರನ್ನು ಕರೆದು ತಾನು ಹಾಳು ಮಾಡಿದ್ದನ್ನೆಲ್ಲಾ ತೋರಿಸುತ್ತಾನೆ. ಇನ್ನೊಬ್ಬರ ಹತ್ತಿರ ಮಕ್ಕಳ ಬಗ್ಗೆ ಮಾತನಾಡಬೇಕಾದರೆ, ಮಕ್ಕಳು ಅಲ್ಲೇ ಇದ್ದರೆ ಅವರ ಒಳ್ಳೆಯ ಗುಣವನ್ನು ಮಾತ್ರ ಹೇಳಬೇಕು- ಇದರಿಂದ ಅವರ ಒಳ್ಳೆಯ ಗುಣ ಹೆಚ್ಚುತ್ತದೆ. ನಮ್ಮನ್ನೇ ನೋಡಿ ಯಾರಾದರೊಬ್ಬರು ಗುರುತಿನವರು ನಮ್ಮ ಕೆಲಸದ ಬಗ್ಗೆ ಒಳ್ಳೆಯ ಮಾತನಾಡಿದಾಗ ನಮಗೆ ಖುಶಿಯಾಗಿ ಆ ಒಳ್ಳೆಯ ಕೆಲಸವನ್ನು ಮಾಡಲು ಸ್ಫೂರ್ತಿ ಬರುವದಿಲ್ಲವೆ?

  ಈ ಹೋಲಿಕೆ ಎಂಬುದು ಇನ್ನೊಂದು ಪರಿಣಾಮ ಬೀರುವುದು. ನಾವು ನಮ್ಮನ್ನು ಇತರರಿಗೆ ಹೋಲಿಸಿದಾಗ ನಮ್ಮ ವಿಚಾರ ಅಥವಾ ನಮ್ಮ ಪ್ರತಿಭೆ ಸೀಮಿತವಾಗುವದು. ನಮ್ಮ ಮಕ್ಕಳಿಗೆ try your best ಅನ್ನಬೇಕೇ ಹೊರತು ನೀನೇ ಮೊದಲು ಬರಬೇಕು ಅನ್ನಬಾರದು. ಆಗ ಅವರ ಆಸಕ್ತಿಗೆ ಮಿತಿಯೆಂಬುದೇ ಇಲ್ಲ. ಮಾನವನ ಮೆದುಳಿನ ಸಾಮರ್ಥ್ಯದ 2% ಅಷ್ಟೇ ಬಳಕೆಯಾಗಿರುತ್ತದೆ. ಉಳಿದ 98% ಹಾಗೇ ಇರುವದು. ಅಷ್ಟೂ ಬುದ್ಧಿಯನ್ನ ಉಪಯೋಗಿಸಿದರೆ ಅವನ ಪ್ರತಿಭೆಗೆ ಸೀಮೆಯೇ ಇಲ್ಲ. ಮಕ್ಕಳು ತಪ್ಪುಮಾಡಿದರೂ ಕಿರುಚಾಡದೇ ಆದಷ್ಟು ಸಹನೆಯಿಂದ ಹೇಳಿ. ಆ ಸಹನೆ ಮುಂದೊಂದು ದಿನ ಅವರಲ್ಲೂ ಬೆಳೆಯುವುದು.

  ಮುಖಪುಟ / ಎನ್‌ಆರ್‌ಐ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more